ಪುಟ:Vimoochane.pdf/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸತ್ವಹೀನರಾಗಿ ಸಪ್ಪೆಯಾಗಿದ್ದ ಬಡವರು.....

ಅದಾಗಿ ಸ್ವಲ್ಪ ದಿನಗಳಮೇಲೆ ಮುನಿಸ್ವಾಮಪ್ಪ,ನಾಣಿ ಮತ್ತಿತ ರರ ಬಿಡುಗಡೆಯಾಯಿತು.

....ಮತ್ತೆ ಶಂಕೆಗಳು ಮೂಡಿದುವು......ಪ್ರಾಯಶಃ ಪ್ರಪಂಚ ಹೀಗೆಯೇ ಇರಬೇಕೇನೊ.ಪ್ರಬಲವಾದ ಒಂದೇ ಶಕ್ತಿಗೆ ಮಣಿದು ಎಲ್ಲರೂ ಬಾಳ ಬೇಕೇನೋ. ಅದನ್ನು ತಿಳಿದೂ ತಿಳಿದೂ ಆ ಜನರು ಹೋರಾಡುವುದರಲ್ಲಿ ಅರ್ಥವೇನಿತ್ತು ? ನಾರಾಯಣನಿಗೆ ಅಷ್ಟೂ ತಿಳಿಯದೆ?

ಆ ಒಂದು ದಿನ ಹೋಟೆಲಿನಲ್ಲಿ ಯುವಕನೊಬ್ಬ "ಚೇತನಾ" ಎಂಬ ಪತ್ರಿಕೆಯನ್ನೋದುತಿದ್ದ. ಬಣ್ಣಬಣ್ಣದ ಹೊದಿಕೆಯಿತ್ತು ಹೊರಗೆ. ಬಲು ಆಸಕ್ತಿಯಿಂದ ಆ ಯುವಕ ಯಾವುದೋ ಎರಡು ಪುಟಗಳನ್ನು ಒಂದಕ್ಷರವೂ ಬಿಡದಂತೆ ಓದುತಿದ್ದ.

ಸಮೀಪ ಕುಳಿತಿದ್ದ ನಾನು, "ಯಾವ ಲೇಖನ ಓದ್ತಾ ಇದೀರಾ?" ಎಂದು ಕೇಳಿದೆ

"ಕತೆ ಸಾರ್, ಕೃಷ್ಣರಾಜರ ಕತೆ ಬಂದಿದೆ!' 'ಸೋಲಿನ ಬಳಿಕ' ಅಂತ. ಚೆನ್ನಾಗಿದೆ ಸಾರ್!"

ಕೃಷ್ಣರಾಜರ ಕತೆ. ಓದಬೇಕೆನ್ನಿಸಿತು. ಆದರೆ ಆ ಯುವಕ ಪತ್ರಿಕೆಯೊಡನೆ ಹೊರಟು ಹೋದ. ಅದು ಆತನ ಸ್ವಂತದ ಪತ್ರಿಕೆ ಯಾಗಿತ್ತು.

ನಾನು ಬೀದಿಯುದ್ದಕ್ಕೂ ಸ್ವಲ್ಪ ದೂರ ನಡೆದು ಹೋದೆ. ಅಲ್ಲೊಂದು ಪತ್ರಿಕೆಯಂಗಡಿ ಇತ್ತು, ಶೇಷಗಿರಿಯದಲ್ಲ--- ಬೇರೆ ಯಾರದೋ...... ಚೌಕದಲ್ಲಿ ಹುಡುಗರು ನಿಂತಿದ್ದರು--ಪತ್ರಿಕೆ ಮಾರುವ ಹುಡುಗರು...ಊರ ಚೌಕಗಳು..."ಪೇಪರ್ ಬೇಕೇ ಸಾರ್ ಪೇಪರ್ !"

ಮತ್ತೆ ಬಾಲ್ಯದ ನೆನಪುಗಳು.......

ನಾನು ಆ ಅಂಗಡಿಯಿಂದ "ಚೇತನಾ" ಪತ್ರಿಕೆಯ ಒಂದು