ವಿಷಯಕ್ಕೆ ಹೋಗು

ಪುಟ:Vimoochane.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಈ ದಿನ ಬೆಳಗು ಮುಂಜಾನೆಯಿಂದ ನಾನು ಬರೆಯುತ್ತ ಬಂದಿದ್ದೇನೆ. ಎಂದೂ ಇಷ್ಟು ಬರೆದವನಲ್ಲ. ಕೈ ಬೆರಳುಗಳು ನೋಯುತ್ತಿವೆ. ಮಧ್ಯಾಹ್ನದ ನಿದ್ದೆಯನ್ನೂ ಬಿಟ್ಟುಕೊಟ್ಟು, ಹರಟೆಗೂ ಹೋಗದೆ,ದಿನದ ಪತ್ರಿಕೆಯನ್ನೂ ಓದದೆ, ನಾನು ಈ ಆತ್ಮವೃತ್ತವನ್ನು ಬರೆಯುತ್ತಿದ್ದೇನೆ.

ಇನ್ನೊಂದು ವಿಷಯ ಬರೆದು ನಾನು ವಿರಮಿಸಬೇಕು. ಮನು ಷ್ಯನಿಗೆ ನಿದ್ದೆ ಅಗತ್ಯ. ಮುಂದಿನ ವಾರದ ಮಾತು ಮುಂದೆ. ಆದರೆ ಸದ್ಯಃ ಆತ್ಮವೃತ್ತ ವನ್ನು ಬರೆಯುತ್ತಿದ್ದೇನೆ. ಆ ಬರವಣಿಗೆ ಸಾಧ್ಯವಾಗುವಂತೆ , ಇನ್ನು ಆರು ದಿನಗಳಲ್ಲಿ ಮುಕ್ತಾಯವಾಗುವಂತೆ, ನಾನು ಕೈಗೂ ಮೆದುಳಿಗೂ ವಿಶ್ರಾಂತಿ ಕೊಡಲೇಬೇಕು.

ಆದರೆ,ಈ ದಿನ ಹೇಳಲು ಉಳಿದಿರುವ ಈ ವಿಷಯವನ್ನು ಹೇಗೆ ಬರೆಯಲಿ__ಹೇಗೆ ಬರೆಯಲಿ?

ನನ್ನ ತಂದೆ ಮತ್ತು ನನ್ನ ಅಜ್ಜಿ.... ....

ಆ ಪೋಲೀಸರು.... .... ....

__ಆ ಘಟನೆ ನಡೆದುದು ಹೀಗೆ. ನಾನು ಶಾಲೆಬಿಟ್ಟ ಸಂಗತಿ ತಂದೆಗೆ ತಿಳಿದು ಕೆಲವು ತಿಂಗಳುಗಳಾಗಿದ್ದುವು. ಆತ ಸೊರಗುತ್ತಲೇ ಇದ್ದ. ಗುರುತು ಸಿಗದ ಹಾಗೆ ಬರಬರುತ್ತ ಬರಿಯಕಡ್ಡಿಯಾಗುತ್ತಿದ್ದ.

ಆ ಸಂಜೆ ಬೀದಿಯ ದೀಪಗಳು ಹತ್ತಿಕೊಂಡ ಹೊತ್ತಿಗೇ ನನ್ನ ಕೈಯಲ್ಲಿ ಇನ್ನೂ ಉಳಿದಿದ್ದ ಕೆಲವು ಪತ್ರಿಕೆಗಳನ್ನು ಮಾರಿ ಮುಗಿಸುವು ದಕ್ಕೋಸ್ಕರ ಬಸ್ ನಿಲ್ದಾಣದ ಆ ಚೌಕದಲ್ಲಿ ನಾನು ನಿಂತಿದ್ದೆ. ನನ್ನ ಪಕ್ಕದಲ್ಲೆ ಸೊಟು ಧರಿಸಿ, ರುಮಾಲು ಹೊತ್ತು, ಕೈಲಿ ನಡೆಗೋಲು ಹಿಡಿದಿದ್ದ ದೊಡ್ಡಮನುಷ್ಯರೊಬ್ಬರು ನಿಂತಿದ್ದರು

"ಪೇಪರ್ ಬೇಕೆ ಸಾರ್ ?" ಎಂದು ಕೇಳಿದ.

ಅವರು ನನ್ನನ್ನು ಕ್ಷಣಕಾಲ ದುರುಗುಟ್ಟಿ ನೋಡಿದರು. ಪೇಪರು ಬೇಡವೆನ್ನುವುದೇ ಆ ನೋಟದ ಅರ್ಥವಾಗಿತ್ತು.

ನಾನು ಅಲ್ಲಿದ್ದುದು ಎರಡೇ ನಿಮಿಷ. ಅಷ್ಟರಲ್ಲಿ ಆ ಕಳ್ಳತನ