ಪುಟ:Vimoochane.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಲು! ಆ ಕತೆ ಹೇಳಿತು. ನ್ಯಾಯದ ರಕ್ಷಕರು ಆ ವೃದ್ದೆಯನ್ನು ಅವಮಾನಿಸಿದ್ದರು. ಆ ಮನೆಯ ಅಂಗಣದ ಒಂದೊಂದು ಕಂಬವೂ ಒಂದೊಂದು ಕಲ್ಲೂ ತಮಗಾದ ಅವಮಾನದ ಕತೆ ಹೇಳುತ್ತಿದ್ದುವು.

ಹನ್ನೆರಡು ಬಾರಿಸುತ್ತಿದೆ. ನಾನು ಬಳಲಿದ್ದೇನೆ ಜೈಲಿನ ಹನ್ನೆರಡು ಹೊಡೆದು ಮುಗಿದಮೇಲೆ ಮತ್ತೆ ತೂಕಡಿಸುವನು.........ಯಾರೋ ಓಬ್ಬರು ಆಳುತ್ತಿದ್ದಾರೆ. ನಾಳೆಯ ಕನಸು ಕಾಣುತ್ತಿರುವ ಕರಿಯ ಪಕ್ಕದ ಕೊಠಡಿಯಲ್ಲಿ ಗೊರಕೆ ಹೊಡೆಯುತ್ತಿದ್ದಾನೆ. ತಾನು ನಿರಾಪರಾಧಿಯೆಂದು ಸಾಧಿಸ ಹೊರಟಿರುವ ಯುವಕ ನವರಿಸುತ್ತಿದ್ದಾನೆ. ಯಾವುದೋ ನಾಯಿ ಬೋ ಬೋ ಬೋ ಎಂದು ಬಲು ದಿರ್ಘವಾಗಿ ಗೋಗರೆಯುತ್ತಿದೆ

..........ನಾಯಿ ಹೀಗೆ ಗೋಳಾಡಿದರೆ ಯಾರಿಗೋ ಸಾವು ಸನ್ನಿಹಿತವಾಯಿತೆಂದು ಅರ್ಥವಂತೆ ಅಜ್ಜಿ ಹಾಗೆ ಹೇಳುತ್ತಿದ್ದರು. ಸಾವಿನ ಮರಣದ ವಿಷಯಗಳೆಲ್ಲಾ ಮನುಷ್ಯನಿಗಿಂತ ಚೆನ್ನಾಗಿ ಆ ಮೂಕ ಪ್ರಾಣಿಗಳಿಗೆ ಅರ್ಥವಂತೆ. ನಿಜವೊ ಅಲ್ಲವೊ ನನಗೆ ತಿಳಿಯದು. ಸಾಂಸಾರವಂದಿಗನಲ್ಲದ ನಾನು ಆ ಬಗ್ಗೆ ಸಂಶೊಧನೆ ಮಾಡಿಲ್ಲ.

ಪೋಲೀಸರ ದಾಖಲೆಯಲ್ಲಿ ಹೆಸರು ಬರೆಸಿಕೊಂಡ ಆ ದಿನ ಕಳೆದು ನಾಲ್ಕು ತಿಂಗಳಾಗಿತ್ತು.ತಂದೆಯ ಕಾಹಿಲೆ ಹೆಚ್ಚುತ್ತಲೇ ಇದ್ದ ದಿನಗಳು-ತನ್ನ ಜೀವನದ ಬಯಕೆಗಳೆಲ್ಲಾ ಮುಣ್ಣು ಪಾಲಾದ ಮೇಲೆ ಆ ಮನೋರೋಗವೆ ಅವನಿಗೆ ಕಠಾರಪ್ರಾಯವಾಯಿತು.

ಆ ಸಂಜೆ ಅದೇ ಮನೆಗೆ, ಪತ್ರಿಕೆಯ ಮಾರಾಟ ಮುಗಿಸಿ, ಹಿಂತಿರುಗಿ ಬಂದಿದ್ದೇನಷ್ಟೆ. ಮನೆಗೆ ಅಂಗಳದಾಚೆ ನಾಯಿಯೊಂದು ಬೋ ಬೋ ಬೋ ಎಂದಿತು. ಅಜ್ಜಿ ಸೌದೆಯ ಕೊರಡನ್ನೆತ್ತಿಕೊಂಡು ಆ ನಾಯಿಯನ್ನು ಬಲು ದೂರದ ತನಕ ಓಡಿಸಿಕೊಂಡು ಹೋದರು. ನಾಯಿ ಓಡಿಹೋಯಿತು.