ಪುಟ:Vimoochane.pdf/೫೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

"ಮೇಷ್ಹ್ರು ಮನೇಲಿ ಕಟ್ಟಿಗೆ ಒಡಿತವ್ನೆ"

"ಆಹಾ ಮುಂಡೇಗಂಡ!" ಎಂದು ಅಜ್ಜಿ ಉದ್ಗರಿಸಿದರು. ಈ ಬಿರುದು ಯಾರಿಗೆ ದೊರೆಯಿತೆಂದು ತಿಳಿಯದೆ ನಾನು ಅವರ ಮುಖವನ್ನೆ ನೋಡಿದೆ."ಅಂತೂ ಬಿಟ್ಟೀ ಸೌದೆ ಒಡೆಸ್ಕೊಂಡುಬಿಟ್ಟ ಪರವಾಗಿಲ್ಲ ಕಣೋ ನಿನ್ಮೇಷ್ಟ್ರು!"

ನನಗೆ ಆ ವಿಷಯ ಹೊಳೆದೇ ಇರಲಿಲ್ಲ.ಆ ಸೌದೆಯ ನೆನಪಾಗಿ ಸ್ವತಃ ಉಪಾಧ್ಯಾಯರೇ ಸಂಜೆಯ ಹೊತ್ತಿಗೆ ನಮ್ಮನ್ನು ಬರಲು ಹೇಳಿದ್ದರೇನೊ!

"ಕೈ ತೊಳ್ಕೋಪ್ಪಾ ಚಂದ್ರು. ಒಂದಿಷ್ಟು ದೋಸೆ ಇದೆ. ತಿಂದ್ದಿಟ್ಟು ಹಾಲು ಕೊಟ್ಟು ಬಾ."

ನಾನು ಲವಲವಿಕೆಯಿಂದ ಆ ಕೆಲಸಮಾಡಿದೆ.

ಮರುದಿನ ಮತ್ತೆ ಶಾಲೆ.ಅ ಮಹಾನುಭಾವನೂ ಬಂದಿದ್ದ. ಈ ದಿನ, ಕೋಟು ಹ್ಯಾಟುಗಳನ್ನು ಹೆಚ್ಚಾಗಿ ಧರಿಸಿದ್ದ. ನೋಡಿದರೆ ಯಾರ ಹೆದರಿಕೆಯೂ ಇಲ್ಲದ ಹಾಗೆ,ನನ್ನ ಬಗ್ಗೆ ತುಚ್ಚೀಕಾರವಿದ್ದ ಹಾಗೆ,ನಟನೆ.ಆದರೆ ವಾಸ್ತವವಾಗಿ ಅವನ ಪುಕ್ಕಲು ಕಣ್ಣುಗಳು ಹ್ಯಾಟಿನ ಮೂಂಭಾಗದ ಮರೆಯಿಂದ ಅತ್ತಿತ್ತ ಕದ್ದು ಕದ್ದು ಯಾರನ್ನೋ ಹುಡುಕುತ್ತಿದ್ದುವು.ನಾನು ಅವುಗಳ ದೃ‍‍‍‍‍‍ಷ್ಟಿಗೆ ಬಿದ್ದೊಡನೆ ಮತ್ತೆ ಸ್ವಸ್ಥಾನಕ್ಕೆ ತಿರುಗಿ ಎವೆಗಳ ಎಡೆಯಲ್ಲಿ ಅವಿತುಕೊಂಡವು.

ಉಪಾದ್ಯಾಯರು ಬಂದರು ಘಂಟೆ ಬಾರಿಸಿತು ಛಾವಣಿ ಹಾರಿಹೋಗುವ ಹಾಗೆ ನೂರು ಕಂಠಗಳಲ್ಲಿ ಕಿರಿಚಿಕೊಳ್ಳುತ್ತ ನಾವು ದೇವಪ್ರಾ‍‍‍ರ್ಥನೆ ಮಾಡಿದೆವು. ಉಪಾದ್ಯಾಯರು ಎಲ್ಲವನ್ನು ಇ‌ಷ್ಟರಲ್ಲೆ ಮರೆತಿರಬಹುದು ಎಂದಿದ್ದೆ. ಆದರೆ ಅವರು ಮರೆತಿರಲಿಲ್ಲ, ಅವರು ಎದ್ದು ನಿಲ್ಲುವಂತೆ ನನಗೆ ಆಘ್ನಾಪಿಸಿದರು. ಒಳ್ಳೆಯ ನಡತೆಯ ಬಗ್ಗೆ ಐದು ನಿಮಿಷಗಳ ಕಾಲ ಭಾಷಣವಿತ್ತರು. ಒಂದು ವಾರದವರೆಗೆ ನಾನು ಬೆಂಚಿನಮೇಲೆ ನಿಂತಿರಬೇಕೆಂದರು, ನಾನು ಮಾತನಡಲೆ ಇಲ್ಲ ತರಗತಿಗೆ ಮೊದಲಿಗನಾಗಿದ್ದರೂ ನನ್ನ ಸ್ಥಾನವಿದ್ದುದು ಕೊನೆಯ ಬೆಂಚಿನಲ್ಲಿ. ಅಲ್ಲಿಯೇ ನಾನು ನಿಂತುಕೊಂಡೆ. ಇಷ್ಟಾದರೂ