ಪುಟ:Vimoochane.pdf/೫೫

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಬಹಳ ದಿನ ಗೆಲುವಾಗಿಯೇ ಇರಲಿಲ್ಲ. ಆದರಿಂದ ನನಗೆ ದು‌‌‍:ಖವಾಯಿತು. ಅವನು ಊಟವನ್ನೂ ಸರಿಯಾಗಿ ಮಾಡುತ್ತಿರಲಿಲ್ಲ.

ಒಂದು ರಾತ್ರೆ ಕಂಬಳಿಯೊಳಗೆ ನಾನು ಮೆಲ್ಲನೆ, "ಅಪ್ಪಾ" ಎಂದೆ.

"ಹೂಂ" ಎಂದನಾತ. ಇನ್ನೂ ನಿದ್ದೆ ಬಂದಿರಲಿಲ್ಲ.

"ಅಪ್ಪಾ, ನೀನು ಯಾಕಪ್ಪ ಸರಿಯಾಗಿ ಉಣ್ಣೋದಿಲ್ಲ ?"

ತಂದೆ ಉತ್ತರ ಕೊಡಲಿಲ್ಲ. ನಾನು ಮತ್ತೆ ಅದೇಪ್ರಶ್ನೆ ಕೇಳಿದೆ.

"ಯಾರೊ ಹೇಳಿದೋರು ನಿಂಗೆ ? ದಿನಾ ಉಣ್ತ ಇದಿನಲ್ಲೊ ?"

ಆ ಮಾತಿನಿಂದ ನನಗೆ ಸಮಾಧಾನವಾಗಲಿಲ್ಲ.

ಬಲು ಹೊತ್ತಾದ ಬಳಿಕ ತಂದೆ ಹೇಳಿದ.

"ಈ ವಾರಕ್ಕೆ ಮೂರು ವರ್ಷ ಆಯಿತು. ನೆಪ್ಪಯ್ತೇನೊ ನಿಂಗೆ ?

"ನನಗೆ ನೆನಪಿತ್ತು. ಅದೀಗ ಆತನನ್ನು ಬಾಧಿಸುತ್ತಿದ್ದ ಚಿಂತೆ

.

.....ಅವನ ಮಾತಿನ ಬಳಿಕ ಅಂಟುಜಾಡ್ಯದ ಹಾಗೆ ಆ ಚಿಂತೆ ನನಗೆ ತಗಲಿ ಕೊಂಡಿತು.

"ಹೂನಪ್ಪ ,"ಎಂದೆ.

.....ಮೂರು ವರ್ಷಗಳಷ್ಟೇ ಅಲ್ಲ; ನಾಲ್ಕು ವರ್ಷಗಳಾದವು. ತಂದೆ ಪ್ರತಿ ತಿಂಗಳೂ ತಪ್ಪದೆ ಸೌದೆ ಒಡೆದುಕೊಡುತ್ತಿದ್ದ ನನ್ನ ಮೊದಲು ವಿದ್ಯಾಗುರುವಿನ ಶಾಲೆಯ ಬದಲು, ಇನ್ನೊಂದಕ್ಕೆ ನಾನು ಹೋದೆ. ಅಲ್ಲಿ ಹೆಚ್ಚು ಜನ ಉಪಾಧ್ಯಾಯರು; ಹೆಚ್ಚು ಹುಡುಗರು. ಈಗ ನನ್ನ ತಲೆಯ ಮೇಲೆ ಕ್ರಾಪಿತ್ತು-ದಿನವೂ ಬಾಚದೆ ಇರುತ್ತಿದ್ದ ಕೆದರಿದ ಕ್ರಾಪು. ಅಷ್ಟೇ ಅಲ್ಲ; ನನಗೆ ಹೊಸ ಅಂಗಿ ಚಡ್ಡಿ ಗಳಿದ್ದುವು.....

ಆದರೆ ಹೊಸ ಅಂಗಿ ಚಡ್ಡಿಗಳು ಸುಲಭವಾಗಿ ನನಗೆ ಬಂದಿರಲಿಲ್ಲ. ತಂದೆ ದೇಹವನ್ನು ತೇದು ತೇದು, ತನ್ನ ಸುಖವನ್ನು ಬಲಿ ಗೊಟ್ಟು, ನನಗೆ ಅಂತಹ ಶ್ರೀಮಂತಿಕೆಯನ್ನು ಒದಗಿಸಿಕೊಡುತ್ತಿದ್ದ. ತನ್ನನ್ನು ಸಣ್ಣ ಸಣ್ಣವನಾಗಿ ಮಾಡಿಕೊಂಡು, ನನ್ನನ್ನು ದೊಡ್ಡ