ಪುಟ:Vimoochane.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಜ್ಜಿ ಯಾವುದೋ ಕಷಾಯ ಕುಡಿಸಿದರು. ನಾನೇ ಫ್ಯಾಕ್ಟರಿಗೆ ಹೋಗಿ ಗೇಟಿನ ಬಳಿ ಕಾದು ನಿಂತು ರಜೆಯರ್ಜಿ ಸಲ್ಲಿಸಿ ಬಂದೆ. ಆ

ದಿನ ಶಾಲೆಗೆ ಹೋಗಲು ನನಗೆ ಮನಸ್ಸಿರಲಿಲ್ಲ. ಆದರೆ ತಂದೆ ಒಪ್ಪಲಿಲ್ಲ.

"ಇದೆಲ್ಲಾ ಒಂದಿವಸದ ಜ್ವರ, ನಾಳೆ ಸರಿಹೋಗಬಹುದು, ನೀನು ಸ್ಕೂಲಿಗೆ ಹೋಗು ಚಂದ್ರು"

ನಾನು ಸ್ಕೂಲಿಗೆ ಹೋದೆ. ಆದರೆ ಮನಸ್ಸೆಲ್ಲಾ ಮನೆಯತ್ತ ಹಣಿಕಿ ನೋಡುತ್ತಿತ್ತು.

ಜ್ವರ ನಿಲ್ಲಲೇ ಇಲ್ಲ; ಬದಲು ಏರುತ್ತಾ ಹೋಯಿತು. ಮರು ದಿನವೂ-ಮಾರನೆ ದಿನವೂ. ಅಜ್ಜಿ ಔಷಧೋಪಚಾರ ನಡೆಸಿದರು. ನಾನು ರಜ ಪಡೆದು ಆರೈಕೆಗೆ ನಿಂತೆ. ಜ್ವರ ವಿಷಮಜ್ಜರವಾಯಿತು.

ನಾನು ಇಷ್ಟರವರೆಗೆ ಎಷ್ಟೋ ಜನ ಜ್ವರಪೀಡಿತರನ್ನು ಕಂಡಿದ್ದೇನೆ. ಬಾಲ್ಯದಲ್ಲೆ ಆ ಜ್ವರದ ಮಹಾ ಪ್ರಕೋಪವನ್ನು ಕಣ್ಣಾರೆ ಕಂಡ ಅನುಭವವಿದ್ದ ನನಗೆ, ಅಂತಹ ರೋಗಿಗಳ ಬಗ್ಗೆ ಕನಿಕರ ವಾದುದೇ ಇಲ್ಲ. ಯಾಕೆ ಕನಿಕರಿಸಬೇಕು? ಹೃದಯ ಕಲ್ಲಾಗಿರ ಬಹುದೆಂದು ಯಾರಾದರೂ ಹೇಳಬಹುದು. ಇದ್ದೀತು. ಅದು ಚರ್ಚಾಸ್ಪದವಾದ ಬೇರೆ ಮಾತು. ಆದರೆ ತಂದೆಯ ಜ್ವರವೇ ನಾನು ಮೊದಲು ನೋಡಿದ ದೊಡ್ಡ ಕಾಹಿಲೆ. ಅದನ್ನೂ ಮೀರಿಸುವ ಜ್ವರ ಇನ್ನೊಂದು ಇದ್ದೀತೆಂದು ನಾನು ಎಂದೂ ನಂಬಲಿಲ್ಲ.

ಕಣ್ಣಲ್ಲಿ ಎಣ್ಣೆ ಇಟ್ಟು ನಾನೂ ಅಜ್ಜಿಯೂ ಆರೈಕೆ ಮಾಡಿದೆವು. ಆತ ಪ್ರಜ್ನೆ ತಪ್ಪಿ ಬಡಬಡಿಸುತ್ತಿದ್ದ. ಅಜ್ಜಿ ನನಗೆ ಧೈರ್ಯದ ಮಾತು ಹೇಳುತ್ತಿದ್ದರು. ಆದರೆ ನನಗೆ ಆದರೆ ಅವಶ್ಯತೆಯೇ ಇರಲಿಲ್ಲ. ತಂದೆ ಬಡಬಡಿಸುತ್ತಿದ್ದ ಒಂದೊಂದು ಮಾತೂ ನನ್ನ ವ್ಯಕ್ತಿತ್ವವನ್ನೇ ಹಿಡಿದು ಕುಲುಕುತ್ತಿತ್ತು. ರುಕ್ಕೂ-ಚಂದ್ರು--ಅದೆಷ್ಟು ಬಾರಿ ಆ ಹೆಸರುಗಳನ್ನು ಆತ ಉಚ್ಚರಿಸಲಿಲ್ಲ!

......ಮೂರು ವಾರಗಳ ಮೇಲೆ ಜ್ವರ ಇಳಿಯಿತು. ಸೊರಗಿ ಕಡ್ಡಿಯಾಗಿದ್ದ ಮೂಳೆಯ ಹಂದರವೊಂದು, ಮತ್ತೆ ಸ್ವಲ್ಪ ಮಾಂಸ ತುಂಬಿಸಿಕೊಂಡು, ದುಡಿಮೆಯ ಗಾಣದ ಬಡಕಲು ಎತ್ತಾಗಲು ಸಿದ್ಧ