ಪುಟ:Vimoochane.pdf/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

" ಈ ವರ್ಷದ ಕೊನೇಲಿ ಸಾರ್ವತ್ರಿಕ ಎಲೆಕ್ಷನ್ ಬರತ್ತೆ, ಗೊತ್ತಾ ‍ಚಂದ್ರು?"

"ಹೌದು, ವಯಸ್ಕರ ಮತದಾನ ಪದ್ದತಿ ಪ್ರಕಾರವಾದ ಎಲೆಕ್ಷನ್ನು."

"ಹುಂ! ಮೊನ್ನೆ ಕಾಂಗ್ರೆಸ್ ಸಮಿತಿ ಕಡೆಯಿಂದ ಕೆಲವರು ಬಂದಿದ್ರು......"

"ಏನು ಎಲೆಕ್ಷನಿಗೆ ಸಿದ್ಧತೇನಾ?"

"ಅಲ್ಲವೆ ಮತ್ತೆ? ಅದೂ ಎಂಥ ಸಿದ್ಧತೆ ಅಂತೀಯಾ? ಶಾರಾ ದಾನ ಪಶ್ಚಿಮ ವಾಡ್ನಾಲ್ಲಿ ಉಮೇದುವಾರಳಾಗಿ ನಿಲ್ಲಿಸ್ಬೇಕೂಂತ ಅವ ರೆಲ್ಲ ಅಪೇಕ್ಷೆಪಟ್ಟಿದಾರಂತೆ."

"ಓ!"

"ನಾವೇನೂ ಮಾಡ್ಪೇಕಾದ್ದೆಲ್ಲ. ಪ್ರಚಾರದ ಭಾರವೆಲ್ಲ ಅವರದೆ. ಸುಮ್ಮನೆ ಒಪ್ಪಿಕೊಂಡರಾಯ್ತು ನಾವು. ಜತೆಯಲ್ಲೆ ಒಂದೆರಡು ಲಕ್ಷ ಅವರ ಜನರಲ್ ಫಂಡಿಗೆ ಸುರಿದರಾಯ್ತು!"

"ಅತ್ತಿಗೆಗೆ ಗೊತ್ತೇನು ಈ ವಿಷಯ?"

"ಗೊತ್ತಿಲ್ವೆ! ಅವಳು ಈಗಾಗ್ಲೇ ಚುನಾಯಿತಳಾಗಿ ಅಸೆಂಬ್ಲಿ ಪಾರ್ಟೀಲಿ ಭಾಷಣ ಕೊಡೋದ್ನ ಕಲ್ಪಿಸಿ ಕೂತಿದಾಳೆ. ಅಷ್ಟೇ ಅಲ್ಲ ಮಂತ್ರಿಮಂಡಲ್ದಲ್ಲಿ ಶಾನಿರೋದನ್ನ ಕನಸಲ್ಲಿ ಕಾಣ್ತಿದ್ದರೂ ಇರ ಬಹದು."

"ಏನೋಪ್ಪ-ಈ ವಿಷಯಗಳೆಲ್ಲ!"

ಶ್ರಮಜೀವಿಗಳ ಆ ಹೋರಾಟ ಮಣ್ಣುಗೂಡಿತು. ಹೊಗೆ ಯೂಡದ ಗುಡಿಸಲುಗಳು....ಬೆನ್ನಿಗೆ ಅಂಟಿಹೋದ ಹೊಟ್ಟೆಗಳು..... ಕಂಬನಿಯನ್ನು ಮೌನವಾಗಿ ಸುರಿಸಿದ ಕಣ್ಣುಗಳು....

ಮಾಲೀಕರು ನೇಮಿಸಿದ ಗುಂಡರ ಪ್ರತಾಪ ಹೆಚ್ಚಿತು. ಕೆಂಪು ಬಾವುಟದ ಯೂನಿಯನ್ನಿನ ಕಚೇರಿ ಪುಡಿಪುಡಿಯಾಯಿತು.

ಇಪ್ಪತ್ತೋದು ದಿನ ಮುಷ್ಕರವಾದಮೇಲೆ ಓದಗಿದ ಸನ್ನಿ