ಪುಟ:Vimoochane.pdf/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೪೦

ವಿಮೋಚನೆ

ಚಂದ್ರ ಇಣಿಕಿ ನೋಡುವನು. ಆಗ ಆತನಿಗೆ ಬಟ್ವಿಯ ಬಲ
ದಾರ ಕಾಣುವುದು. ಆ ದಾರಕ್ಕೆ ಜೋತುಬಿದ್ದು ಆತ ಇಳಿದು
ಬಹುದೇನೋ. ಅದಾಗದ ಕೆಲಸ. ನಾನು ಜೋತು ಬಿದ್ದಿರು
ಚಂದ್ರನ ಭಾರವನ್ನು ಆ ದಾರ ಹೊರುವುದುಂ‍ಟೆ?

....ಯಾಕೆ,ಅರ್ಥವಿಲ್ಲದ ಮಾತುಗಳು ಈ ಲೇಖಣಿಯ
ಹೊರಬೀಳುತ್ತಿವೆಯಲ್ಲ!.......

ಅರ್ಥವಿಲ್ಲದ .

ನಾನು ಬಲ್ಲೆ, ಈಗಿನ ಕಾಲದಲ್ಲಿ ಪದಗಳ ಅರ್ಥವಾ
ಲಾಗುತ್ತಿದೆ. ಹಳೆಯ ಪದಗಳಿಗೆ ಹೊಸ ಅರ್ಥ ಬರುತ್ತಿದೆ...

ಆದರೆ ಪದಗಳು ಸಾಯುವುದಿಲ್ಲ.

ನಾನು?

ಅಮ್ಮಾ - ಅಮ್ಮಾ - ಅಪ್ಪಾ - ಅಪ್ಪಾ - ಅಜ್ಜಿ - ಅಜ್ಜಿ

" ರುಕ್ಕೂ ಏನ್ಮಾಡೋಣಾಂತೀಯಾ? "

" ನೀನು ನಿಜವಾಗ್ಲೂ ಕದ್ದಿಲ್ಲ ಅಲ್ವಾ ಚಂದ್ರೂ?"

" ನಾನು ಯಾವತ್ತಾದರೂ ಹಾಗ್ಮಾಡೇನಾ ಅಪ್ಪಾ?"

" ಒಬ್ಬರೊಬ್ಬರು ಸುಲಿದು ತಿನ್ನೋದೇ ಈ ಪ್ರಪಂಚದ
ಶೇಖರ್."

ದೊಡ್ಡ ಮನುಷ್ಯ -- ದೊಡ್ಮನುಷ್ಯ....
"ಭಿಕ್ಷಾ ಸಿಗ್ತೇನೋ...."

ಎರಡು ರೂಪಾಯಿ.... ಎರಡು....

ವನಜಾ --- ವನೂ....

"ನಾನು ಭಿಕಾರಿಯಾದರೆ?"

"ಥೂ ಹೋಗಪ್ಪ ,ಎಂಥ ಮಾತಾಡ್ತೀಯಾ?

"ನಾನು ಆ ಹುಡುಗೀನ ನೋಡ್ಬೇಕು ಶೇಖರ್...

"ಸೈತಾನ ಕಣೋ ನೀನು...."

"ಮೂರು ತಿಂಗಳ ಬೋನಸ್...."

"ಸ್ವಾತಂತ್ರ್ಯ ಬಂದ ಘಳಿಗೇಲೇ ನಿದ್ದೆ ಹೋದ್ಯ