ಪುಟ:Vimoochane.pdf/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಡ್ರೈವರ್ ಕಾರು ನಿಲ್ಲಿಸಿದ. ಒಳಗಿದ್ದ ವ್ಯಕ್ತಿ ಮುಖ ಹೊರಹಾಕಿ, ಇಂಗ್ಲೀಷಿನಲ್ಲಿ "ಸ್ವಲ್ಪ ಇತ್ತ ಬಾರಪ್ಪಾ" ಎಂದರು.

ನಾನು ತಿರುಗಿ ನೋಡಿದೆ. ಮತ್ತೆ ಅವರನ್ನು ಸಮೀಪಿಸುತ್ತಾ ಇಂಗ್ಲೀಷಿನಲ್ಲೇ, "ನಾನು ನಿಮಗೇನು ಸಹಾಯಮಾಡಬಲ್ಲೇ?"ಎಂದೆ.

"ಹೆಡ್ ಮೇಷ್ಟ್ರು ರಂಗನಾಥನ್ ಬಂದಿದಾರೇನು ? "

"ಇನ್ನೂ ಬಾಗಿಲು ತೆರೆದೇ ಇಲ್ಲ. ಅವರು ಬರೋದು ಇನ್ನೂ ತಡವಾಗಬಹುದು ಸಾರ್."

"ನಿನಗೆ ಅವರ ಮನೆ ಗೊತ್ತೇನು? "

ಇಂಗ್ಲೀಷ್ ಭಾಷೆಯಲ್ಲಿ ಇದೊಂದು ಅನುಕೂಲ. ಯೂ ಎಂದರೆ ನೀವು ಎಂದೂ ಆಗಬಹುದು, ನೀನು ಎಂದೂ ಆಗಬಹುದು. ಗೌರವದ ಸಂಬೋಧನೆಯಾಗಲಿ, ಏಕವಚನದ ಕರೆಯಾಗಲಿ ಎರಡೂ ಒಂದೇ. ಅದರ ಉಪಯೋಗ ಆಗ ನನಗೆ ತಿಳಿದಿರಲಿಲ್ಲ.... ನನ್ನಂಥ ಹುಡುಗನನ್ನು ನೀವು ಎಂದು ಯಾರಾದರೂ ಯಾಕೆ ಸಂಬೋಧಿಸುತ್ತಾರೆ ?

"ಗೊತ್ತು ಸಾರ್"

"ಅಲ್ಲಿತನಕ ಬರ್ತೀಯಾ ? ಸ್ಕೂಲ್ ಟೈಮ್ ಗೆ ಸರಿಯಾಗಿ ನಿನ್ನ ಇಲ್ಲಿಗೆ ತಲಿಪಿಸ್ತೀನಿ"

"ಆಗ್ಬಹುದು ಸಾರ್"

ಡ್ರೈವರ್ ತನ್ನ ಪಕ್ಕದ ಬಾಗಿಲು ತೆರೆದ. ಕಾರಿನವರು ತಮ್ಮ ಪಕ್ಕದ ಬಾಗಿಲು ತೆರೆದರು. ಅವರ ಸ್ವರ ಕೇಳಿಸಿತು.

"ಇಲ್ಲೇ ಬಾಪ್ಪ."

ಡ್ರೈವರ್ ತನ್ನ ಬದಿಯ ಬಾಗಿಲು ಮುಚ್ಚಿದ. ಮುಚ್ಚುತ್ತಾ ನನ್ನನ್ನ ನೋಡಿದ. ನಾನು ಒಳಹೊಕ್ಕು ವಿನಯದಿಂದ ಸೀಟಿನ ಇನ್ನೊಂದು ಮೂಲೆಯಲ್ಲಿ ಕುಳಿತೆ. ಒಂಭತ್ತು ವರ್ಷಗಳಿಗೆ ಹಿಂದೆ ಈ ನಗರಕ್ಕೆ ಬಂದ ಮೊದಲ ಸಂಜೆ ಬೆಳಕನ್ನುಗುಳುತ್ತಿದ್ದ ಎರಡು ಕಣ್ಣುಗಳ ಪುಟ್ಟ ವಾಹನಗಳನ್ನು ನಾನು ಕಂಡಿದ್ದೇನಲ್ಲವೆ ? ಈಗ