ಪುಟ:Vimoochane.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯವರು ಬಂದು ಪ್ರತ್ಯಕ್ಷರಾದರು. ಕ್ಷಣಕಾಲ ನನಗೆ ಅವರ ಗುರುತು ಸಿಗಲಿಲ್ಲ. ಇಲ್ಲಿ ಅವರು ಪೋಷಾಕು ಧರಿಸದ ದೊಡ್ಡ ಮನುಷ್ಯರು. ಮೀಸೆ ಕಪ್ಪಗಿತ್ತು. ತಲೆಕೂದಲು ಬೆಳ್ಳಗೆ. ಎದೆ ಹೊಟ್ಟೆಗಳು ಪರಸ್ಪರ ಲೀನವಾಗಿ ಆ ಭವನದ ವಿಸ್ತಾರಕ್ಕೆ ಅನುಗುಣವಗಿ ವಿಶಾಲವಾಗಿ ಹರಡಿದ್ದುವು. ತೆಳ್ಳನೆಯ ಬಿಳಿಯ ಬಟ್ಟೆಯನ್ನು ಅವರು ಉಟ್ವದ್ವರು. ಮೇಲೊಂದು ಅಂತಹದೇ ಬನಿಯನ್ನು. ಕೈ ಬೆರಳಲ್ಲಿ ಮೂರು ಉ೦ಗುರಗಳಿದ್ದುವು. ಕಾಲಲ್ಲಿ ಬೂಟ್ಸುಗಳಿರಲಿಲ್ಲವೆ೦ದೋ ಏನೋ ಆವರು ಸ್ವಲ್ಪ ಕುಳ್ಳಗೆ ಕಾಣಿಸುತ್ತಿದ್ದರು........

ಅವರಿಗೆ ನನ್ನ ಗುರುತು ಸಿಕ್ಕಿದಹಾಗೆ ತೋರಲಿಲ್ಲ.

ಆದಷ್ಟುಮಟ್ಟಿಗೆ ತಡವರಿಸದಂತೆ, ನನ್ನ ಆಳುಕನ್ನು ಮುಚ್ಚುವುದಕ್ಕೋಸ್ಕರ ಸ್ವಲ್ಪ ಗಟ್ಟಿಯಾದ ಸ್ವರದಲ್ಲೆ, ನನ್ನ ಪರಿಚಯ ಮಾಡಿಕೊಟ್ಟೆ.

"ಸಾರ್, ನಾನು ಚಂದ್ರಶೇಖರ ಫೋರ್ತ್‍ ಫಾರಂನಲ್ಲಿದ್ದೆ. ಆ ದಿವಸ ಹೆಡ್ ಮಾಸ್ಟರ್ ರಂಗನಾಥನ್ ರವರ ಮನೆಗೆ ದಾರಿ ತೋರಿ ಸ್ಕೊಟ್ಟೆ. ಕಾರಿನಲ್ಲಿ-"

ಅವರ ತುಟ ಚಲಿಸಿದುದನ್ನು ಕಂಡು ನಾನು ಮಾತುನಿಲ್ಲಿಸಿದೆ. ಅವರು ಗಂಟಲು ಸರಿಪಡಿಸಿಕೊಂಡರು. ಅದೇನೊ ಸ್ವರ ಹೊರಬಿತ್ತು. ಆದರೆ ಯಾವುದೂ ನನಗೆ ಸ್ಪಷ್ಟವಾಗಲಿಲ್ಲ. ಮತ್ತೊಮ್ಮೆ ನಾನೇ ಮಾತು ಮುಂದುವರಿಸಿದೆ.

"ನಾನು ಸಾರ್, ಚಂದ್ರಶೇಖರ. ಆ ದಿವಸ-ಹೋದ ವರ್ಷ ಸಾರ್-ನನ್ನ ಇಂಗ್ಲಿಷ್ ಚೆನ್ನಾಗಿದೆ ಆಂದಿದ್ರೀ ಸಾರ್. It was last year"

ಅದೇನು ತೋರಿತೊ ಏನೊ. ಅಥವಾ ಮಸಕು ಮಸಕಾಗಿ ಗುರುತೊ ಸಿಕ್ಕಿತೇನೋ. ಅವರು ಆರಾಮ ಕುರ್ಚಿಯಮೇಲೆ ಕುಳಿತು ಕೊಳ್ಳುತ್ತಾ,"ಓ,ಹೌದು ಹೌದು,ರಂಗನಾಥನ್ ಮನೇಲಿ. ಹೌದು. ಏನಪ್ಪ?ಈಗೇನ್ ಬಂದೆ-ಈ ರಾತ್ರಿ ಹೊತ್ತು?" ಎಂದು ಕೇಳಿದರು.

ದೊಡ್ಡ ಮನುಷ್ಯರ ಸಮಯ ಅಮೂಲ್ಯವಾದುದೆಂದು ಕೇಳಿದ್ದೆ.