119
“ನೆನ್ನೆ ನಾತ್ರೆನಾಗ ಬಾಡಿನೆಸರ ಮಾಡ್ನಿಲ್ಲಾಂತ ನನ್ನ ವಂದಿಗುಟ್ಟೆ ಕದ್ನ ಮಾಡ್ನಿಲ್ಲ ನಿಮ್ಮಯ್ಯ?- ಈಗ ಆ ಪುಣ್ಯಾತ್ಮನಿಗೆ ಅದ್ಯಾವ ಮಾರಕ್ಕ ತಾಯಿ ಗ್ಯಾನ ಕ್ವಟ್ಟಳೊ ಕಾಣೆ. ಬೋ ಜಿನದ ಮ್ಯಾಗೆ, ಈ ದಿವ್ಸ ಗೇದ ದುಡ್ಡ ಪುರ್ತ ನನ್ನ ಕಯ್ಯಿಗೆ ಹಟ್ಟಿ ‘ಕಲ್ಯಾಣಿ-ನಾಳಿಕೆ ಈ ದುಡ್ಡು, ನಿನ್ನ ಕಂಬಳದ ದುಡ್ಡು, ಲಕ್ಕ ಗೇದು ತಂದ ದುಡ್ಡು ಯೆಲ್ಲಾನೂವೆ ಜಮಾಯ್ಸಿ ಪಸಂದಾಗಿ ಬಾಡೀನ ಸಾರು ಮಾಡು ಮತ್ತೆ. ರಾಗಿ ಮುದ್ದೆಗೂವೆ ಬಾಡಿನ ಸಾರಿಗೂವೆ ವೈನಾಯ್ತದೆ. ಸುಮಾರು ಜಿನವೇ ಆಯ್ತು ನಿನ್ನ ಕಯ್ಯಿನ ಬಾಡಿನ ಸಾರು ರುತಿ ನ್ವಾಡಿ. ಆ ರಾಚನ ಹಳು ಹುರಿ ಬಾಡು ತಿಂದು ಬಾಯೆಲ್ಲ ಕೆಟ್ಟೋಗದೆ, ಅಂದೋನು ‘ಜಪ್ಪಯ್ಯನ ಮಟದ ಅಯ್ನೋರು ಯೋಳಿ ಕಳಿಸವ್ರೆ. ನಾಳೀಕೆ ಅವರ ಮಠದ ಜಮೀನಿನ ಕೇಮೆ ಇರಬೈದೇನೊ. ಕ್ಯಾಳಿಕಂಬತ್ತೀನಿ’ ಅಂತೇಳಿ, ಅಯ್ಯ ಆ ಕಡಿಕೋದ. ನೀ ಈ ಕಡೀಕೆ ಬಂದೆ” ಅಂದ್ಲು.
ಅಂಗಂದು, ಸೊಂಟದಿಂದ ಇಮ್ಮಣಿ ಚೀಲವ ತಗದ ಅದರೊಳಿಕೆ ಅಂಗೈ ದುಡ್ನೆಲ್ಲ ಸುರುದು, ಮತ್ತೆ ಇಮ್ಮಣಿ ಚೀಲವ ಸೊಂಟಕೇ ಸಿಕ್ಕುಸ್ತ.
“ಲಕ್ಕ, ನಿಮ್ಮಯ್ಯನ ಕ್ವಾಪ-ಆದ್ರಿ ಮಲೆ ಇಲ್ವ, ಅಂಗೆ. ಅದು ಬಂದು ಬೀಳೋ ಬಿರುಸ್ನಲ್ಲಿ -ಹಾಳು ಗಂಡಸಿನ ಜಲ್ಮ ಎಂಗಸಾಗಾರೂವೆ ಉಟ್ಟಬಾರದಾಗಿತ್ತ- ಅನ್ನುಸಿ, ಅದೇ ಬಿರುಸ್ನಲ್ಲಿ ನಿಂತೋಗಕ್ಕಿಲ್ಲ, ಅಂಗೆ!’
- * * *
ಚಾಪೆ ಮ್ಯಾಲೆ ವೊಳ್ಳಾಡ್ತ ಮನಗಿದ್ದ ಲಕ್ಕ ಯೋಚ್ಣೆ ಮಾಡ್ತಾನೆ ಇದ್ದ... ಅಯ್ಯನಲ್ಲಿ ಇಂದಕಿದ್ದ ಕ್ವಾಪ ಬತ್ತಾಬತ್ತಾ ಯೆತ್ತಾಗಿ ವೊಂಟೋಯ್ತು... ಈಗ್ಲೂವೆ ಬರಕ್ಕಿಲ್ಲ ಅಂತಲ್ಲ. ಬತ್ತದೆ, ಮಾತ್ರ, ಆ ಕ್ವಾಪದಲ್ಲಿ ಇಂದ್ಕೆ ಇದ್ದಂತಾ ಊರಣ ಇವತ್ತಿಲ್ಲ...ಯಾಕೆ?... ಹಯ್ಯೊ, ಯಾಕೆ ಅಂತ ಈ ಇಚಾರವ ಐಗಂಚಿ ಪಟ್ಲಕ್ಕೋಗಿ ಉಡುಕಬೇಕ?... ನಮ್ಮಣ್ಣ ಬದುಕಿರಾ ಕಾಲದಾಗೆ ನಮ್ಮಯ್ಯ ಕುಸಾಮತ್ತೆ ಕುಸಾಮತ್ತು! ಅಣ್ಣ ಜ್ವೊತೆಗಿದ್ದಾಗ ಅಯ್ಯ ಆಕಾಸದಾಗೆ ನಡೀತಿದ್ದ. ಆಸೇ ವೊರತು, ಆಗೇನು ಅಯ್ಯ ಯಾರ ಮ್ಯಾಲೂವೆ ತಟಕ್ನೆ ಕ್ವಾಪ ಮಾಡಿಕತ್ತಿರ್ನಿಲ್ಲ- ಮಾತ್ಮಾತಿಗೂ ಸಿಣಿಸಿಣೀಂತಿರನಿಲ್ಲ. ತಾನೂ ನಗೋದು, ಬ್ಯರೆಯೋರ್ನು ಕುಸಿ ಮಾಡಿ ನಗಸೋನು... ನಮ್ಮಣ್ಣ ವೋದ, ಇಂದುಗುಟ್ಲೆ ಅಮರಿಕತ್ತು ಕ್ವಾಪ ನಮ್ಮಯ್ಯ!...
ಗೆಜ್ಜುಗಣ್ಣ, ಅಯ್ಯಂಗೆ ಇರೀ ಮಗ. ನಡೂವೆ ಅವಳಿ ಜವಳಿ ಮಕ್ಕಳು-ಒಂದು ಗಂಡು, ಒಂದು ಎಣ್ಣು. ಇದಾದ ನಾಕೈದು ವರುಸಕೆ ಉಟ್ಟಿದೋನಂತೆ