ವಿಷಯಕ್ಕೆ ಹೋಗು

ಪುಟ:Vyshakha.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

144

ಸಾಲಕ್ಕಿಲ್ಲ. ಈ ಪುಣಾತ್ಮ ಗೇದ ದುಡ್ನೆಲ್ಲ ತಕ್ಕಂಡೋಗಿ ಆ ರಾಚನ ಎಂಡಕೇ ಮುಳುಗುಸ್ತವನೆ!... ಇವ್ನಿಗೆ ಸೋಸಲು ಬೇಕು, ಸೀಗಡಿ ಬೇಕು. ಯಲ್ಲೆಆ ರುತಿ ರುತಿ ಅಡುಗೇನೆ ಆಗಬೇಕು!... ತಗಿ, ತಗಿ ಇವ್ನ ಮಾತ್ನೂ ಒಂದು ಲಿಂಗ ಅಂತ ಕಟ್ಕಿಂಡೋಗು, ನೇರ್ಪಾಯ್ತದೆ!... ಕ್ವಡಾದು ಮೂರು ಕಾಸು ಕ್ವಾಣೆ ತುಂಬ ಹಾಸು, ಅನ್ನಾ ಗೆಣೆಕಾರ ನಿನ್ನಂiÀi” –ಕಟಕಟನೆ ಯೋಳಿಬುಟ್ಟಾಗ, ಎಡತಿ ಮಾತ ತೆಳ್ಳಾಕನಾರದೆ, ನಿಂಗಯ್ಯ ತೆಪ್ಪಗಾಗಿದ್ದ. ಮಾತ್ರ ಸೊಸಲು ಮೀನು ಅತ್ವಾ ಕರಿಮೀನಿನ ಸೆ ಅವನ್ನ ಬಲವಾಗಿ ತಬ್ಬಿಕತ್ತು. ಎಂಡ ಕಮ್ಮಿ ಮಾಡಿ, ಹುಣಸೂರಿನ ಬೇಸ್ತವಾರ ಸಂತೇಲಿ ವೋಸ್ಟು ಕರ್ಮಿನ ಖರೀದಿ ಮಾಡಿ ತಂದು ಮಗಳ ಕಯ್ಯಗಿಡ್ತ.

“ತಕಮ್ಮಿ ಕರ್ಮಿನ...ನಾ ಅಟ್ಟೀಗೆನು ತರಕಿಲ್ಲ ಅಂತಾವ ನಿಸೂರು ಕೊಸೀತಿದ್ಲಲ್ಲ ನಿಮ್ಮವ್ವ-ನ್ವಾಡು, ಏಟೊಂದು ತಂದಿವ್ನಿ?” –ಇತ್ತಲಲ್ಲಿ ಚಾಪೆ ಎಣೆಯಕ್ಕೆ ಅಂತ ಒಣಾಕಿದ್ದ ಈಚಲು ಗರಿಗಳ ಗುಡ್ಲು ವಳೀಕೆ ತತ್ತುಗಂಬತ್ತಿದ್ದ ಕಲ್ಯಾಣಿಗೆ ಕೇಳೂವಂಗೆ ಧಿಮಾಕ್ನಿಂದ ಯೋಳಿ, ವೊದ್ದಿದ್ದ ವಸ್ತ್ರದ ತುದೀಲಿ ಗಂಟಾಕಿದ್ದ ಸೊಸಲು ಮೀನಿ ಸುರುದು ಗುಡ್ಡೆ ಮಾಡಿದ.

ಈ ಗುಡ್ಡೇಲಿ ಅರ್ಧ ತಕ್ಕಂಡು, ರುಕ್ಮಿಣ್ಣವ್ವಾರು ಲಕ್ಕನ ಕಯ್ಲಿ ಕ್ವಟ್ಟು ಕಳಿಸಿದ್ದ ಮೊಗರು ಒದ್ನೆಕಾಯಿನೂವೆ ಸೇರುಸಿ, ಸಿವುನಿ ಮೆಲೋಗರ ಮಾಡಿದಳು. ಅದರೊಳಿಕೆ ಹಿಟ್ಟು ಹೊರಳಿಸಿ ನುಂಗ್ತ ನುಂಗ್ತ ನಿಂಗಯ್ಯ ತಾನು ಕಂಗಣ್ಣಪ್ಪಾರ ಅಟ್ಟೀಲಿ ಜೀತಕಿದ್ದಾಗ ಅವರ ಹೆಂಡತಿ ಸಿದ್ದಮ್ಮ ಮಾಡ್ತಿದ್ದ ಮೇಲೋಗರದಂಗೇ ಅದೆ ಅಂತ ನೆನೆಸಿಕೊತ್ತಿದ್ದ. ಏಡು ಜಿನ ಬುಟ್ಟು ಉಳಿದಿದ್ದ ಕರ್ಮಿನಿನಲ್ಲಿ ಗೊಜ್ಜು ಮಾಡಿದ್ದಲು ಸಿವುನಿ. ಅದನಂತೂ ನಿಂಗಯ್ಯ ವೊಗಳದ್ದೂ ವೊಗಳದ್ದೆ!-

“ತೆಗಿ, ತಗಿ. ಗಂಗಡಕಾರರೂ ನಿನ್ನ ಜಪಾತಿಮಾಂವುಸದ ಅಡುಗೆ ಮಾಡನಾರ್ರು ಕನ... ಮುಕ್ಯ, ಆ ನಿನ್ನ ಗಂಡ ಅನ್ನುಸಿಕಂಡ ನಂಜನಗೂಡ್ನ ಆ ತಲೆ ಮಾಡಿಸದೋನ್ಗೆ ನಿನ್ನ ಕಯ್ಯಿ ರುತಿ ಉಣ್ಣಾಕೆ ಅದ್ರುಸ್ಟಪಡೀನಿಲ್ಲ” ಅಂತಿದ್ದಮಗೆ ಅವನ ಕಣ್ಣಲ್ಲಿ ನೀರಾಡಿದ್ದು ಉಂಟು.

ದರುಮನಳ್ಳಿಯ ಗಿಡಗೆಂಟ, ಅಳ್ಳಕೊಳ್ಳ, ಅಟ್ಟಿಗುಡ್ಲುಗಳ್ನೆಲ್ಲ ಗಕುಮ್ಮನೆ ಕತ್ತಲು ಮುಚ್ಚುಗತ್ತಾ ಬತ್ತಿತ್ತು... ಉಂಡು ತಡಿಕೆಬಾಗಿಲ ತಳ್ತಾ ಈಚೆಗೆ ಬಂದ ಲಕ್ಕ, ಗುಡ್ಲ ಬಾಜೂನಲ್ಲೆ ಇದ್ದ ಸೊಂಟದೆತ್ತರದ ಬಂಡೆ ಅತ್ತಿ ಕುಂತು ಬೀಡಿ ಕತ್ತಿಸ್ದ. ಇನ್ನೂ ಉರೀತಿದ್ದ ಬೆಂಕಿಕಡ್ಡಿಯ ಉಫ್ ಅಂದು ಆರುಸಿ, ವಕ್ಕಡೆ ಎಸದು, ಕತ್ತೆತ್ತಿದ- ಯಾರೋ ತಳಗಡಿಂದ ಮೀಟಿದ ತರ, ಒಂದು ಕೆಂಡದ