"ಇಸ್ಕೂಲಿಗೆ ಓಯ್ತವ್ನಾ?" ಎಂದು ಅವನು, ಜುಟ್ಟಿನ ಬಲಿದಾನಕ್ಕೆ ಅದೇ ಕಾರಣವೆಂಬಂತೆ, ನನ್ನ ತಂದೆಯನ್ನು ಕೇಳಿದ. ತಂದೆ ಹೌದೆಂದ. ನಾವು ಹೊರಬಿದ್ದೆವು. ಆತ ಗಡ್ಚ ಮಾಡಿಸಿಕೊಂಡಿರಲಿಲ್ಲ. ಆತನ ಸಣ್ಣ ಜುಟ್ಟಂತೂ ಹಾಗೆಯೇ ಇತ್ತು. ಆಗ ನನಗೆ ತಿಳಿದಿರಲಿಲ್ಲ.ಆದರೆ ಈಗ ಅರ್ಥವಾಗುತ್ತಿದೆ. ಅ ದಿನ ಕೌರಿಕನಿಗಾಗಿ ತಾನು ಮಾಡಬೇ ಕಾಗಿದ್ದ ಖರ್ಚನ್ನು,- ನನ್ನ ಕ್ರಾಪಿಗೋಸ್ಕರ ಆತ ಮಾಡಿದ್ದ.
ಮರುದಿನ ಶಾಲೆಗೆ ಹೋದಾಗ, ಎಲ್ಲರೂ ನನ್ನನ್ನೇ ನೋಡುತ್ತಿದ್ದರು. ನನ್ನನ್ನಲ್ಲ, ನನ್ನ ತಲೆಯನ್ನು. ತರಗತಿಯೊಳಗೆ ಹುಡುಗರು ನನ್ನ ಸುತ್ತಲೂ ಕೈ ಕಟ್ಟಿಕುಣಿದರು. ಆದರೆ ನಾನು ನೊಂದುಕೊಳ್ಳಲಿಲ್ಲ. ಮುಂದೆ ಸದಾಕಾಲವೂ ಜುಟ್ಟಿನ ತೊಂದರೆಯೇ ಇಲ್ಲದಿರಬೇಕಾದರೆ, ಈಗ ಹೊಸ ಕ್ರಾಪು ತಂದೊಡ್ಡಿದ ತಮಾಷೆಯನ್ನು ಅನುಭವಿಸದೆ ಅನ್ಯಗತಿ ಇರಲಿಲ್ಲ.
ಒಂದು ದಿನ ರಾತ್ರಿ ಅಜ್ಜಿ ನನ್ನ ತಂದೆಯೊಡನೆ ಆತ್ಮೀಯವಾಗಿ ಮಾತಾಡಿದರು. ಆ ಮಾತು ನನಗೆ ಹಿತವೆನಿಸಲಿಲ್ಲ. ಆದರೆ ಅಜ್ಜಿಯ ದಯಾಪೂರ್ಣ ಮುಖವನ್ನು ನೋಡುತ್ತಾ ಆ ಮಾತುಗಳನ್ನೇ ನಾನು ಮರೆತೆ. ತಂದೆ ತಲೆಬಾಗಿಸಿ ಬಲು ನಿಧಾನವಾಗಿ ಉತ್ತರ ಕೊಡುತ್ತಿದ್ದ.
"ನಲವತ್ತೆರಡು ವರ್ಷಕ್ಕೆ ಯಾರೂ ಮುದುಕರಾಗೋದಿಲ್ಲನಿಜ. ಆದರೆ ಇನ್ನೊಮ್ಮೆ ಸಂಸಾರ ಹೊಡೋ ಇಷ್ಟ ನನಗಿಲ್ಲ. ನನ್ಮಗೂಗೆ ಆದರಿಂದ ಸುಖ ಸಿಗತ್ತೆ ಅಂತ ಯಾವ ನಂಬಿಕೆ? ನಾನ್ನೋ ಡ್ಕೊಳ್ಳೋವಷ್ಟು ಚೆನ್ನಾಗಿ ಇನ್ಯಾರಾದರೂ ಅವನ್ನ ನೋಡ್ಕೊಂಡಾರ?"
ಅಜ್ಜಿ ಮೌನವಾಗಿದ್ದರು.
"ನಿನ್ನ ಇಷ್ಟ ಕಣಪ್ಪ, ಬಲವಂತ ಮಾಡೋ ವಿಷಯಾನೆ ಇದಲ್ಲ."
ಸದ್ಯಃ ನಮ್ಮ ಮನೆಗೆ ಹೊಸಬರು ಯಾರೂ ಬರುವುದಿಲ್ಲವೆಂದು ನನಗೆ ಸಮಾಧಾನವಾಯಿತು. ಅದರೆ ತಂದೆ ಸಷ್ಟಗಿದ್ದ. ಆಮೇಲೆ