ಪುಟ:Vimoochane.pdf/೬೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

"ಹೆಡ್‌ಮೇಷ್ಟ್ರು ರಂಗನಾಥನ್ ಕಳಿಸಿದಾರೆ. ಲೋಕಪರಾ ಯಣ ರಾಮಸ್ವಾಮಿಯವರನ್ನು ತುರುತ್ತಾಗಿ ನೋಡಬೇಕಾಗಿದೆ, ಎಂದೆ."

ರಂಗನಾಥನ್ ಹೆಸರು ಆತನಿಗೆ ಪರಿಚಿತವಾಗಿದ್ದಂತೆ ತೋರಲಿಲ್ಲ. ಆದರೆ ಹೆಡ್ ಮೇಷ್ಟ್ರು ಎಂಬ ಪದ ಅವನ ಮೇಲೆ ಪರಿಣಾಮಮಾಡುತ್ತಿದ್ದಂತೆ ಕಂಡಿತು. ಆದರೂ ಅವನು ಪರೀಕ್ಷಕನ ದೃ‌‌‌‌‌‌‌‌‌‌‌‌‌‌‌‌‌‌‌ಷ್ಟಿಯಿಂದ ನನ್ನನ್ನು ದಿಟ್ಟಿಸಿನೋಡಿದ.ಕೊನೆಗೆ, "ಇಲ್ಲೆ ನಿಂತಿರು, " ಎಂದ. ಐದು ನಿಮಿಷಗಳಲ್ಲಿ ಗೇಟಿನ ಬಾಗಿಲು ಕಿರ್ ಎಂದಿತು. ನಾನು ಆ ದೊಡ್ಡ ಮಹಡಿಮನೆಯ ಕೆಳ ಹಜಾರದಲ್ಲಿ, ಆ ದೊಡ್ಡ ಮನುಷ್ಯರ ಆಗಮನವನ್ನು ಇದಿರುನೋಡುತ್ತಾ ನಿಂತೆ. ಆ ಎತ್ತರ ವಿಶಾಲತೆ ಭವ್ಯತೆಗಳ ನಡುವೆ ನಾನು, ಬಾಲು ನಿಕೃಷ್ಟನಾದ ಸಣ್ಣ ವ್ಯಕ್ತಿಯಾಗಿ ತೋರುತ್ತಿದ್ದೆ.

ಒಮ್ಮೆಲೆ ಪಕ್ಕದ ಬಾಗಿಲು ತೆರೆಯಿತು. ಹಿಂದೊಮ್ಮೆ ಕಾರಿನಲ್ಲಿ ನಾನು ಸಮೀಪವಾಗಿ ಕುಳಿತಿದ್ದ ಹಿರಿಯ ವ್ಯಕ್ತಿ ಬಂದರೆಂದು ಕೈ ಜೋಡಿಸಿನಿಂತೆ. ಆದರೆ ಬಂದುದು ಮತ್ತೆ ಅದೇ ಹುಡುಗಿ. ನನ್ನನ್ನು ನೋಡಿ ಆ ಮೂಗನ್ನು ಮೇಲಕ್ಕೆ ಏರಿಸಿ, ಜಡೆಯನ್ನು ಕೊರಳ ಇನ್ನೊಂದು ಭಾಗಕ್ಕೆ ಸೇರಿಸಿ, ಅವಳು ಮತ್ತೆ ಒಳ ಹೋದಳು. ಮೂಗು ತೀರ ಚಿಕ್ಕದಾಗಿದ್ದರೆ ಸೌಂದರ್ಯಕ್ಕೆ ಕೊರತೆ ಇರುತ್ತ ದೆಂಬುದನ್ನು ಆಗ ತಿಳಿದೆ. ನನಗೆ ತಿಳಿಯದೆಯೇ ಕೈ ಬೆರಳು ನನ್ನ ಮೂಗಿನತ್ತ ಹೋಯಿತು........

ಮತ್ತೆಷ್ಟೊ ನಿಮಿಷಗಳು ಕಳೆದುವು.

ಆ ಹೊತ್ತಿನಲ್ಲಿ ನಾನು ಏನನ್ನೂ ಯೋಚಿಸುತ್ತಿರಲಿಲ್ಲ. ಆವರ ಣದ ವಿಸ್ತಾರದಲ್ಲಿ ತನ್ನ ಇರುವಿಕೆಯನ್ನೆ ಮರೆಯುವುದು ಸಾಧ್ಯಾಅಲ್ಲವೆ? ಎಲ್ಲವೂ ಬರಿದು ಬರಿದು ಎಂದು ತೋರುತ್ತಿದ್ದ್ ಆ ವಿಶಾಲತೆಯಲ್ಲಿ ನಾನು ಮೆಲ್ಲಮೆಲ್ಲನೆ ಲೀನನಾಗುತ್ತಿದ್ದೆ.ನಾನು ಜಾಗೃತನಾಗಿದ್ದೆನೊ ಇಲ್ಲವೊ ಎಂಬುದು ತಿಳಿಯದೆಹೋಗುವ ಪರಿಸ್ಥಿತಿ..........

ನನ್ನನ್ನು ಎಚ್ಚರಿಸುವಂತೆ ಲೋಕಪರಾಯಣ ರಾಮಸ್ವಾಮಿ