ಪುಟ:Vimoochane.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಾಯಿತು. ನನ್ನ ತಂದೆ ಬದುಕಿಕೊಂಡ- ನನಗಾಗಿ ಬದುಕಿಕೊಂಡ.

ಅಜ್ಜಿ ಗುಡಿಯ ದೇವರಿಗೆ ಹರಕೆ ಹೊತ್ತಿದ್ದರು. ತಂದೆ ಅದನ್ನು ಸಲ್ಲಿಸಿ ಬಂದ. ನಾನು ಪ್ರಸಾದವಾಗಿದ್ದ ಹಣ್ಣನ್ನೂ ಕೊಬರಿಯನ್ನು ತಿಂದೆ.

ಆದರೆ, ಆ ಫ್ಯಾಕ್ಟರಿಯ ಗಾಣಕ್ಕೆ ನಮ್ಮ ಎತ್ತಿನ ಅವಶ್ಯತೆ ಇರಲಿಲ್ಲ. ಆ ಜಾಗ ಭರ್ತಿಯಾಗಿತ್ತು. ಅಜ್ಜಿ ಹಾಕಿದ ಅನ್ನ ತಿಂದು, ತಂದೆ ಊರೆಲ್ಲಾ ಅಲೆದ. ಸೌದೆ ಒಡೆಯುವ ಉದ್ಯೊಗದಲ್ಲಿ ಆತ ಮಹಾ ಚತುರನಾದ. ಒಡೆಯುವ ಕೆಲಸ ದೊರೆತಾಗ ಒಂದು ರೂಪಾಯಿ ಸಂಪಾದನೆಯಾದರೂ ಆಯಿತೆ. ಇಲ್ಲದೆ ಹೋದಾಗ ಬರಿಗೈ.

ಆದರೆ ಊರು ಬೆಳೆಯುತ್ತಿತ್ತು. ಹೊಸ ಘ್ಯಾಕ್ಟರಿಯ ಹೊಸ ಚಿಮಿಣಿಗಳು ಆಕಾಶಕ್ಕೆ ಹೊಗೆಯುಗುಳುತ್ತಿದ್ದುವು. ಹೊಸದೊಂದು ಕಾರ್ಖಾನೆಯಲ್ಲಿ ನನ್ನ ತಂದೆ ಕೆಲಸ ಸಂಪಾದಿಸಿದ.

ನಾನು ಹೈ ಸ್ಕೂಲು ಸೇರಿದೆ. ಕಲಿತವರೆಲ್ಲಾ ದೊಡ್ದಮನುಷ್ಯ ರಾಗುವುದಿಲ್ಲವೆಂದು ಈಗೀಗ ನನಗೆ ಅರಿವಾಗುತ್ತಿತ್ತು. ಹೈ ಸ್ಕೂಲಿನ ದ್ದೊಡ್ಡ ಕಟ್ಟಡವನ್ನು ದಾಟಿದಮೇಲೆ ಕಾಲೇಜಿನ ಇನ್ನೊಂದು ದೊಡ್ಡ ಕಟ್ಟಡ ಇದೆ ಎಂಬುದನ್ನು ತಿಳಿದೆ. ಈ ಹಾದಿಗೆ ಕೊನೆಯೇ ಇಲ್ಲ ವೇನೋ ಎನ್ನಿಸುತ್ತಿತ್ತು. ಬೌದ್ಧಿಕ ಹಸಿವು ಮೆಲ್ಲಮೆಲ್ಲನೆ ನನ್ನನ್ನು ಕಾಡತೊಡಗಿತ್ತು. ಅದೇ ಆಗ ಬರುತ್ತಿದ್ದ ಕನ್ನಡ ಪುಸ್ತಕಗಳನ್ನೆಲ್ಲಾ ಓದಿದೆ. ಇಂಗ್ಲಿಷ್ ಭಾಷೆಯ ಬೇಲಿಯನ್ನು ದಾಟಿ, ಅದರ ಕಥೆಗಳನ್ನು ತಿಳಿದುಕೊಳ್ಳಲ್ಲು ಯತ್ನಿಸಿದೆ ಚಿಕ್ಕ ಹುಡುಗನಾಗಿದ್ದ ನಾನು ಎತ್ತರವಾಗಿ ಬೆಳೆಯುತ್ತಲಿದ್ದೆ. ಕಾಲ್ ಚೆಂಡಿನ ಕಣ, ನನ್ನ ಸಂಜೆಯ ಸ್ನೇಹಿತ ನಾಗಿತ್ತು. ಚೆಂಡನ್ನ ತುಳಿದು ದೂರಕ್ಕೆ ತಳ್ಳಿದಾಗ ಅಮಿತ ಆನಂದವಾತ್ತಿತ್ತು. ನನ್ನ ಹೋಡೆತದಿಂದ ಸೋಲಾದಾಗ ತಲೆಯ ಕ್ರಾಪನ್ನು ಬದಿಗೆ ಹಾರಿಸಿ, ಎಲ್ಲರನ್ನೂ ಕಂಡು ನಗುವ ದಿಟ್ಟತನ ತೋರುತ್ತಿದ್ದೆ.

ಆದರೆ ಮನೆಗೆ ಬಂದಾಗ ನಾನು ನಗುತ್ತಿರಲಿಲ್ಲ. ಈಗಲೂ ಅಜ್ಜಿಯ ಎಮ್ಮೆಗಳ ಹಾಲೆತ್ತಿಕೊಂಡು ವರ್ತನೆ ಮನೆಗಳಿಗೆ ಹೋಗಿ