ವಿಷಯಕ್ಕೆ ಹೋಗು

ಪುಟ:Vyshakha.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ “ರಾಜಧಾನಿಯಂತಾ ಎಂಗಸಲು”- ಅಂತ ಬೇತುಕತ್ತಿದ್ದದ್ದ ತಾನು ಅದೇಟು ಸಲ ಕೇಳಿರನಿಲ್ಲ?...

ಸಿದ್ಧಮ್ಮ ಕೆಂಗಣಪ್ಪಂಗೆ ಏಡನೆ ಸಮ್ಮಂದವಂತೆ. ಮೊದಲ್ನೆ ಎಡತಿ ಒಳ್ಳೆಯೋಳಂತೆ. ಆ ಪುಣಾತಿಗ್ತಿತಿ ಇವ್ನ ಜ್ವತೇಲಿ ನೆಟ್ಟಗೆ ನಾಕು ವರುಸ ಸಂಸಾರ ಮಾಡ್ನಿಲ್ಲವಂತೆ. ಈ ಮಾರಾಯನೊ ಊರಿನಾಗೆ ಒಂದು ಪಡ್ಡೆ ಎಣ್ಣು ಕಂಡುದ್ದೆ ತಡ, ಅದರ ತಿಕ ಮೂಸಿಗಂಡು ಓಡಾಡೂ ಜಾತಿ!... ಈವಯ್ಯನ ಚರ್ಯ ಕಂಡು ಅಯಮ್ಮ ಕ್ವರತಿ, ಕಡ್ಯಾಗಿ ಮೈಸೂರ್ನ ಚಯದ ಆಸ್ಪತ್ರೆ ಸೇರಿ, ಯಾವತ್ತೊ ಒಂದು ಜಿನ ಸಿವನ ಪಾದ ಸೇರಿಕಂಡಿದ್ಲು- ಈ ಯೆಲ್ಲ ಚಮಾಚಾರ್ವ ಅಯ್ಯನೆ ಒಂದು ನಾತ್ರೆ, ನಾನು ನಿದ್ದೆ ಮಾಡ್ತಾ ಅವ್ನೆ ಅಂತ ತಿಳುದು, ಅವ್ವನ ಕುಟ್ಟೆಗುಟ್ಟಾಗಿ ಯೇಳ್ತಿದ್ದದ್ದು ಈಗ ಗ್ಯಾಪನ ಆಗಿತ್ತು...

ಕೆಂಗಣಪ್ಪ ನಸುಗುನ್ನಿ ಅಂಗೆ,

“ಯಾಕ್ಲ ನಿಂಗ, ಅಮ್ಮಾರು ಕ್ಯಾಳಿದ ಮ್ಯಾಲೆ ಬಂದ ಇಸ್ಯ ಅದೇನು ಯೋಳಿಬುಡು” ಅಂದಾಗ, ಅಯ್ಯ ತಡರುಸ್ತ ಬಾಯಿ ಬಿಚ್ಚದ.

“ಕೆಂಗಣಪ್ಪಾರೆ, ನನ್ನ ಇರಿ ಹೈದ್ನ ಲಗ್ನಕ್ಕೇಂತ ನಿಮ್ಮತ್ರ ಸಾಲನೇನೊ ಮಾಡ್ದೆ. ಆದ್ರೆ ಆ ಬಿಸಿಲಮಾರಮ್ಮ ತಾಯಿಗೆ ನಮ್ಮ ವಂಸದ ಮ್ಯಾಲೆ ಅದೇನು ಕ್ವಾಪವೊ ಕಾಣೆ. ತಲಕಾಡ್ಗೆ ನಿಮ್ಮ ಜ್ವತೆ ಬಂದಿದ್ದೋನ್ನ ಆ ಕಾವೇರಿ ವೋಲೆ ತಿಂದಕತ್ತು...” ಅಂತಿದ್ದುದ ಅಲ್ಲಿಗೆ ತುಂಡುಮಾಡಿ,

“ಅದೆಲ್ಲ ಗ್ವತ್ತೆ ಅದಲ್ಲೊ, ನಿಂಗ... ಅದು ಅವನ ನಶೀಬು... ಮುಂದ್ಕೆ ನಮ್ಮ ಅಣದ ಇಸ್ಯ ಯೆಂಗೆ ಚುಕ್ತಾ ಮಾಡಬೇಕು ಅಂತೀಯೆ, ಅದು ಹ್ಯಾಳಪ್ಪ-“ ಕೆಂಗಣಪ್ಪ ಬ್ಯಾರೆ ಮಾತ ಕಿವಿಗೆ ಅಕ್ಕಳ್ಳದೆ ಮುಖ್ಯ ಇಸ್ಯಕ್ಕೇ ಇಳುದಿದ್ದ...

ಅಯ್ಯ ನಾನೂರು ರೂಪಾಯಿ ಅಂಗಿ ಸಿಕ್ಕಿದ್ದ ಕಿಸ್ಯಿಂದ ತಗದು ಎಣಿಸಿ ಎಣಿಸಿ ದೂರದಿಂದ ಕೆಂಗಣಪ್ನ ಕಯ್ಯಿಗೆ ಆಕಕ್ಕೊದಾಗ, ಉಬ್ಬ ಗಂಟಾಕಿ, ಉರಿಮಾರಿಯಾಗಿ ನಿಂತಿದ್ದ ಅವ್ನ ಎಡತಿ ಸಿದ್ದಮ್ಮ ಸುಮ್ಕೆ ಬಿಗಿಯಾಗಿ ಕಯ್ಯ ನೀಡುದ್ದೇ ಸಮ, ಕೆಂಗಣಪ್ಪ ಮೊಖ ಸುಂಡೋಗಿ ತನ್ನ ಕಯ್ಯ ಕೆಳುಕ್ಕಿಳುಸ್ದ...ಕಯ್ಯಿಗೆ ಬಿದ್ದ ನೋಟುಗಳ ತಾನೂ ಒಂದು ಸರ್ತಿ ಎಣುಸಿ,

“ಇದ್ಯಾನೋ ನಿಂಗ- ನಮ್ಮೋರು ನಿಂಗೆ ಕ್ವಟ್ಟಿರಾದು ಆರುನೂರು ರೂಪಾಯಿ ಅಲ್ವೇನ್ಲ?” ಸಿದ್ದಮ್ಮ ಉಬ್ಬ ಎತ್ಕಂಡು ಕ್ಯಾಳಿದ್ಲು...

“ಸಾಜ ಕನ್ರವ್ವ. ನಿಮ್ಮೇಜಾನ್ರು ನಂಗೆ ಕ್ವಟ್ಟಿದ್ದು ಆರುನೂರು ರೂಪಯೇಯ. ಕ್ವಟ್ಟಿದ್ದ ದುಡ್ಡು ಇಲ್ಲ ಅಂತ ಅದ್ಯಾವ ಬಾಯ್ಲಿ ಯೋಳ್ಲಿ? ಆದ್ರೆ,