ವಿಷಯಕ್ಕೆ ಹೋಗು

ಪುಟ:Vyshakha.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

139

ರೂಪಾಯಿ ಸಾಲ ಮಾತ್ರ ಇನ್ನೂವೆ ತೀರಿರನಿಲ್ಲ!... ನಾನು ಏಟು ದುಡಿದ್ರೂವೆ, ಅವ್ವನ ದುಡಿಮೇಲಿ ತಾನೆ ನಮ್ಮ ಗುಡ್ಲು ಭಂಗ ಸಾಗ್ತಿದ್ದದ್ದು!... ಇದ ತಿಳುಕಂಡು ಸಾಸ್ತ್ರಿಗೊಳು ನಾ ಮಾಡ್ದ ಕೆಲುಸಕೆ ಆ ಆ ದಿನದ ಕೂಲ್ಯ ಆ ಆ ದಿನವೇ-ನಾನು ಬ್ಯಾಡಿ ಬ್ಯಾಡಿ ಅಂದರೂವೆ ಕ್ವಟ್ಟು ಬುಡ್ತಾ ಇದ್ರು...

ಇಂಗಾಡಿ ಅಂಗಾಡಿ ಒಂದು ವರುಸ ಪುತ್ ಕೆಲಸ ಮಾಡಿದ್ಕೆ, ಅಯಿವತ್ತು ರೂಪಾಯಿ ಸಾಲದಲ್ಲಿ ನಾನು ತೀರುಸಕ್ಕಾದ್ದು ಅತ್ತೇ ರೂಪಾಯಿ! ಇನ್ನೂ ನಲವತ್ತು ರೂಪಾಯಿ ಸಾಲ ಉಳುಕಂಡಿತ್ತು. ಆದ ತೀರುಸಕ್ಕೆ ಪುನಾ ನಂಗೆ ಸಾಸ್ತ್ರಿಗೊಳ ತ್ವಾಟದಲ್ಲೆ ದುಡುಮೆ!...

ಮುಂದಿನ ದಿನಗೊಳಲ್ಲಿ, ಅಯ್ಯ, ಅವ್ವ, ನಾನೂ ಮೂರಾಳೂವೆ ಮೊಗ್ಗೆ ಕವಡೆ ಕಟ್ಕಂಡೇ ದುಡುದ್ರೂವೆ, ಸಾಸ್ತ್ರಗೊಳ ಸಾಲ ವರ್ಷಾನುಗಟ್ಲೆ ಉಳುದುಬುಡ್ತು. ಯಕೆ ಅಂದ್ರೆ, ನಮ್ಮಯ್ಯ ಇರಿ ಮಗ ವೊದ್ದ ಮರಿಯಕ್ಕೆ ಕುಡುತ ಪಾಟ ಮಾಡ್ಕಂಡ. ರಾಚನ ಎಂಡದಂಗಡಿಗೇ ಅವ್ನ ಸಂಪಾದ್ನೇಲಿ ಮುಕ್ಕಾಲು ಮೂರುವೀಸ ಪಾಲು ವೋಗೋದ್ರ ಜ್ವತ್ಗೆ, ಒಂದೊಂದು ಸರ್ತಿ ನಮ್ಮವ್ವ ದುಡುವ ದುಡ್ನೂ ಅವ್ನು ಕಿತ್ಕಂಡೋಗಿ ರಾಚನ ಗಲ್ಲಕೆ ಎಸೀತಿದ್ದ!...

ನಾನು ಎದ್ದೋನೆ ಇತ್ತಿಲ ಕಡೀಕೋಗಿ, ಕೈಕಾಲು ಮೊಖ ತೊಳುದು, ತಂಗಳ ಉಂಡು, ರೋಜಾದಂಗೆ ಕಂಬಳಕೊಂಟೆ. ನಾನಂಗೇ ವೋಯ್ತಾ ಇರೋನೂವೆ ಉಪಾದ್ಯರ ಮಠ ಸಿಕ್ತು. ಆ ಮಠವ ತಟಾಯ್ತಿದ್ದಮಗೆ, ನನ್ನ ವಳುಗಡೆ ಸತ್ತೋದೋರ ಮುಂದೆ ತಮಟೆ ಬಾರುಸ್ದಂಗಾಯ್ತು!- ಮಠದ ವಳೀಕೊಯ್ತಿದ್ದ ಉಡುಗರ್ನೇ ಕಣ್ಣೀರು ತುಂಬಿ ನ್ವಾಡ್ತಿದ್ದಂಗೆ, ನನ್ನ ಮನಸು ಇಂದ್ಕೆ ಅದೇ ಜಾಗ್ದಲ್ಲಿ ನಡುದೊಂದು ಸಂಗ್ತ್ಯ ನೆನಸಿಕತ್ತಿತ್ತು:

ನಾನೂವೆ ಆಗ ಇದೇ ಮಠದಲ್ಲಿ ಓಡ್ತಾ ಇದ್ದೆ. ಒಂದು ಜಿನ ನಾನು ಮಠಕೆ ವೊಂಡೋವೊತ್ಗೆ ಮಳೆಯೂವೆ ಮಂಟಾಡಿಕಂತು ಬತ್ತು. ಬ್ಯಾಡ ಬ್ಯಡ ಅಂದ್ರೂವೆ, ಅವ್ವ ಗೊರಗು ತಂದು ಕ್ವಟ್ಟಿದ್ಲು. ತಲೆ ಮ್ಯಾಲೆ ನೂಲುನೂಲಾಗಿ ಮ್ವಾಡದಿಂದ ಇಳುದು, ಮಾಡ್ನ ಸೂರ್ಗಗಳಿಂದ ಲೊಳ್ಳೋಂತ ಸುರಿಯಾ ಪರಿಯ-ನ್ವಾಡ್ತ ನ್ವಾಡ್ತ ನಾನು ಕುಸಿಪಡ್ತಿದ್ದೆ... ವೋಟರಾಗೆ,ಇಂದುಗಡಿಂದ,

“ಲಕ್ಕ ಲೋ - ಲೋ ಲಕ್ಕ...” ಅಂತ ಯಾರೊ ಕುಗಿದಂಗಾಗಿ ತಿರುಗಿ ನ್ವಾಡುತ್ತೆ- ಸಿವಾಚಾರದ ಗಂಗಿ!...

ಗಂಗಿ ಅಟ್ಟಿಯೂವೆ ವೊಲಗೇರಿಗೆ ಸಮೀಪ ಇದ್ದದ್ರಿಂದ, ಮಠ್ಕೆ ವೋಗ್ವಾಗ ಬರ್ವಾಗ ಅವಳು ನನ್ನ ಜ್ವತ್ಗೇ ಇರ್ತಿದ್ದಲು. ಮಾತ್ರ ಅವಳು ನಂಗಿಂತ