ಪುಟ:Vimoochane.pdf/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆದರೆ ಇಲ್ಲೊಂದು ವ್ಯತ್ಯಾಸವಿತ್ತಲ್ಲವೇ? ಶೀಲ-ಸಾವಿತ್ರಿ ಯರು ಬೇರೆ, ಕಮಲಾ ಬೇರೆ. ಕಮಲೆಯ ಹೃದಯದಲ್ಲಿ ದುಗುಡ ತುಂಬಿದ್ದರೂ ಮುಖದ ಮೇಲೆ ಅದು ಕಾಣಿಸುತ್ತಿರಲ್ಲಿಲ. ಸಹಸ್ರ ಜನರ ಸಹಾನುಭೂತಿಯ ಆಸರೆಯಲ್ಲಿ ಆಕೆ ಸಂಕಷ್ಟಗಳನ್ನು ದಿಟ್ಟತನ ದಿಂದ ಇದಿರಿಸುತ್ತಿದ್ದಳು.

ಸಹಸ್ರ ಜನರ ಸಹಾನುಭೂತಿ ......

ಆ ಸಹಾನುಭೂತಿ ದಿನ ಕಳೆದಂತೆ ಕರಗಿ ಮಾಯವಾದುದನ್ನು ಕಂಡೆ.

ಬಂಧನಕ್ಕೊಳಗಾದವರನ್ನು ಸರಕಾರ ಹೊರಬಿಡಲಿಲ್ಲ. ಮುಷ್ಕ್ರ ರವೇನೋ ನಡೆಯಿತು . ನಡೆದು ಮಾಲೀಕರಿಗೆಲ್ಲ್ಲ ಸಂತೋಷವನ್ನೇ ಉಂಟುಮಾಡಿತು. ಸಭೆ ಮೆರವಣೆಗೆಗಳಿರಲಿಲ್ಲ. ಯೂನಿಯನ್ನಿನ ಕರಪತ್ರಗಳಿರಲಿಲ್ಲ. ಸ್ಫೂರ್ತಿ ಹುಟ್ಟಿಸುವ ಹಾಡುಗಳಿರಲಿಲ್ಲ.....

ಶ್ರೀಕಂಠ ವಿಜಯದ ನಗು ನಗುತ್ತ ಹೇಳಿದ.

" ಮುಷ್ಕರ ನಿಧಿ ಕೂಡಿಸ್ತಾ ಇದಾರಂತೆ ಕಣೋ...ನಾವೂ ಅವರ ಡಬ್ಬಕ್ಕೆ ನಾಲ್ಕು ಕಾಸು ಹಾಕೋಣವೇನು ?"

" ಸತ್ತ ಹೆಣಾನ ಕಂಡು ನಗೋ ಚೈತನ್ಯ ನಿನಗಿದೆ ಕಂಠಿ."

" ಅಳೋದು ಮಾಮೂಲು ಕಣಪ್ಪ. ನಗೋದು ವೈಶಿಷ್ಟ್ಯಾ." ಅವನ ಆ ಮಾತುಗಳು ಬೇಸರ ಬಾರಿಸುತಿದ್ದುವು.

"ನೀನು ರಾಜಕೀಯದಲ್ಲಿ ಒಂದು ಕೈ ನೋಡ್ಬೇಕಾಗಿತ್ತು ಕಂಠಿ."

"ಅದೊಂದು ಉಳಿದಿದೆ ಎನ್ನು. ನನಗ್ಯಾತಕ್ಕಯ್ಯಾ ರಾಜ ಕೀಯ ? ರಾಜಕೀಯದವರು ಮನೆಬಾಗಿಲಿಗೀ ಬರ್ತರೆ . ಬೇಕಾದವಾರ್ನ ಕೊಂಡ್ಕೋಬಹುದು. ತಾತಾ-ಬಿರ್ಲಾರ್ನ ನೋಡು. ಅವರೇನು ಸ್ವತಃ ಎಲೆಕ್ಷನ್ನಿಗೆ ನಿಂತ್ಕೋತಾರೇನು?"

ಶ್ರೀಕಂಠ,ತಾತಾ-ಬಿರ್ಲರ ಮಾತನ್ನಾಡುವುದು, ಅವರ ಮೇಲ್ಸಂಗ್ತಿಯನ್ನು ನೋಡುವುದು, ಸ್ವಾಭಾವಿಕವಾಗಿತ್ತು.

ಏನೋ ಯೋಚಿಸುತಿದ್ದ ಶ್ರೀಕಂಠ, ವಕ್ರವಾಗಿ ನಕ್ಕು ಹೇಳಿದ: