ಮೇಲೆ ವಕ್ರಿಸಿಕೊಂಡೇ ಇದ್ದ ವಿಧಿಯನ್ನು ಆತ ಹಳಿದರೂ ಹಳಿದನೇ. ಹಾಗೆ ಮಾತನಾಡಿದಾಗ ಯಾವಾಗಲೂ ಅವನಿಗೆ ಸಮಾಧಾನವೆನಿ ಸುತ್ತಿತ್ತು. ಆದರೆ ಈ ದಿನ ತಂದೆ,ತುಟಿಗಳನ್ನು ಬಿಮ್ಮನೆ ಬಿಗಿದು ಕುಳಿತ.
ಅವನ ಮೌನ ಅಸಹನೀಯವಾಗಿತ್ತು. ಮಾತು ನಿಲ್ಲಿಸಿ ಆತ ಮೌನ ಸಮಾಧಿಯಲ್ಲಿ ಮುಳುಗಿದನೆಂದರೆ, ತಡೆಯಲಾಗದ ನೋವಿನಿಂದ ಆ ಹೃದಯ ಜರ್ಜರಿತವಾಗಿತ್ತೆಂದು ನಾನು ತಿಳಿದು ಕೋಳ್ಳುತ್ತಿದ್ದೆ.
ನಾನು ಸದ್ದಿಲ್ಲದೆ ಎದ್ದು ದೀಪ ಹಚ್ಚಿದೆ. ಅದರ ಸೊಡರು ಗಾಳಿಯಲ್ಲಿ ತೊರಾಡುತ್ತಿತ್ತು. ಕ್ಯಾಲೆಂಡರಿನ,ಇನೋಂದು ಚಿತ್ರದ,ತೂಗುಹಾಕಿದ್ದ ಬಟ್ಟೆ ಬರೆಯ, ನೆರಳುಗಳೆಲ್ಲ ಗೋಡೆಯಮೇಲೆ ನರ್ತಿಸುತ್ತಿದ್ದುವು.ವರ್ತನೆಯ ಹಾಲು ಒಯ್ದು ಕೋಡಲು ತಡವಾಯಿ ತೆಂದು ನಾನು ಲಗುಬಗೆಯಿಂದ ಹೊರಕ್ಕಿಳಿದೆ.ಅದ್ದಕ್ಕೆ ಸರಿಯಾಗಿ ಅಜ್ಜಿ ನನ್ನನ್ನು ಕರೆಯುತ್ತಿದ್ದರು.
"ಚಂದ್ರೂ........ಬಂದೈನೋ ಮರಿ........?"
ನಮ್ಮ ಗುಡಿಸಿಲಿನಲ್ಲಿ ದೀಪ ಹಚ್ಚಿದ್ದರೆ ನಾನು ಬಂದಿದ್ದೆ ಎಂದರ್ಥ. ಆಗ ಅಜ್ಜಿ ಮರಿಯನ್ನು ಕೂಗುವರು. ಅವರ ಪಾಲಿಗೆ ನಾನು ಯಾವಗಲೂ ಮರಿಯೇ.ವರ್ಷ ಆರಾದರೇನು, ಹದಿನಾ ರಾದರೇನು?ನಾನು ಯಾವಗಲೂ ಅಜ್ಜಿಯ ದೃಷ್ಟಿಯಲ್ಲಿ ಮರಿಯೇ.
ಮುಂದೆಯೂ ಅಷ್ಟೆ.ನಾನು ಕೆಟ್ಟುಹೋದೆನೆಂದು ನಾಲ್ಕು ಜನ ಬಂದು ಅಜ್ಜಿಗೆ ಹೇಳಿದಾಗಲೂ ಅವರು ಮರಿಯಬಗ್ಗೆ ಅವಿಶ್ವಾಸ ತಳೆಯಲಿಲ್ಲ.ಪೋಲೀಸರು ಬಂದು ವಿಚಾರಿಸಿದಾಗ, ಮರಿಯಮೇಲೆ ಆರೋಪಹೊರಿಸಿದ ಆ ಜನರನ್ನು ಅವರು ಶಪಿಸಿದರು.
ಪೋಲೀಸರು-
......ರಾತ್ರಿ ಹನ್ನೊಂದು ಹೊಡೆಯಲು ಇನ್ನು ಸ್ವಲ್ಪ ಹೊತ್ತಿದೆ.