ಪುಟ:Vimoochane.pdf/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯೊಂದು ಜನಸಾಗರವಾಗಿತ್ತು. ಅಷ್ಟೊಂದು ಹೆಂಗಸರು-ಗಂಡ ಸರು.......ಗೋಡೆಗೊರಗಿ ನಾರಾಯಣ ವಿರಮಿಸಿದ್ದ. ಆದರೆ ಆದನ್ನು ವಿರಾಮವೆನ್ನುವುದರಲ್ಲಿ ಅರ್ಥವಿರಲಿಲ್ಲ. ಆತ ಚಿಂತಾಕ್ರಾಂತನಾಗಿ ದ್ದುದು ಸ್ವಷ್ಟವಾಗಿತ್ತು. ಹಾಗಿದ್ದರೂ ಉಳಿದವರು ಧೃತಿಗೆಡಬಾರ ದೆಂದು ಆತ ಮುಗುಳುನಗೆಯ ನಟನೆ ಮಾಡುತಿದ್ದ.

ಉಣ್ಣೆಯ ಉಡುಗೆ ಕೊಟ್ಟ ತಾನು ಆ ಹಿನ್ನೆಲೆಯಲ್ಲಿ ವಿಚಿತ್ರ ವಾಗಿ ತೋರುತ್ತಿದ್ದೆ. ಆದರೆ, ನಾಣಿಗೆ ನನ್ನನು ನೋಡಿದಾಗ ಸಂತೋಷವಾಯಿತು.

"ಬಾರಯ್ಯ ಚಂದ್ರೂ, ಘಳಿಗೆ ನೋಡಿ ಬಂದ ಹಾಗೆ ಬಂದಿದೀ ಯಲ್ಲಯ್ಯ."

"ಬೆಳಿಗ್ಗೆ ಪೇಪರ್ನಲ್ಲಿ ಓದ್ದೆ. ಔಟ್-ಪೇಷೆಂಟ್ ಅಗಿಯೇ ಇದ್ದೀಯಾ ಅನ್ನೋದೂ ತಿಳೀತು."

"ನಾನೂ ಪೇಪರ್ನ್ಲ್ಲಿ ಓದ್ದೆ-ಎರಡರಲ್ಲೂ. ಆದರೆ, ಅಲ್ಲಿ ರೋದು ಸುಳ್ಳು.ಪತ್ರಿಕೆಗಳ ಮೂಲಕ ನಮ್ಮ ವಿರುದ್ದ ಪ್ರಚಾರ ಹ್ಯಾಗೆ ಆಗತ್ತೆ ಅನ್ನೋದನ್ನ ಆ ಉದಾಹರಣೆ ಕೊಟ್ಟು ಇವರಿಗೆಲ್ಲಾ ನಾನು ವಿವರಿಸ್ತಿದ್ದೆ......ಕೆಲಸಗಾರರೊಳಗೆ ಜಗಳವಂತೆ-ಜಗಳ !"

"ಹಾಗೆ ಅಗಿರಿಲ್ವೇನು ?"

"ಒಳ್ಳೇ ಪ್ರಶ್ನೆ ಕೇಳ್ತೀಯಲ್ಲಪ್ಪ....ಸಭೆ ಮುಗಿಯೋ ಹ್ತೊತಿಗೆ ವೇದಿಕೆ ಮೇಲೆ ಧಾಳಿ ಮಾಡ್ದೋರು ಗುಂಡರು.ಮಾಲೀಕರು ದುಡ್ದು ಕೊಟ್ಟು ನೇಮಿಸ್ದೋರು. ನಾವೆಲ್ಲ ಅವರ್ನ ತಡೆಯೋಕೆ ಹೋಗಿದ್ದೇ ತಡ,ಎರಡನೇ ಪಟಾಲಂ ಬಂತು-ಪೋಲೀಸರು .ಮೊದಲು ಕಾನೂನು ನೆಮ್ಮದಿಯ ಭಕ್ಷಕರು,ಆ ಮೇಲೆ ಅದರ ರಕ್ಷಕರು!..."

ಆ ಘಟನೆಯ ಬಗ್ಗೆ ನಾನು ಊಹಿಸಿದ್ದು ಸರಿಯಾಗಿಯೇ ಇತ್ತು.

"ಇನ್ನು ಹೋಗೀಪ್ಪಾ ನೀವೆಲ್ಲ.....ಎಲ್ಲರೂ ಮನೆಗೆ ಹೋಗಿ.... ರಾತ್ರೆ ಕಮಿಟಿ ಸಭೆ ಸೇರಿ ತೀರಾನಿಸ್ತೀನಿ...ಮನೆಗೆ ಹೋಗೀಪ್ಪಾ ಎಲ್ಲಾ......"