ಪುಟ:Vimoochane.pdf/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೮

ವಿಮೋಚನೆ

ಬಂದಿದೆ--ಸಾರ್ವಜನಿಕ ಕ್ಷೇತ್ರಗಳಲ್ಲಿ ಜನಪ್ರಿಯರಾಗಿದ್ದ ಶ್ರೀಮತಿ
ಶಾರದಾ ಶ್ರೀಕಂಠಯ್ಯನವರ ವಿಚಿತ್ರ ಮರಣದ ವಾರ್ತೆ. ಆ ಬಳಿಕ,
ಹಲವು ವರ್ಷಗಳಿಂದ ಮಿತ್ರನಂತೆ ನಟಿಸಿದ ದರೋಡೆ ಖೋರ
ಚಂದ್ರಶೇಖರನ ಬಂಧನ-- ಆ ಸಂಬಂಧವಾಗಿ, ಗುಮಾನೀಯ ಮೇಲೆ.

ಈಗಾಗಲೇ ಎಲ್ಲರೂ ಓದಿರುವ ವಾರ್ತೆ ಅದು : ನನ್ನ ಅಜ್ಜಿ
ಇದ್ದ ಮನೆಯ ನೆರೆಮನೆಯವರು, ವನಜಾ, ಶ್ರೀನಿವಾಸಯ್ಯ, ಮಾಧ
ವರಾವ್, ನಾರಯಣ,ಕೄ‍ಷ್ಣರಾಜರು---ಎಲ್ಲರೂ_ಎಲ್ಲರೂ !

ಕೊಲೆಪಾತಕಿಯಾಗಿರುವ ನಾನು...

ಅವರು ವಿಚಾರಣೆಮಾಡಿ ಇನ್ನೂ ತೀರ್ಪು ಕೊಡುವರು---ತೀರ್ಪು...

ಏಕಪ್ರಕಾರವಾಗಿ ಯೋಚಿಸುವ ಸಾಮರ್ಥ್ಯ ನನಗೆ ಉಳಿದಿಲ್ಲ...
. ಯೋಚನೆಗಳು ಕಡಿದು ಕಡಿದು ಬರುತ್ತಿವೆ...ಉದರ ಶೂಲೆ...ವಾಂತಿ
ಮಾಡಬೇಕೆನ್ನುವ ಹಾಗೆ ಆಗುತ್ತಿದೆ..ಉಸಿರು ಕಟ್ಟುತ್ತಿದೆ...

..ಅಂತ್ಯವೆಲ್ಲಿದೆ? ಕೊನೆ ಎಲ್ಲಿದೆ? ಮುಕ್ತಾಯ- ಮುಕ್ತಾಯ ಎಲ್ಲಿದೆ?