ಪುಟ:Vimoochane.pdf/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

...ಮಂಗಳವಾರ

ಬಲು ತಡವಾಗಿ ಎದ್ದು, ಈ ದಿನ ಎಲ್ಲರು ಕೌತುಕಕ್ಕೆ ಕಾರಣ ನಾಗಿದ್ದೀನೆ.....

ಕರಿಯ ಕೇಳಿದ "ಹೆಂಗಿದೀರ ರಾಯರೆ?"

ರಾಯರು 'ಹೆಂಗಿದ್ದರು'!

ಬಲ ಮಗ್ಗುಲಿನ ಯುವಕ ಕೇಳುತಿದ್ದಾನೆ:

"ನಿಮ್ಮ ವಿಚಾರಣೆ ಯಾವತ್ತು ಸಾರ್?"

ಹೌದು, ಯಾವತ್ತು ನನ್ನ ವಿಚಾರಣೆ? ಯಾವತ್ತು?

ಕಳೆದ ಮಂಗಳವಾರದಿಂದ ಈ ಮಂಗಳವಾರಕ್ಕೆ. ಇದೊಂದು
ವಾರದೊಳಗೆ ಇಷ್ಟೊಂದು ಪುಟಗಳನ್ನು ನಾನು ಬರೆದೆನೆ? ನನಗೆ
ಆಶ್ಚರ್ಯವಾಗುತ್ತಿದೆ. ನಿಜವಾಗಿಯೂ ನಾನೇ ಇಷ್ಟನ್ನೂ ಬರೆದೆನೆ?

ಇನ್ನು ನಾನು ಬರೆಯಬೇಕಾಗಿರುವುದು ಬಲುಸ್ವಲ್ಪ... ಇನ್ನು
ಉಳಿದಿರುವುದು ಕೊನೆಯದಾಗಿ ವಿದಾಯ ಹೇಳುವ ಕೆಲಸ.

....ಈ ದಿನ ಬೆಳಕಾಗಿ, ಹಗಲು ಕಳೆದು, ಸಂಜೆ ಬಂದಿದೆ-
ಎಷ್ಟೊಂದು ಬೇಗನೆ! ನನ್ನ ಬಾಳ ಸಂಜೆ ಬಂದೊದಗಿರುವುದು
ಎಷ್ಟೊಂದು ಬೇಗನೆ!

ಈ ದಿನ ನಾನು ಉಪವಾಸವಿದ್ದೇನೆ... ವ್ರತನಿಷ್ಠೆಯಿಂದಲ್ಲ!
ನನ್ನ ಅಂಗಾಂಗಗಳಿಗೆಲ್ಲ ವಿರಾತುಕೊಡುವ ಬಯಕೆಯಿಂದ ಹಾಗೆ
ಮಾಡುತ್ತಿದ್ದೇನೆ.

ಇನ್ನು ಸಂಜೆಯ ಸೂರ್ಯ ಮುಳುಗುತ್ತಾನೆ - ಈ ಮಂಗಳ
ವಾರವೂ. ಚಂದ್ರೋದಯವಾಗಬೇಕಾದರೆ ನಡು ರಾತ್ರೆ ಕಳೆಯ
ಬೇಕು. ಈ ಕೊಠಡಿಯ ಹಿಂಭಾಗದಲ್ಲಿ ಎತ್ತರದಲ್ಲಿರುವ ಕಿಟಕಿಯಿಂದ

೨೨೯