ಪುಟ:Vimoochane.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೧

ವಿಮೊಚನೆ

ಜಗಳ ಆಡುತ್ತಿದ್ದರು.ಅಥವಾ ತಮ್ಮ ದುಃಖ ನಿರಾಶೆಯನ್ನು ಮರೆಸ ಲೆಂದು ಒಬ್ಬರನ್ನೊಬ್ಬರು ಹರಿದು ತಿನ್ನುತ್ತಿದ್ದರು.

ಆ ಜಗಳದಲ್ಲಿ ನಾನು ಸೋಲಲೂ ಇಲ್ಲ,ಗೆಲ್ಲಲೂ ಇಲ್ಲ. ಅವರು ನಾಲ್ವರು, ನಾನು ಒಬ್ಬ. ಆ ದೃಷ್ಟಿಯಲ್ಲಿ ಅದು ನನ್ನ ವಿಜಯವೇ ಎನ್ನಬಹುದು.

ಅವರು ನನಗೆ ಇನ್ನೊಂದು ಅವಕಾಶ ಒದಗಿಸಿಕೊಟ್ಟರು. ಈ ಸಾರೆ ಹೆಚ್ಚು ಅನುಭವಿಯಾಗಿ ನಾನು ಬಂದಿದ್ದೆ. ಪತ್ರಿಕೆ ಹರಿಯಲಿಲ್ಲ. ದುಡ್ಡು ಚೆಲ್ಲಿಹೋಗಲಿಲ್ಲ ಷರಟು ಅವರ ಕೈಗೆ ಸಿಗಲಿಲ್ಲ. ಆದರೆ ನನ್ನ ಮುಷ್ಟಿಯ ರುಚಿಯನ್ನು ಅವರು ಕಂಡರು.

ನೀವು ನಂಬುವಿರೋ ಇಲ್ಲವೋ. ಆ ದಿನದಿಂದ ನಾನು ಆ ಬಳಗದ ಸದಸ್ಯನಾದೆ.ಅದಕ್ಕೆ ಕಾರಣ ಹುಡುಕಬೇಕೆ? ನಾವೆಲ್ಲಾ ಬಡವರಾಗಿದ್ದೆವು.ನಾವೆಲ್ಲಾ ಒಂದು ಗುಣದಿಂದ ಸ್ವಭಾವದಿಂದ ರೂಪುಗೊಂಡಿದ್ದೆವು. ನಾವು ಒಗ್ಗಟ್ಟಾಗಿ ಇರುವುದು ಸಹಜವಾಗಿತ್ತು.

.......ಹಾಗೆ ಐದು ತಿಂಗಳುಗಳು ಕಳೆದುವು. ದೀಪಾವಳಿಯ ಹಬ್ಬ ಬಂದು ಮುಗಿಯಿತು.

"ರಜಾದಲ್ಲೂ ಓದು ಚಂದ್ರು. ಚೆನ್ನಾಗಿ ಓದಿ ಜಾಸ್ತಿ ಮಾರ್ಕು ಪಡೀಬೇಕು,"ಎನ್ನುತ್ತಿದ್ದ ತಂದೆ.

ನಾನು ಯಾವುದೊ ಪುಸ್ತಕಗಳನ್ನು ಕೈಗೆತ್ತಿಕೊಂಡು ಕುಳಿತಿರು ತ್ತಿದ್ದೆ.ಪರಿಚಯದ ಒಬ್ಬಿಬ್ಬರಿಂದ ಇಂಗ್ಲಿಷ್ ಕತೆಕಾದಂಬರಿಗಳನ್ನು ಕೇಳಿ ತರುತ್ತಿದ್ದೆ. ಈ ಪುಸ್ತಕಗಳೆಲ್ಲಾ ಶಾಲೆಯ ಓದಿಗೆ ಸಂಬಂಧಿ ಸಿದ್ದಿರಬೇಕೆಂದು ತಂದೆ ಭಾವಿಸುತ್ತಿದ್ದ. ಬೆಳ್ಳಿಗೆ ಮತ್ತು ಸಂಜೆಯ ಆಂತರದೊಳಗೆ ಮಾರಾಟಕ್ಕೋಸ್ಕರ ಪಡೆಯುತ್ತಿದ್ದ ಪತ್ರಿಕೆಗಳನ್ನೂ ನಾನು ಓದುತ್ತಿದ್ದೆ. ಹೀಗಾಗಿ ಮೆದುಳಿಗೆ ತುಕ್ಕು ಹಿಡಿಯಲಿಲ್ಲ.ಆದರೆ ನಾನು ಪರೀಕ್ಷೆ ಕಟ್ಟ ಉತ್ತೀರ್ಣನಾಗುವುದು ಸಾಧ್ಯವಿರಲಿಲ್ಲ

ಆ ಸಂಜೆ, ನಾನು ಎಂದೆಂದಿಗೂ ಮರೆಯಲಾಗದ ಕ್ರೂರ ವಿಷ