ವಿಷಯಕ್ಕೆ ಹೋಗು

ಪುಟ:Vimoochane.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹುಡುಗ ಮೊದಲಿಗನಾಗುವುದೆಂದರೇನು? ನನ್ನನ್ನೂ ಹಲವು ಹುಡುಗರು ಗೌರವಿಸುತ್ತಿದ್ದರು. ಆದರೆ ಹೀನೈಸುತ್ತಿದ್ದರ ಸಂಖ್ಯೆಯೇ ಹೆಚ್ಚು. ಆ ಸಂಜೆ ತರಗತಿ ಮುಗಿದು ನಾವೆಲ್ಲ ಶಾಲೆಯ ಮೆಟ್ಟಲಿಳಿಯುತ್ತಿದ್ದೆವು. ಆತ ಬೇಕುಬೇಕೆಂದೇ ನನ್ನನ್ನು ಮೊಣಗೈಯಿಂದ ತಿವಿದು ರೇಗಿಸಿದ.

"ಏನೂ ಅಹಂಕಾರ ನೋಡು. ಹಳ್ಳಿ ಗಮಾರ ದೊಡ್ಡಮನು ಷ್ಯಾಂತ ತಿಳಕೊಂಡಿದಾನೆ. ಗತಿ ಕೆಟ್ಟ ಮುಂಡೇದು!"

ನಾನು ಸ್ಲೇಟು ಪುಸ್ತಕವನ್ನು ಕೆಳಕ್ಕಿರಿಸಿದೆ. ಅವನನ್ನು ಹಿಡಿದು ನಿಲ್ಲಿಸಿ, "ಏನೆಂದೆ"? ಎಂದೆ. ಆವನು ಅಂತಹ ಪ್ರಶ್ನೆಯನ್ನು ನಿರೀಕ್ಷಿಸಿಯೇ ಇರಲ್ಲಿಲ.

ಶಹಭಾಷ್! ಮಾತಾಡೋಕೂ ಬರತ್ತ ಇವನ್ಗೆ !" ನಾನು ಉತ್ತರಕೊಡಲಿಲ್ಲ. ಅವನ ಬಣ್ಣದ ಆಂಗಿಯ ಕಾಲರ್‌ಗೆ ಕೈಹಾಕಿ ನನ್ನೆಡೆಗೆ ಎಳೆದೆ. ಆತ ಉರುಳಿಹೋದ. ದೂರಸರಿದು,"ಇಷ್ಟೇನೆ?" ಎಂದೆ.

ಅವನ ಮನೆತನದ ಅಭಿಮಾನವೆಲ್ಲಾ ಕೆರಳಿ ನಿಂತಿರಬೇಕು.ಎದ್ದು ಬಂದು ದಬದಬನೆ ನನಗೆ ಹೊಡೆದ. ಎಲ್ಲಿ ನನ್ನ ಜುಟ್ಟು ಹಿಡಿ ಯುವನೋ ಎಂಬ ಭಯವಿತ್ತು ನನಗೆ. ಅದಕ್ಕೆ ನಾನು ಆವಕಾಶ ಕೊಡಲಿಲ್ಲಿ. ಅವನ ಕ್ರಾಪಿಗೆ ಕೈ ಹಾಕಿ ಒಂದು ಹಿಡಿ ಕೂದಲು ಕಿತ್ತು ಬರುವಹಾಗೆ ಎಳೆದು ನೋಯಿಸಿದೆ. ಅವನು ಕೂಗಿಕೊಂಡು. ಮನೆ ಯಲ್ಲಿ ಅವನ ಹಾದಿ ನೋಡುತ್ತಿದ್ಧ ಕಾಫಿ ಬಿಸ್ಕತ್ತಿನ ನೆನಪಾಯಿತೇನೊ.ನಾನು ಹಿಂದೆಂದೂ ಯಾರೊಡನೆಯೂ ಜಗಳವಾಡಿರಲಿಲ್ಲ. ಆದರೆ ಅಂಗಳದಲ್ಲಿ ನಿಂತು, ಬೀದಿಯ ಹುಡುಗರು ರಕ್ತ ಸೋರುವತನಕ ಕುಸ್ತಿ ಹಿಡಿಯುವುದನ್ನು ನಾನು ಕಂಡಿದ್ದೆ. ಹಾಗೆ ಕಂಡು ಕಲಿತುವನ್ನು ಇಲ್ಲಿ ಪ್ರಯೋಗಿಸಿದೆ. ಏಟು ತಿಂದು ಅವನು ಬೋರಲುಬಿದ್ದ. ಅಂಗಿ ಹರಿದಿತ್ತು. ಅವನ ಕೆಂಪು ದವಡೆಯಮೇಲೆ ನಾನು ಎಳೆದಿದ್ದ ಉಗುರಿನ ಎರಡು ಗೆರೆಗಳು ಮತ್ತಷ್ಟು ಕೆಂಪಗಾಗಿ ಸಿಡಿಯುತ್ತಿದ್ದವು. ಎಲ್ಲ ಹುಡುಗರೂ ನಮ್ಮನ್ನೆ ನೋಡುತ್ತಿದ್ದರು .ನನ್ನ ಸಹಾಯಕ್ಕೆ