ಪುಟ:Vimoochane.pdf/೮೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಇನ್ಸ್ ಪೆಕ್ಟರ್ ಗೆ ಹೇಳಿದ.

"ಈ ಪೇಪೆರ್ ಮಾರೊ ಹುಡುಗರು ಮಹಾ ಖಾದೀಮರು.........ಇವನ್ನ ನಂಬೊ ಹಂಗೇ ಇಲ್ಲ .ಇವನ ಮನೆ ಸರ್ಚ ಮಾಡ್ಪೇಕು. ಆಗ ಇವನೆಂಥವನು ಅಂಬೋದು ಗೊತ್ತಾಗತ್ತೆ."

ಇನ್ಸ್ ಪೆಕ್ಟರ್ ನಗುತಾ ಕೇಳಿದ.

"ಇವನಿನ್ನೂ ಮನೆಗೆ ಹೋಗಿಲ್ವಲ್ಲೊ ಮುನಿಯಪ್ಪಾ?"

ಮುನಿಯಪ್ಪ ತನ್ನ ಪೇಟವನ್ನು ಮುಂದಕ್ಕೆ ಬಾಗಿಸಿ ಅರ್ದ ಹಣೆ ಯನ್ನು ಮುಚಿಕೊಂಡ.ಅವನ ಹುಬ್ಬುಗಳು ಮೇಲಕ್ಕೆ ಹೋಗಿ ಆ ಪೀಟವನ್ನು ಮುಟ್ಟದುವು. ಬುದ್ಧಿವಂತನಾದ ಮುನಿಯಪ್ಪ ಯೋಚಿಸುತ್ತಿದ್ದ. ಉತ್ತರ ಅವನಿಗೆ ಹೊಳೆಯಿತೇನೊ!

"ಪಾಕೀಟು ಅಲ್ಲ ಸಾರ್. ಇವನು ಹಿಂದೇನೂ ಕಳ್ಳತನ ಮಾಡಿದ್ದರೆ ಮನೆಯೊಳಗೆ ಏನೊ ಸಿಗಾಕಿಲ್ವ?"

"ಮಾರಾಟಮಾಡದೆ ಮನೇಲಿ ಇಟ್ಟರತ್ತಾರೇನು ಕದ್ದ ಸಾಮಾನ್ನ?"

ಇದಕ್ಕೆ ಏನು ಉತ್ತರ ಕೊಡಬೇಕೆಂದು ಮುನೆಯಪ್ಪನಿಗೆ ತೋಚಲಿಲ್ಲ.ಆದರೂ ಇನ್ಸ್ ಪೆಕ್ಟರ್ ಸಾಹೇಬ, ನಮ್ಮ ಮನೆ ಶೋಧಿಸಬೇ ಕೆಂದು ನಿರ್ಧಾರಮಾಡಿದ. ನಮ್ಮ ಮನೆಯ ಶೋಧನೆ! ಮುಂದೇನಾಗುವುದು? ಮಗ ಸಂಭವೆತನಾಗುವನೆಂದು, ದೊಡ್ಡ ಮನುಷ್ಯನಾಗುವನೆಂದು, ಆಸೆ ಇರಿಸಿಕೊಂಡೀದ್ದ ತಂದೆ, ಪೋಲೀಸರ ಪ್ರಶ್ನೆಗಳಿಗೆ ಉತ್ತರ ಕೊಡಬೇಕು! ಅಜ್ಜಿ ತನ್ನ ಮರಿಯಿಂದ ತಮಗಾದ ಅವಮಾನವನ್ನು ಸಹಿಸಿಕೊಳ್ಳ ಬೇಕು! ನನಗೆ ದಿಕ್ಕು ತೋಚಲಿಲ್ಲ. ಗಲಿಬಿಲಿಯಾಯಿತು. ನಾನು ಇನ್ಸ್‌ಪೆಕ್ಟರನ ಮುಖ ನೋಡಿದೆ. ಆದುದಾಗಲೆಂದು ಇಂಗ್ಲಿಷ್ನಲ್ಲಿ ಆತನನ್ನು ಸಂಭೋಧಿಸಿದೆ.

"ಸಾರ್,ದಯವಿಟ್ಟು ನಮ್ಮ ಮನೆಗೆ ಹೋಗ್ಬಾರ್ದು ಸಾರ್ ನಾನು ಕಳ್ಳತನ ಮಾಡಿಲ್ಲ ಸಾರ್. ನನ್ನ ತಂದೆಗೆ ಟ.ಬಿ.ಕಾಯಿಲೆ