137
ಬಲದಾ ಕಾಲ ಯೆಬ್ಬೆಟ್ನಿಂದ ನೆಲ ಮೀಟ್ರ, ನಾನು-
“ಈ ಮರದ ಹಂಬ ನಂಗೇ ಬುಡಿ. ನಾನು ಇಳುಕ್ತೀನಿ ಕನ್ರಯ್ಯ” ಅಂತ ತಡ್ವರಿಸಿದ್ದೆ. ಸಾಸ್ತ್ರಿಗೊಳು ನಗಾಡ್ತ.
“ಈ ಹಂಬು ಇಳುಕೊ ಕೆಲ್ಸ ಬಾಳ ಸೂಕ್ಸ್ಮದ್ದು. ಇಂಗೇ ಬಂದು ಬಂದು ನ್ವಾಡ್ತ ಕಲ್ತುಕೊ. ನೀನು ಬೆಳುದು ದೊಡ್ಡೋನಾದಂಗೆ, ನೀನೂ ಒಂದು ಜಿನ ನನ್ನಂಗೆ ಏಣಿ ಅತ್ತಿ ಹಂಬ ಇಳುಕೀವಂತೆ.” ಯೋಳಿ, ಬಿದಿರೇಣಿ ಅತ್ತೋಗಿದ್ರು...
ಕೊನೆ ಗುಂಡಿಗೆ ಮಣ್ಣು ತಳ್ಳಿ, ನೀರುಣ್ಣುಸಿ ಆಗಿತ್ತು, ಕೊಳದಾಗಿ ಕೈಕಾಲು ತೊಳುದು ಸಾಸ್ತ್ರಿಗೊಳು ಊರು ದಿಕ್ಕೆ ಮೊಖ ಮಾಡಿದ್ರು. ಹಾದೀಲಿ, “ನಿಮ್ಮ ಮಗಾರು ಎಲ್ಲಿ ಅಯ್ಯಾರೆ?” ಕುತೂಹಲವಾಗಿ ಕ್ಯಾಳಿದ್ದೆ. “ಅಡಿಕೆ ಯಾಪಾರಕೆ ಸಿವಮೊಗ್ಗದ ಕಡೆ ಶಾಂಪಲ್ ತಕ್ಕಂಡೋಗವ್ನೆ. ಮೊನ್ನೆ ತಾನೆ ವೊದ್ದು. ಬರಾದು ಇನ್ನೂ ಅಯಿದರು ದಿನವೇ ಆಗಬೈದು” ಅಂದಿದ್ರು.
ಮುಂದ್ಕೆ, ಹಾದಿ ಉದ್ದಕ್ಕೂ ಏಡು ಆಳಿನದೂ ಮಾತಿಲ್ಲ. ಅಟ್ಟಿ ತಲುಪುತಿಒದ್ದಂಗೆ, ಸಾಸ್ತ್ರಿಗಳು, “ಈವೊತ್ತಿಗಾಯ್ತಲ್ಲ, ನಾಳೀಕೂ ಬಂದುಬುಡು. ಇವೊತ್ತಿಂದೂ ನಾಳೆದೂ ಯೆಲ್ಲಾನೂ ಸೇರುಸಿ, ಒಟ್ಟಿಗೇ ಕೂಲಿ ಕ್ವಟ್ಟು ಬುಡ್ತೀನಿ” ಅಂದ್ರು. ನನ್ನ ಮುಖ ಸಪ್ಪಗಾಯ್ತು. “ನಾಳೀಕೆ ನಾ ಯೆಂಗೆ ಬರಾನೆ?” -ಪ್ರಸ್ನೆ ಎಸುದು ಆಕಾಸ ನ್ವಾಡುದಾಗ, ಸಾಸ್ತ್ರಿಗಳು,
“ಅಂಗಂದ್ರೆ ಯೇನೋ ಅರ್ತ?” –ಕ್ಯಾಳಿದ್ರು. ನಡುದದ್ನೆಲ್ಲಾನೂವೆ ತುದಿಬಾಲ ಒಂದನೂ ಬುಡದೆ ನಾ ಯೋಳಿಕಂಡಾಗ,
“ವಸಿ ಇಲ್ಲೆ ನಿಂತುಗೊ” ಅಂದೋರು, ದಾಪುಗಾಲು ಆಕ್ತ ಅಟ್ಟೀವಳಿಕೆ ವೋಗಿ, ತುಸ ವ್ಯಾಳ್ಯದಲ್ಲೇ ವೋರೀಕೆ ಬಂದು, ಇಡೀಂತ ಆಯಿವತ್ತು ರೂಪಾಯಿ ನನ್ನ ಕಯ್ಯಾಗಿಡ್ತ.
“ಈ ಅಣವ ನಿನ್ನ ಜೀತಕೆ ಕ್ವಡ್ತಾ ಇಲ್ಲ. ಈಗ ಬಂದಿರೊ ದರದು ತೀರುಸ್ಕೊ. ನಮ್ಮ ತ್ವಾಟಕ್ಕೆ ನೀನು ಬಂದೂ ಬಂದೂ ಕಂಬಳ ಮಾಡದಂಗೆ ಈ ಅಣವ ಕಳೆ ಆಕ್ತ ವೋಯ್ತಿನಿ. ಯಾವೊತ್ತೂ ಒಂದು ಜಿನ ತೀರ್ತದೆ. ಯೋಚ್ಣೆ