ಪುಟ:Vimoochane.pdf/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆ ಜನರದು ಅದೆಂಥ ಸರಳ ಹೃದಯ! ನಿಸ್ವಾರ್ಥಬುದ್ಧಿ ಯಿಂದ ತಮ್ಮ ಪಕ್ಷ ವಹಿಸಿದವರ ಬಗ್ಗೆ ಅವರು ತೋರಿಸುವ ಆ ಪ್ರೇಮಾದರ ವಿಶಿಷ್ಟವಾಗಿತ್ತು. ಬಾಳ್ವೆಯಲ್ಲಿ ಸೋತು ಸುಣ್ಣವಾಗಿದ್ದ ಆ ಕೂಲಿಕಾರ ಹೆಂಗಸರು ತಮ್ಮೊಳಗೆ ಕಚ್ಚಾಡುವುದನ್ನು ನಾನು ಕಂಡಿದ್ಧೆ . ಒಬ್ಬರ ವಿಷಯದಲ್ಲಿ ಇನ್ನೊಬ್ಬರು ಒರಟು ಒರಟಾಗಿ ವೆರ್ತಿಸುವುದನ್ನು ನೋಡಿದ್ದೆ. ಕಪಟ--ಆಸೂಯೆ--ಮೋಸ ಅವರಲ್ಲಿ ಧಾರಳವಾಗಿತ್ತು. ಹೀಗಿದ್ದರು ತಾವೆಲ್ಲರೂ ಒಂದು ಎಂಬ ಭಾವನೆ ಅವರಲ್ಲಿ ಬೆಳೆದು ಬಂದಿತ್ತು. ಕೆಲವೇ ವರ್ಷಗಳ ಹಿಂದೆ ಪರಕೀಯ ನಾಗಿದ್ದ ನಾರಾಯಣನನ್ನು ಅವರೀಗ ತಮ್ಮವನೆಂದೇ ಭಾವಿಸಿದ್ದರು .

ಆ ಕೆಲವರು ಹೆಂಗಸರ ಕಣ್ಣುಗಳಲ್ಲಿ ತುಂಬಿ ಬಂದ ಕಣ್ಣೀರು ......

" ನಮ್ಮ ದೇವರು ಕಣಪ್ಪಾ ನೀನು. ಆ ಪಾಪಿಗ್ಳ ವಂಸ ನಾಸ್ವಾಗೆಇದ್ವಾತಾ ? ಆ ಬಗ್ವಂತ ಅವ್ರಿಗೆ ಸಾಸ್ತಿ ಮಾಡ್ದೆ ಇದ್ದಾನಾ?"

....ಅಂತೂ ಬಲು ಹೊತ್ತಾದ ಮೇಲೆ ಮನೆ ಖಾಲಿಯಾಯಿತ್ತು. ಆದರೂ ಒಬ್ಬ ಹುಡುಗ ಮಾತ್ರ ಬಾಗಿಲಲ್ಲೆ ನಿಂತಿದ್ದ.

"ನೀನೂ ಹೋಗು ಯೂಸುಫ್"

" ಓಯ್ತೀನಿ ಸಾರ್...ಹೊತ್ತಾದ್ಮೇಕೆ ಓಯ್ತೀನಿ..." ಕಮಲ ಒಳ ಬಾಗಿಲು ತೆರೆದು ನಮ್ಮನ್ನು ನೋಡುತ್ತ ನಿಂತಿ ದ್ದಳು

ಔಪಚಾರಿಕೆವಾಗಿ, " ಚೆನ್ನಗಿದಿರಾ ಅಮ್ಮ" ಎ೦ದೆ.

" ಫುಶ್ನೆ ಚೆನ್ನಾಗಿದೆ ! " ಎಂದಳು ಆಕೆ.

"ಆಯ್ಯೋ! " ಎಂದು ಅವಳು ಅಳುತಿರಲಿಲ್ಲ. ಆ ಸ್ಥೈರ್ಯ ಅಭಿಮಾನ ಪಡುವಂತಿತ್ತು.

ಅದರೆ ಅವಳು ಸಂಕೋಚವಿಲ್ಲದೆ ನನ್ನೊಡನೆ ದೂರುಕೊಟ್ಟಳು.

" ನೀವು ಸ್ವಲ್ಬ ಹೇಳ್ಬಾರ್ದ? ನಿನ್ನೆ ಹೀಗಾಯ್ತು. ನನ್ನ ತಾಳಿ ಗಟ್ಟೀಂತ ತೋರುತ್ತೆ, ಆದ್ದರಿಂದ ಆಷ್ಟೆಕ್ಕೇ ಮುಗೀತು. ಪೂತಾ೯ ಚೇತರಿಸಿಕೊಳಳ್ಳೋದಕ್ಕೂ ಇಲ್ಲ ಇನ್ನೂ, ಅಷ್ಟ್ರರಲ್ಲೆ .. ಕಮಿಟಿ ಮೀಟಿಂಗ್ ಅಂತ ಹೊರಟಿದಾರೆ."