ಪುಟ:Vimoochane.pdf/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮನುಷ್ನಾದ್ಮೇಲೆ ಒ೦ದು ಶ್ರದ್ದೆ ಇರಲೇಬೇಕು. ನ೦ಬುಗೆ ಇರಲೇ ಬೇಕು. ಅದಿದ್ದರೆ ಜೀವನ ತು೦ಬಿಕೊ೦ಡಿರ್ತದೆ."

" ಶ್ರದ್ದೆ-ನ೦ಬುಗೆ ಶೋಷಕ ವರ್ಗದವರಲ್ಲೂ ಇರತ್ತಲ್ವ ಕೃಷ್ಣ ರಾಜ್?

ಅದು ನಾರಾಯಣ ಕೇಳಿದ ಪ್ರಶ್ನೆ. ಆ ಪ್ರಶ್ನೆ ಎಷ್ಟೊಂದು ಸಮಂಜಸವಾಗಿತ್ತು! ಅದರ ಜತೆಯಲ್ಲೆ" ಕೃಷ್ಣ್ರರಾಜ" ಎಂಬ ಸಲಿ ಗೆಯ ಸಂಭೋಧನೆ....ನನ್ನ ಹೃದಯ ಸ್ವಲ್ಪ ನೊಂದಿತು. ಅ ಯುವಕ ಕೃಷ್ಣರಾಜನನ್ನು ಸಲಿಗೆಯಿಂದ ಸಂಭೋಧಿಸುವ ಯೊಗ್ಯತೆ ನಾರಾಯಣನಿಗಿದೆ- ನನಗಿಲ್ಲ....

"ಸರಿಯಾದ ಪ್ರಶ್ನೆ ನಾರಾಯಣ. ಒಳ್ಳಯ ಶ್ರದ್ದೆ - ನಂಬುಗೆ ಇದ್ದ ಮಾನವರು ಸದುದ್ದೇಶ ಸಾಧಿಸುತ್ತಾರೆ. ಜನರನ್ನು ಮೆಟ್ಟ ತುಳಿಯೋದರಲ್ಲೇ ಶ್ರದ್ದೆ ಇರೋರು ಸಮಾಜಕಂಟಕರಾಗ್ತಾರೆ. ನ್ಯಾ ಯದ ಪಕ್ಪ ಹೆಚ್ಚು ಬಲಶಾಲಿಯಾದ ಹಾಗೆ ಅನ್ಯಾಯದ ಪಕ್ಷ ಒಡೆದು ಮೂರಾಬಟ್ಟೆಯಾಗಿ ಮಣ್ಣು ಮುಕ್ತದೆ. ಅಲ್ವೆ?"

....ಸಾಧ್ಯವಿತ್ತೆ ಹಾಗಾದರೆ ? ನಾನು ಇನ್ನಾದರೂ ಜೀವನದಲ್ಲಿ ಶ್ರದ್ದೆ - ನಂಬುಗೆಯನ್ನು ಬಳೆಸಿಕೊಳ್ಳುವುದು ಸಧ್ಯವಿತ್ತೆ? ಇನ್ನು ಮೇಲಾದರೂ ನಾನು ನೇರವಾದೊಂದು ಹಾದಿಯಲ್ಲಿ ಸಾಗಬಲ್ಲೆನೆ?

ಆ ಮೇಲೆ ಅವರ ಹಾರೈಕೆ;

"ಬರೀರಿ ಚಂದ್ರಶೇಖರ್. ನೀವು ಬರೀರಿ...." ಆತ, ನನ್ನ ಜೀವನದ ಅನುಭವಗಳನ್ನು ನಾನು ಬರೆದರೆ ಅದೊಳ್ಳೆಯ ಸಾಹಿತ್ಯವಾದೀತೆಂದು ನನಗೆ ನಂಬುಗೆ ಹುಟ್ಟಸುವಂತೆ ಹೇಳಿದ ರೀತಿ...

ನಮ್ಮ ಜೀವನದ ಅನುಭವಗಳು!ಅವುಗಳೇನೆಂದು ತಿಳಿಯದ ನಾರಾಯಣ ಏನನ್ನೋ ಕಲ್ಪಿಸಿಕೋಂಡು ಕೃಷ್ಣರಾಜರಿಗೆ ಹೇಳಿರಬೇಕು. ಆದರೆ ನನ್ನ ಅನುಭವಗಳು ನನೋಬ್ಬನ ಆಸ್ತಿ ಮಾತ್ರ ಅಗಿದ್ದುವಲ್ಲವೆ? ನನ್ನ ಮನಸ್ಸಿನ ಆಳದ ಒಳಹೊಕ್ಕು, ಹೃದಯವನ್ನು ಕೆದಕಿ, ಆ ಸ್ಮರಣೆಯ ಭಂಡಾರದೊಳಕ್ಕೆ ಏನೇನಿತ್ತೆಂದು ಯಾರು ಕಂಡಿದ್ದರು?....