ಪುಟ:Vimoochane.pdf/೪೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಯಾರೂ ಬರಲಿಲ್ಲ ನಿಜ. ಆದರೆ ಅವನ ಸಹಾಯಕ್ಕೂ ಯಾರೂ ಬರಲಿಲ್ಲ. ಆ ಹುಡುಗನಿಗೆ ಅವಮಾನವಾದುದನ್ನು ಕಂಡು ಹಲವರಿಗೆ ಸಂತೋಷವಾಗಿರಬೇಕು. ಆದರೆ ಒಬ್ಬಿಬ್ಬರು, ಉಪಾಧ್ಯಾಯರಿಗೆ ದೂರುಕೊಡಲು ಓಡಿಹೋಗಿದ್ದರು. ಉಪಾಧ್ಯಾಯರು ಧಾವಿಸಿ

ಬಂದರು.ಅಪರಾಧಿ ಯಾರು? ನಮ್ಮಿಬ್ಬರೊಳಗೆ ತಪ್ಪುಮಾಡಿದವರು ಯಾರು? ಆ ಉಪಾಧ್ಯಾಯರು ಮೊದಲು ನನ್ನ ಕೆನ್ನೆಗೆ ಏಟು ಬಿಗಿದರು.

"ಇಷ್ಟು ಶಕ್ತಿಬಂತೇನೋ ಭಡವಾ?" ಎಂದು ಪ್ರಶ್ನೆ ಬಂತು. ಹೌದು ನನಗೇ ಗೊತ್ತಿರಲಿಲ್ಲ. ಬಡವನಾದ ನನಗೆ ಅಷ್ಟು ಶಕ್ತಿ ಬಂದಿತ್ತು.

ಆ ಶ್ರೀಮಂತರ ಹುಡುಗ ಅಳುತ್ತಿದ್ದ. ಇಲ್ಲದ ನೋವನ್ನು ಹತ್ತುಪಾಲು ಹೆಚ್ಚಿಸಿಕೊಂಡು ಆಳುತ್ತಿದ್ದ. ನಾನು ಸ್ಲೇಟು ಪುಸ್ತಕ ವನ್ನೆತ್ತಿಕೊಂಡೆ.

ಉಪಾಧ್ಯಾಯರ ಗುಡುಗು ಧ್ವನಿ ಸಿಡಿನುಡಿಯಿತು.

"ನಾಳೆಯಿಂದ ಸ್ಕೂಲಿಗೆ ಬರಬೇಡ. ಕೇಳಿಸ್ತೋನೋ ಚಂದ್ರ ಶೇಖರಾ, ನಾಳೆಯಿಂದ ಸ್ಕೂಲಿಗೆ ಬರಬೇಡ."

.......ತಲೆ ಬಾಗಿಸಿಕೊಂಡು ನಾನು ಮನೆಗೆ ಬಂದೆ. ಕಾಲುಗಳು ಜಡವಾಗಿದ್ದವು. ಹೃದಯ ಭಾರವಾಗಿತ್ತು. ಸುರಿಯಲು ನಿರಾಕರಿಸಿದ್ದ ಕಣ್ಣೀರು ಕಣ್ಣೀನ ಅಂಚಿನಲ್ಲಿ ತುಂಬಿ ತುಳುಕುತ್ತಿತ್ತು.ಇದು ನ್ಯಾಯವೆ? ತರಗತಿಗೆ ಮೊದಲಿಗನಾದಾಗ ನನ್ನನ್ನು ಪ್ರೀತಿಸಿದ ಉಪಾಧ್ಯಾಯರು, ಈಗ ಹೀಗೆ ಮಾಡುವುದು ನ್ಯಾಯವೆ? ತಪ್ಪುಯಾರದು? ಆ ಶ್ರೀಮಂತರ ಹುಡುಗ ಏನೂ ತಪ್ಪು ಮಾಡಲಿಲ್ಲವೆ ಹಾಗಾದರೆ? ಅವರು ಬೇರೆ ಯಾವ ಶಿಕ್ಷೆ ಬೇಕಾದರೂ ಕೊಡಬಹುದಾಗಿತ್ತು. ಆದರೆ ಸ್ಕೂಲಿಗೇ ಬರಬಾರದು, ಎಂದು ತೀರ್ಮಾನ ಕೊಡುವುದೆ? ತಂದೆಗೆ ಹೇಗೆ ಮುಖ ತೋರಿಸಬೇಕು? ಇನ್ನು ದೊಡ್ಡ ಮನುಷ್ಯನಾಗುವುದು ಹೇಗೆ ಸಾಧ್ಯ? ಅಜ್ಜಿಗೆ ಏನು ಉತ್ತರಕೊಡಬೇಕು? ಸಾವಿರ ಸವಾಲುಗಳು ನನ್ನ ಕಣ್ಣೆದುರು ಕುಣಿಯುತ್ತಿ