ಪುಟ:Vimoochane.pdf/೩೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತುಂಟ ಹುಡುಗ ವಾದಿಸುವಂತೆ ನಾಣೆ ಹೇಳುತಿದ್ದ:

"ಜಟ್ಕಾ ಮಾಡ್ಕೊಂಡು ಹೋಗ್ತಿನೀ, ಕಮಲೂ."

"ಅದೊಂದು ಉಳಿದಿದೆ ನಮ್ಮ ಬಾಗ್ಯಕ್ಕೆ."

ನಾನಾದರೋ ಶ್ರೀಕಂಠನ ಜತೆಯಲ್ಲಿ ಕಾರಿನಲೆ ಓಡಾಡು ವವನು. ಆದರೆ ನಾಣಿಯ ಪಾಲಿಗೆ ಜಟಕಾ ಪ್ರವಾಸವೂ ದೊಢ್ಹ ವಿಷಯವೇ. ಅದು ಶ್ತೀಮಂತಿಕೆಯ ಲಕ್ಷಣವೆಂದೇ ಕಮಲೆಯ ಅಭಿಪ್ರಯ.

ಆತಿಥ್ಯ ಸ್ವೀಕರಿಸಲು ನಾನು ಅಲ್ಲಿ ನಿಲ್ಲಲಿಲ್ಲ. ಶ್ರೀಕಂಠನೆ ಲ್ಲಾದುರೂ ಮಾಲೀಕರ ಸಭೆ ಮುಗಿಸಿ ನನ್ನ ಮನಗೆ ಬರಬಹುದೆಂಬ ಸಂದೇಹ ನನಗಿತ್ತು.

ನಾನು ಅವಸರ ಅವಸರವಾಗಿ ಹೊರಟು ನಿಂತುದದನ್ನು ಕಂಡು ನಾಣಿಹೇಳಿದೆ:

"ಚಂದ್ರೊ....ಕೃಷ್ಣರಾಜರು ಗೊತ್ತೇನೋ ನಿನಗೆ?"

"ಹೆಸರು ಕೇಳಿದೀನಿ, ಅವರು ಬೆರೆದದ್ದನ್ನ ಓದಿದೀನಿ. ಯಕೆ?"

ಅವರಿಗೂ ನಿನ್ನೆ ಏಟುಬಿತ್ತು ಪಾಪ! ನಾವಾದರೂ ಇದಕ್ಕೇ ಇರೋರು. ಆದರೆ ಆತನ್ನ ಆಮಂತ್ರಣಕೊಟ್ಟು ಕರೆದಿದ್ವಿ. ಹೇ ಗಾಯ್ತು ನೋಡು!".

ನಾನು ಉತ್ತರವೀಯಲಿಲ್ಲ. ಆದರೆ ಬರಿಯ ಮೌನವೂ ಸಹಾನು ಭೂತಿಯಾಗಿ ತೋರಬಹುದಲ್ಲವೆ?

"ಮೊನ್ನೆ ಮಾತ್ನಾಡ್ತಾ ಇಧ್ಹಾಗ ನಿನ್ನೆ ವಿಷಯ ಬಂತು. ಸ್ಕೂಲ್ನಲ್ಲಿ ನಾವಿದ್ದಾಗ ನೀನು ಎಷ್ಟೊಂದು ಕಷ್ಟಪಟ್ಟಿದ್ದೆ....ಆದನ್ನೆಲ್ಲಾ ಅವರಿಗೆ ಹೇಳ್ದೆ.... ನಿನ್ನೆ ಸಾಹಸಮಯ ಜೀವನದ ಕಥೆ ಕೇಳಿ ಅವರೆಗೆ ಸಂತೋಷವಾಯ್ತು. ಯಾವತ್ತಾದರೂ ಭೇಟಿಮಾಡಿಸು ಅಂದರು..."

ನನ್ನ ಸಾಹಸ ಜೀವನದಕಥೆ ಇವನಿಗೇನು ತಿಳಿಯಬೇಕು? ಆದರೂ ಅವನಿಗೆ ತಿಳಿದಿದ್ದ ಅಲ್ಪಸ್ವಲ್ಪ ವಿಚಾರವೇ ಅವನ ದ್ರುಷ್ಟಿಯಲ್ಲಿ ದೊಡ್ಡ ವಿಷಯವಾಗಿತ್ತು......ಆ ಕೃಷ್ಣರಾಜರನ್ನು ಕಂಡು ನನಗೆ ಆಗ ಬೇಕಾದ್ದಾದರೂ ಏನು? ಆದರೆ, ಅವರ ಕರಪತ್ರ ಬರೆಯುವ ಚೆಲು.