ವಿಷಯಕ್ಕೆ ಹೋಗು

ಪುಟ:Vyshakha.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬

ಅಡೀಗೆ ಇನ್ನೊಂದು ಕಟ್ಟು-ಇಂಗೆ ಅಡಿಕೆಮರಕೆ ಬಿಗೀತಾ ಬಂದ್ರು... ಬಲಿತಿರೊ ಕಡ್ಡಿ ಕಾಣಿಡ್ತು. ಕಟ್ಟು ಬಿಗುದು ನಿಲಿಸಿದ್ರು ಅಲ್ಲಿಂದಾಚೆ ಹಂಬಿನ ತುದಿಗೆ ಮೂರು ನಾಕು ಅಡಿ ಬುಟ್ಟು, ಹಗ್ಗ ಕಟ್ಟಿದ್ರು... ಯಾಕೆ ಹಂಗೆ ಹಗ್ಗ ಕಟ್ಟಿದಿರಿ ಅಯ್ಯ ಅಂತ, ಯೆಲ್ಲ ಮುಗುದಮ್ಯಾಲೆ, ನಾ ಕ್ಯಾಲಿದ್ದಕೆ- ಅಂಗೆ ಹಗ್ಗದ ಕಟ್ಟ ಆಕದೆ ವೋದ್ರೆ, ಹಗ್ಗ ಕಟ್ಟದೆ ಅಂಗೇಯ ಹಂಬ ಇಳುಕಿದ್ರೆ, ಯೆಲ್ಲ ಹಂಬೂವೆ, ಅಸುರಂಬು ಸೈತವಾಗಿ, ಮೊಗಚಿಕಳ್ಳಕ್ಕಿಲ್ಲವೇನ್ಲ? ಅಂತ ಇವರಿಸಿದ್ರು... ಹಂಬಿನತುದಿಗ ಮೂರು ನಾಕಡಿ ಬುಟ್ಟು ಹಗ್ಗ ಕಟ್ಟಿದ ಮ್ಯಾಗೆ, ಅಡಿಕೆ ಮರವ ಕಚ್ಚಿಗಂಡಿದ್ದ ಪಲ್ಲಿಗಳ್ನೂವೆ, ಅಂಗೇಯ ಬಾಳೆನಾರ್ನ ಕಟ್ಟುಗಳ್ನೂವೆ ಸಡುಲಿಸಿದ್ರು. ಜಾರುಸ್ದ ಹಂಬಿನ ಕಡ್ಡಿಗಳ, ಅಲ್ಲಿಂದ ಕೆಳುಕ್ಕೆ ಉಪಾಯ್ದಲ್ಲಿ ಇಳುಕಿದ್ರು. ಇಳುಕ್ದ ಕಡ್ಡಿಗಳ ಗುಂಡಗೆ ಮೊಡಚಿ ತೆಕ್ಕೆ ಮಾಡಿದ್ರು. ವೋಟರಲ್ಲಿ ತೋಡಿದ್ದ ಗುಂಡಿಗೆ ನಾನು ಗೊಬ್ಬರ ತಂದಾಕಿದ್ದೆ. ಅದರೊಳೀಕೆ ತೆಕ್ಕೆ ಮಾಡಿದ್ದ ಹಂಬಿನ ಕಡ್ಡಿಗಳ ಸಾಸ್ತ್ರಿಗೋಳು ತುರುಕಿದ್ರು. ಅದರ ಮ್ಯಾಲೆ ಮಣ್ಣ ತಳ್ಳಿ ಆ ಗುಂಡಿ ಮುಚ್ಚದ್ರು. ನಾನು ನೆಲಬಾವಿಂದ ಏಡು ಮಣ್ಣಿನ ಗಡಿಗೆ ತುಂಬ ನೀರ ವೊತ್ತು ತಂದು, ಜೀವ ನೀರ ಬುಟ್ಟಿದೆ...

ಮದ್ದಿನ್ನ ಸ್ವಾಮಿ ನೆತ್ತಿ ಬುಟ್ಟು ಕೆಳುಕ್ಕೆ ಇಳುದು ಆಗ್ಲೆ ಪಡುವ್ಲಲ್ಲಿ ಭೂಮಿ ಅಂಚ ಮುಟ್ತಾ ಇದ್ದ... ಇಂಗೆ ಸಾಗಿತ್ತು ನಮ್ಮ ಕೆಲ್ಸಸಾಸ್ತ್ರಿಗಳು ಹಂಬು ಇಳುಕಾದು, ತೆಕ್ಕೆ ಮೊಡಚಿ ಗುಂಡಿ ವಳೀಕಾಕಿ ಮಣ್ಣ ತಳ್ಳಾದು ನಾನು ಗಡಿಗೇಲಿ ನೀರ ವೊತ್ತುಗಂಬಂದು ಆ ಹಂಬಿಗೆ ಜೀವ ನೀರ ಎರಯಾದು...

ಸಾಸ್ತ್ರಿಗೊಳು ಇನ್ನೊಂದು ಮರದ ಹಂಬ ಇಳುಕಕ್ಕೆ, ಬಿದಿರೇಣಿ ಇಡುದು ಇನ್ನೇನು ಅತ್ತಬೇಕು ಅನ್ನಾದ್ರಲ್ಲಿ, ಅವ್ರಿಗೆಯೇನನ್ನುಸ್ತೊ, ನನ್ನ ಕಡೀಕೆ ತಿರುಗಿ-

“ಆಸಿವಾಯ್ತದೇನ್ಲ ಲಕ್ಕ?... ವೊತ್ತಾರೆ ವೊಟ್ಟೆಗೇನು ತಕ್ಕಂಡಿದ್ದೆ?” ಕ್ಯಾಳಿದ್ದರು.

“ತಂಗಳಿಟ್ಟು ತಿಂದಿದ್ದೆ ಕನ್ರಯ್ಯ. “-ನಾ ಯೋಳ್ತ ಇದ್ದಂಗೆ,

“ಚ್, ಚ್... ಕೆಲ್ಸದ ಗ್ಯಾನದಲ್ಲಿ ಊಟವೆ ಮರುತೊಯ್ತು. ನಿಂಗೂ ಬಾಳ ಅಸಿವಾಗಿರಬೈದು... ಇದೇ ಕೊನೇ ಮರ, ಈವೊತ್ತಿಗೆ. ಇದು ಮುಗಿಸಿ, ವೊಂಟುಬುಡಾವ.” ಯೋಳಿ, ಅತ್ತಕ್ಕೆ ಸುರು ಮಾಡಿದ್ರು... ನಾನು ತಲೆ ಕೆರೀತ,

“ಅಯ್ಯ...” ತ್ವದಲ್ದೆ. “ಯೇನ್ಲ?...” ಚೋಜಿಗ ಪಡ್ತ ಕ್ಯಾಳಿದ್ರು.