ಪುಟ:Vimoochane.pdf/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವೇಶ, ಎಲವೂ ತಣ್ಣಗಿದ್ದಂತೆ ತೋರಿದಾಗ ಜಿಲ್ಲಾಧಿಕಾರಿಗಳು ಸಭೆ ಸೇರಿಸುವುದರ ಮೇಲಿನ ನಿಷೇಧಾಜ್ಞೆಯನ್ನು ರದ್ದುಗೊಳಿಸಿದರು. ಸ್ವಲ್ಪಹೊತ್ತಿನಲ್ಲೆ ಸಂಘದ ಹೆಸರಿನಲ್ಲೊಂದು ಕರಪತ್ರ ಹೊರಟಿತು. ಆ ಸಂಜೆಯ ಮುಂದಿನ ಹಾದಿಯನ್ನು ಗೊತ್ತುಮಾಡುವುದಕ್ಕಾಗಿ ಎಲ್ಲ ಕೆಲಸಗಾರರ ಬಹಿರಂಗ ಸಭೆಯನ್ನು ಕರೆಯಲಾಗಿತ್ತು.

ಸಭೆ ಜರಗಿತು.ಸಂಘದ ನಾಯಕರ ಬಿಡುಗಡೆಯಾಗಿದೆ ಎಂದು ಸುಳ್ಳುಹೇಳಿ ಕೆಲಸಗಾರರನ್ನು ಸಭೆಗೆ ಆಕರ್ಷಿಸಿದ್ದರು. ಕತ್ತ ಲಾದಾಗ ಸಭೆ ಆರಂಭವಾಯಿತು. ಶ್ರೀಕಂಠನೂ ನಾನೂ ಬಯಲಿನ ಹೊರ ಅವರಣದಲ್ಲಿ ಕಾರಿನೂಳಗೆ ಕುಳಿತು, ಧ್ವನಿವಾಹಕ ಯಂತ್ರ ದಿಂದ ಕೇಳಿಬರುತಿದ್ದ ಭಾಷಣಗಳಿಗೆ ಕಿವಿಗೊಟ್ಟವು.

"ಈ ಸಾರೆ ಮೈಕ್ರೋಫೋನಿಗೆ ನಾವೇ ದುಡ್ಕೊಟ್ಟೆವು ಕಣೋ. ಸಾಧುಪ್ರಾಣಿಗ್ಳು ಅವರ ಸಂಘದಲ್ಲಿ ಮೂರು ಕಾಸೂ ಉಳಿದಿರ್ಲಿಲ್ಲ. ಎಲ್ಲ ಹಣವನ್ನೂ ಆ ಮುಖಂಡರು ಎತ್ಪಾಕ್ಬಿಟ್ರಂತೆ......."

ಶ್ರೀಕಂಠನ ಆ ವಿವರಣೆ ಕೇಳಿದಮೇಲೆ, ಭಾಷಣವೀಯುತಿದ್ದ ವಾಚಾಳಿಯ ಮಾತಿನ ವೈಖರಿಗೆ ನನಗೆ ಅರ್ಥವಾಯಿತು. ಮುಖಂ ಡರ ಬಂಧನವಾದುದಕ್ಕೆ ಆತ ಆಕ್ರೋಶಮಾಡಿದ. ಮಾಲೀಕರು ನಿಷ್ಕರುಣಿಗಳೆಂದು ಹೇಳಿದ.ಆಮೇಲೆ ಇಪ್ಪತ್ತೊಂದು ದಿನಗಳ ಉಪ ವಾಸದಿಂದ ಆದ ಸಂಕಷ್ಟಗಳನ್ನು ಶೋಕರಸಪ್ರಧಾನವಾಗಿ ವರ್ಣಿ ಸಿದ.ಹಾಗೆ ಮಾಡಿದಾಗ ಆತನ ಕಂಠ ಗದ್ದದಿತವಾಯಿತು. ಒಂದು ನಿಮಿಷ ತಡೆದು ನಿಂತು ಕಣ್ಣೊರೆಸಿಕೊಂಡು ಅವನು ಮಾತು ಮುಂದು ವರಿಸಿದ.....

"ನೋಡಿದ್ಯೇನೋ ಮಾತಿನ ಧೋರಣೆ? ರಾಜಕೀಯದಲ್ಲಿರೋ ದಕ್ಕು ಲಾಯಕ್ಕಾಗಿದ್ದಾನೆ ಆಸಾಮಿ."

"ಯಾರು ಈತ?"

"ಸುಂದರರಾಜ ಅಂತ.ಹಿಂದೆ ಒಂದು ಕಾಲ್ಪಲ್ಲಿ ಎಸ್ಮೀನಾ ಮಿಲ್ನಲ್ಲಿ ಸಂಘ ಕಟ್ಟಿದ್ದ.ಕೆಂಪು ಬಾವುಟ ಬಂದ್ಮೇಲೆ ಅವನು ಮೂಲೆಗುಂಪಾದ ಇನ್ನು ಮುಂದೆ ಈತನೇ ಸಂಘದ ಕಾರ್ಯದರ್ಶಿ