ಪುಟ:Vimoochane.pdf/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೩೪

ವಿಮೋಚನೆ

ಅವಮಾನಿತನಾದ ಶ್ರೀಕಂಠ,ಅವಳ ಕೊಠಡಿಗೆ ನುಗ್ಗಿದ.

"ಕರೆದಿದ್ದು ಕೇಳಿಸ್ಲಿಲ್ಲ ನಿಂಗೆ."

ನಿಲುವುಗನ್ನಡಿಯ ಮುಂದೆ ಕುಳಿತು, ಆಭರಣಗಳನ್ನು ಕಳ

ಚುತ್ತಲಿದ್ದ ಅವಳು ಹೇಳಿದಳು.

"ಕೆಲಸದಾಕೆ ಸಾಯಂಕಾಲ್ವೇ ಹೊರಟೋಗಿದ್ದಾಳೆ."

ಆ ಉತ್ತರ ಕೇಳಿ ಶ್ರೀಕಂಠನ ಮೈ ಉರಿಯಿತು.ಆತ ಕುಪಿತ

ನಾಗಿ ಶಪಿಸಿದ.

ಅವಳ ಬಳಿ ಸಾರುತ್ತಾ ಶ್ರೀಕಂಠ ಗುಡುಗುವ ಧ್ವನಿಯಲ್ಲಿ

ಕೇಳಿದ:

"ಯಾವ ನಾಯಿ ಜತೇಲಿದ್ದೆ ಸಾಯಂಕಾಲ?"

ಆಕೆ ಜಿಗಿದೆದ್ದು ಉತ್ತರಕೊಟ್ಟಳು-.-ಶ್ರೀಕಂಠನ ಕೆನ್ನೆಯ

ಮೇಲೆ ಬಲವಾದ ಏಟು.ಆತ ಅವಳನ್ನು ಮಾತನಾಡಗೊಡಲಿಲ್ಲ.

ಅವನ ಕೈಗಳೆರಡೂ ಆಕೆಯ ಕತ್ತನ್ನು ಹಿಸುಕಿದ್ದುವು......

ಅವನಿಗೆ ಮೈಮೇಲೆ ಎಚ್ಚರವಿರಲಿಲ್ಲ.ಎಷ್ಟೋ ದಿನಗಳಿಂದ

ತಡೆಹಿಡಿದಿದ್ದ ಆಣೆಕಟ್ಟು ಒಮ್ಮೆಲೆ ಕಡಿದು ಹೋಯಿತೇನೊ.....ಆ

ಕೈಗಳು ಮತ್ತೂ ಮತ್ತೂ ಹಿಸುಕಿದುವು....ಮೊದಲು ಪ್ರತಿಭಟಿಸಿದ ಆ

ಹೆಣ್ಣು ಬರ ಬರುತ್ತ ನಿಶ್ಚೇಷ್ಟಿತವಾಯಿತು.ಶಾರದಾ ನೆಲದ ಮೇಲು

ರುಳಿದಳು.ಆದರೆ ಶ್ರೀಕಂಠ ಕೈಗಳ ಹಿಡಿತವನ್ನು ಸಡಿಲಿಸಿರಲಿಲ್ಲ.

ಹಿಂದೆಯೊಂದು ಕಾಲದಲ್ಲಿ ಅವನ ಕೈಹಿಡಿದಿದ್ದ ಹೆಂಗಸು-ಹಾಗೆ ಕೈ

ಹಿಡಿದು ಆ ಮಹಡಿಯ ಎತ್ತರಕ್ಕೆ ಅವನನ್ನು ಕರೆದು ತಂದಿದ್ದ ಹೆಣ್ಣು.

ಕೊನೆಗೆ ಬಳಲಿದ ಶ್ರೀಕಂಠ ಅವಳನ್ನು ನೆಲದಮೇಲಿನ ರತ್ನ

ಕಂಬಳಿಯ ಮೇಲೆಯೇ ಬಿಟ್ಟು,ಅಲ್ಲೇ ಒರಗು ಕುರ್ಚಿಯ ಮೇಲೆ

ಕುಳಿತ.......ಆಕೆ ಎಚ್ಚರಗೊಂಡು ಏಳಬಹುದು,ಎದ್ದಾಗ ಅವಳ

ಮುಖದಮೇಲೆ ಥೂ ಎಂದು ಉಗುಳಿ ಕಾಲಿನಿಂದ ಒದೆಯಬೇಕು,-

ಇದೀಗ ಆತನಿಗಿದ್ದ ಯೋಚನೆ.ಆಕೆಯನ್ನು ನೋಡುತ್ತ ನೋಡುತ್ತ

ಅವನು ಅಲ್ಲಿ ಕುಳಿತ.ಅವಳು ಏಳಲೇ ಇಲ್ಲ.

"ನಟನೆ ಸಾಕು.ಸಿನಿಮಾ ನಟನೆ.,ಏಳು!"