ಪುಟ:Vimoochane.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವನ ಬಯಕೆಗಳನ್ನು ಕಂಡು ನನ್ನ ಹೃದಯ ಭಾರವಾಯಿತು. ಹತ್ತು ವರ್ಷಗಳ ಕಾಲ ಮಣ್ಣುಹೊತ್ತಿದ್ದ ವಿದ್ಯಾಸರಸ್ವತಿಯ ಗುಡಿಗೆ ಉದ್ದಂಡ ನಮಸ್ಕಾರ ಹಾಕಿದ್ದಾಯಿತೆಂದು ಹೇಳಿಬಿಡಲೆ? ಎಂದು ಯೋಚಿಸಿದೆ.ಹಾಗೆ ಹೇಳಿದ್ದರೆ ತಂದೆಗೆ ಕಳವಳವಾಗುತ್ತಿತ್ತು.ಅವನ ಕಾಹಿಲೆಗೆ ಅದು ಪ್ರತಿಕೂಲವಾಗುತ್ತಿತ್ತು. ನಾನು ಸತ್ಯವನು ಮರೆಮಾಚಿದೆ.

"ಹೂನಪ್ಪಾ,ಹಾಗೇ ಮಾಡ್ತೀನಿ. ಸಂಜೆ ಬೆಳಿಗ್ಗೆ ಸಂಪಾದನೆ. ಹಗಲೊತ್ತು ಸ್ಕೂಲು.ಹಾಗೇ ಮಾಡ್ತೀನಪ್ಪ."ನನ್ನ ದುಡಿತದ ದಿನಗಳ ಆರಂಭವಾದುವು. ಶೇಷಗಿರಿ ನನಗೆ ನೆರವಾಗಿದ್ದ ನಿಜ ಆದರೆ ಊರಲ್ಲಿ ಬೇರೆಯೂ ಕೆಲವರು ಹುಡುಗರಿದ್ದರು.ಆವರು ತಮ್ಮ ಕ್ಷೇತ್ರಕ್ಕೆ ಬಂದ ಹೊಸಬನಾದ ನನ್ನನ್ನು ಮನಸಾರೆ ದ್ವೇಷಿಸಿದರು.

"ಕಲ್ತನ್ನೆ ಬೇರೆ. ಹೈ ಸ್ಕೂಲೆಗೆ ಹೋಗ್ಬಂದನ್ನೆ. ದೊಡ್ದ ಮನುಷ್ಯ."

ಆ ಮಾತುಗಳು ನನ್ನನ್ನು ಕುಟುಕುತ್ತಿದ್ದವು ಒಂದು ದಿನ ಅವರಲ್ಲೊಬ್ಬ ಪ್ರತ್ಯೇಕವಾಗಿದ್ದಾಗ ಅವನ ಬಳಿ ಹೋಗಿ,"ಏನಾದರೂ ಅಂದ್ಗಿಂದೀಯಾ ಜೋಕೆ," ಎಂದೆ. ಆ ದಿನ ಅವನು ಮಾತನಾಡಲಿಲ್ಲ. ಅದರೆ ಮರುದಿನ ಮದ್ಯಾಹ್ನದ ಹೊತ್ತು ಬಳಗದೊಡನೆ ಅವನು ಬಂದು ನನ್ನ ಪಕ್ಷದಲ್ಲಿ ಯಾರೂ ಇರಲಿಲ್ಲ ಒಬ್ಬನಾದ ನಾನು ಆ ನಾಲ್ವರನ್ನು ಇದಿರಿಸಿದೆ. ನನ್ನಲ್ಲಿ ಉಳಿದಿದ್ದ ಬೆಳಗ್ಗಿನ ಮೂರು ಪತ್ರಿಕೆಗಳನ್ನು ಅವರು ಕಿತ್ತುಕೊಂಡರು.ದುಡ್ಡು ಚೆಲ್ಲಾಪಿಲ್ಲಿಯಾಯಿತು. ಒಂದೇ ಒಂದಾಗಿದ್ದ ನನ್ನ ಷರಟು ಸ್ವಲ್ಪ ಹರಿಯಿತು ನಾನು ಆತ್ಮರಕ್ಷಣೆಗಾಗಿ ಅವರಮೇಲೆ ಕೈ ಮಾಡಿದೆ ಹಿಂದೆ ಶ್ರೀಮಂತ ಪುತ್ರನೊಬ್ಬನನ್ನು ಹಾಸಿಗೆ ಹಿಡಿಸಿದ್ದ ವೀರ ನಾನೆಂಬುದು ನಿಜ. ಆದರೆ ಈ ಹುಡುಗರು ಶ್ರೀಮಂತ ಪುತ್ರರಾಗಿರಲಿಲ್ಲ. ಇವರೂ ನನ್ನಂತೆಯೇ ಬಡವರು. ಆದರೆ ಅಸೂಯೆಯ ಹಸಿವಿನ ಸೈತಾನ ಅವರ ಒಳಹೊಕ್ಕಿದ್ದ. ನಾಲ್ಕು ಕಾಸು ದೊರೆಯಲೆಂದು ಅವರು