ಪುಟ:Vimoochane.pdf/೩೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ಸಾಹಿತೀನ ಬ್ಯಾ೦‍‍ಡೇಜ್ ಕಟ್ಟಿದ್ಮೇಲೆ ಬಿಟ್ಬಟ್ರ೦ತೆ. ಮುನಿ ಸ್ವಾಮಪ್ಪ ಆಲೇ ಇದಾನೆ---ಇನೆರಡು ವಾರ ಅಲೇ ಇರ್ತಾನೆ. ಆದಲ್ದೆ ಒಂದ್ನಾಲಕ್ಜನ ಕೂಲಿಕಾರರಿಗೂ ಏಟು ಜೋರಾಗಿಯೇ ಬಿದ್ದಿದೆ. ಅವರಲ್ಲಿ ಇಬ್ಬರು ನಮ್ಮವರು."

"ನಮ್ಮವರು ಅಂದರೆ?"

ಹಾಗೆ ಕೇಳುತ್ತ ತಿರುಗಿ ನೋಡಿದೆ. ಶ್ರೀಕಂಠನ ಹುಬ್ಬುಗಳು ಗಂ‍‍ಟಿಕ್ಕಿದುವು.

"ಚಂದ್ರೂ? ಸತ್ಯ ಹೇಳು. ನಿನ್ನ ಮನಸ್ನೆಲ್ಲೇನಿದೆ?"

"ಯಾಕೆ ಹಾಗೆ ಕೇಳ್ತೀಯಾ?"

ಶ್ರೀಕಂಠ ಒಂದುಕಣ ಮೌನವಾಗಿದ್ದ.

"ಹೋಗಲಿ ಬಿಡು ಆ ವಿಷಯ."

ಆ ದಿನ ಕೆಲಸಗಾರರು ಯಾರೂ ಕಾರಖಾನೆಗಳಿಗೆ ಹೋಗಿರಲಿಲ್ಲ. ಮಾಲೀಕರಿಗೆಲ್ಲ ಆದರಿಂದ ಸಂತೋಶವಾಗಿತ್ತು. ಅಂತೂ ಬಂದಿತ್ತು ಅವರು ಬಯಸಿ ಇದಿರುನೋಡುತಿದ್ದ ಮುಶ್ಕರ. ಯುದ್ದದ ಮೊದಲ ದಿನದಲ್ಲಿ ಅವರಿಗೇ ಜಯವಾಗಿತ್ತು."ಕ್ರಾಂತಿಗೆ ಜಯವಾಗಲಿ" ಎಂದು ಘೋಷಿಸುತಿದ್ದವರು ಗಾಯಗೊಂಡು ಬಿದ್ದಿದ್ದರು.

ಸಂಜೆ ಕಾರಖಾನೆಯ ಯಜಮಾನರೆಲ್ಲರ ಸಭೆ ಕರೆದರು. ಶ್ರೀಕಂಠ ಕಾರ್ಯದಶೀಯಾಗಿ ಹೋಗಬೇಕಾಗಿದ್ದ ನಾನು ಕರುಳಿನ ಕಾಹಿಲೆಯ ಕಾರಣ ಹೇಳಿ ತಪ್ಪಿಸಿಕೊಂಡೆ. ಆದರೆ ನನ್ನ ಮನಸ್ಸು ಇನ್ನೆಲ್ಲೋ ಚಲಿಸುತಿತ್ತು... ಆ ಇಕ್ಕಟ್ಟಾದ ರಸ್ತೆ--ಓಣಿ--ಮೂಲೆ ಮನೆ--ನಾರಾಯಣ....

ಗಾಯಗೊಂಡು ಬಿದ್ದಿದ್ದ ನಾಣಿಯನ್ನು ನೋಡಲು ನಾನು ಹೋದೆ. ಉದ್ದೇಶಪೂರ್ವಕವಾಗಿಯೋ ಏನೋ, ಗಾಯಗೊಂಡವ ರನ್ನು ಪೋಲೀಸರು ಬಂದಿಸಿರಲಿಲ್ಲ.

ಮುಂತಲೆಗೆ ಬ್ಯಾಂಡೆಜು ಕಟ್ಟಿದ್ದ ನಾಣಿ, ನಾಟಕದೊಂದು ಪಾತ್ರದ ಹಾಗೆ ಕುಳಿತಿದ್ದ. ಸಂಜೆಯ ಆ ಹೊತ್ತಿನಲ್ಲಿ ಆ ಮನೆ