ಪುಟ:Vimoochane.pdf/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರದ್ದೆ-ನಂಬುಗೆ ಇಲ್ಲದ ಮಾನವನಿಗೆ ಜೀವನದಲ್ಲಿ ಜಿಗುಪ್ಸೆ...

ಹಾಗಾದರೆ ಮುಂದೇನಾಗಬೇಕಿನ್ನು?

ನನ್ನ ಬಾಳ್ವೆಯ ಅಂತಿಮ ಘಟ್ಟದ ಆ ಅತಿ ಮುಖ್ಯ ಘಟನೆಯ ನಾನು ಇನ್ನು ಬರೆಯಬೇಕು .

ಅದೂ ಎಂಥ ಘಟನೆ!

ಸಂಜೆಯಾಗಿ, ಕತ್ತಲು ಬಂದು, ನಿಮಿಷಗಳು ಘಂಟೆಗಳಾಗು ತ್ವಿವೆ.ಈಗ-ಈ ಸೋಮವಾರ. ಸಹಿಸಲಾಗದ ಹೊಟ್ಟಿಯ ನೋವಿ ನಿಂದ ನನ್ನ ಲೇಖನಿ ತಡವರಿಸುತ್ತಿದೆ.ನಾನು ಬಾರಿಬಾರಿಗೂ ಬಾಲ್ವೆಯ ಪಯಣದಲ್ಲಿ ತಡವರಿಸಿದ ಹಾಗೆ . ಆದರು ನಾನು ಆ ಘಟನೆಯ ಬಗ್ಗೆ ಬರೆಯ ಬೇಕು.

ನಗು ಬರುತ್ತಿದೆ ನನಗೆ. ನೋವಿನಲ್ಲೂ ನಗು. ದೀಪ ಗಾಳಿ ಯಲ್ಲಿ ತೂರಾಡುತ್ತಿದೆ. ನನ್ನ ಜೀವ ತೂರಾಡುತ್ತಿರುವ ಹಾಗೆ. ಆ ಗಾಳಿ ಎಲ್ಲಿಂದಲೊ ಮೂತ್ರದ ವಾಸನೆಯನ್ನು ಕಳ್ಳತನದಿಂದ ಹೊತ್ತುತರುತ್ತಿದೆ . ದೊಡ್ಡ ಬೀಗ ಹೊತ್ತಿರುವ ಬಾಗಿಲಿನ ಈ ಕಂಬಿಗಳು. ಅದರ ಹಿಂದೆ ಬರೆಯುತ್ತ ಕುಳಿತಿರುವ ನಾನು. ಎಂಥ ಸನ್ನಿವೇಶ! ನನಗೆ ನಗು ಬರುತ್ತಿದೆ.

ಎಷ್ಟೊಂದು ಅನಿರೀಕ್ಶಿತವಾಗಿ ಆ ಘಟನೆಯಾಗಿತ್ತು! ನಾವು ಬೀದಿ ನಡೆಯುತ್ತಿರುವಾಗ, ಎಲ್ಲಿಯೊ ನಿಂತಿದ್ದ ಹೋರಿ ಓಡಿ ಬಂದು ನಮಗೆ ತಿವಿದ ಹಾಗೆ!

ಆ ಹೋರಿ ನನಗೆ ತಿವಿದ ಬಗೆ!

ರಾತ್ರೆ ಹನ್ನೆರಡು ಹೊತ್ತು ಆ ದಿನ.

ಯಾರೋ ಧಪಧಪನೆ ಬಾಗಿಲು ಬಡೆಯುತ್ತಿದರು.

ನಾನೆದ್ದು, ದೀಪ ಹಾಕಿ ಕದ ತೆರೆದೆ.

ಶ್ರೀಕಂಠ ನಿಂತಿದ್ದ ಹೊರಗೆ ಥರಥರನೆ ನಡುಗುತ್ತಾ...ಕಾರಿರ ಲಿಲ್ಲ...ಆತ ನಡೆದೇ ಬಂದಿದ್ದ..ತಲೆಗೂದಲು ಕೆದರಿತ್ತು. ತುಟಿ ಗಲ್ಲುಗಳು ಅದುರುತಿದ್ದುವು. ಕಣ್ಣುಗಳಲ್ಲಿ ಕೆಂಪು ಹರಡಿ ನೋಡಲು