ವಿಷಯಕ್ಕೆ ಹೋಗು

ಪುಟ:Vimoochane.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೮
ವಿಮೋಚನೆ

ನಗರಕ್ಕೆ ಹೋಗುವ ಹಾದಿ ಖರ್ಚುಕೊಟ್ಟು ಪುಣ್ಯ ಕಟ್ಟಿಕೊಳ್ಳಲು ಯಾರಿಗೂ ಇಷ್ಠವಿರಲಿಲ್ಲವೇನೋ. ಅವರೆಲ್ಲ ತುತ್ತು ಅನ್ನವನ್ನಷ್ಟೇ ಕೊಟ್ಟು, ಆ ಪುಣ್ಯವೇ ಸಾಕೆಂದರು. ನಡೆದು ನಡೆದು ನಾವು ನಗರ ಸೇರಿದೆವು.

ಆಗ ಮುಚ್ಚಂಜೆಯಾಗಿತ್ತು. ನಗರವನ್ನು ಸಮಪಿಸುತ್ತಿದ್ದಂತೆ ತಂದೆ ಹೇಳಿದ.

"ಚಂದ್ರೂ, ಊರು ಬಂತ್ಕಣಪ್ಪ. ಚಂದ್ರೂ ಆಂತೂ ಬಂದ್ವಿ ಕಣಪ್ಪಾ"

ಅಂತೂ ನಾವು ಬಂದೆವು. ದೂರ ದೂರವಿದ್ದ ಮನೆಗಳ ಬದಲು
ಹೆಚ್ಚು ದಟ್ಟನೆಯ ಹಲವು ಕಟ್ಟಡಗಳನ್ನು ಕಂಡೆ. ಅವೂ ಎಷ್ಟೊಂದು
ಎತ್ತರವಾಗಿದ್ದವು! ಸಣ್ಣದಾಗಿ ವೇಗವಾಗಿ ಓಡುತ್ತಿದ್ದ ವಾಹನಗಳನ್ನು
ಕಂಡೆ, ಅವುಗಳಿಗೆ ಬೆಳಕಿನ ಎರಡು ಕಣ್ಣುಗಳಿರುತ್ತಿದ್ದವು. ದೊಡ್ಡ
ದೊಡ್ಡ ಪಂ, ಪಂ, ಮೊಟಾರುಗಳನ್ನು ಕಂಡೆ. ಬೀದಿಯುದ್ದಕ್ಕೂ
ಎತ್ತರದಿಂದ, ಕಂಬಗಳಿಗೆ, ತಗಲಿ ಬತ್ತಿಯೇ ಇಲ್ಲದ ದೀಪಗಳು ಉರಿಯು
ತ್ತಿದ್ದವು. ಜನರೆಲ್ಲಾ ಬೇರೆ ರೀತಿಯಾಗಿ ಯಾವುದೋ ಬೇರೆ
ದೇಶದವರಾಗಿ ಕಾಣುತ್ತಿದ್ದರು. ನನ್ನ ಪಾಲಿಗೆ ಅದು ಹೊಸ
ಪ್ರಪಂಚ.

"ಇನ್ನು ಇಲ್ಲೇನಪ್ಪ ನಾವು ಇರೋದು. ಚಂದ್ರು, ಆ ಕಾರು ನೋಡ್ದಾ? ನೀನು ದೊಡ್ಡೊನಾದ್ಮೇಕೆ ಆಂಥದೇ ಕಾರು ಕೊಣ್ಕೋ ಬೇಕು. ಏನಂತಿಯಾ?"

ನಾನು 'ಊಂ' ಎಂದೆ. ಆದರೆ ತಾಯಿಯ ನೆನಪು ಬಂದು ನನ್ನ ಗಂಟಲು ಬಿಗಿದಿತ್ತು. ಬಲು ಉದಾರವಾಗಿ ಬರುತ್ತಿದ್ದ ಕಂಬನಿ ನನ್ನ ತಂದೆಯ ತಲೆಯ ಮೇಲೆ ತೊಟ್ಟಕ್ಕಿತೋ ಏನೋ. ನನ್ನ ಕಾಲು ಹಿಡಿದು ಜಗ್ಗಿಸಿ, ಮೇಲಕ್ಕೆ ತಲೆಯರತ್ತಿ ನನ್ನನ್ನೇ ನೋಡಿ, ಕೇಳಿದ.

ಯಾಕ್ಲ, ಯಾಕೆ ಅಳೋದು?"

ಹಾಗೆ ಆತ ಕೇಳದ್ದೇನೊ ನಿಜ. ಆದರೆ ಕಾರಣ ಅವನಿಗೆ