ವಿಷಯಕ್ಕೆ ಹೋಗು

ಪುಟ:Vyshakha.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

162 “ಸಿವುನಿ, ಅಣ್ಣಂಗೆ ಜೋರು ಜೊರ ಬಂದದೆ. ಕುಂಡಿಮಾದಿ ಅಟ್ಟೀಲಿ ನಾಕು ಮೆಣಸಿನ ಕಾಳ ಈಸುಗಂಬಂದು ಕಸಾಯ ಕಾಯ್ಸಿ ಕ್ವಡು.”- ಇತ್ಲಲ್ಲಿ ಇದ್ದೋಳ್ಗೆ ಕೂಗಿ ಯೋಳಿ,” ಮಠದ ಅಯ್ನೋರು ಕಂಬಳಕೆ ಯೋಳಿಕಳುಸವ್ರೆ, ನಾ ವೋಯ್ತಾ ಇವ್ನಿ” ಅಂದು, ಗುಡ್ಲಿನ ಕದವ ಮುಂದುಕೆಳುದು ಕಲ್ಯಾಣಿ ಹ್ವರೀಕೆ ವೊಂಟ್ಲು.

ಇತ್ಲಲ್ಲಿ ಮೋಗೀಗೆ ನೀರುಯ್ತಿದ್ದ ಸಿವುನಿ, ತನ್ನಸ್ಯಾಲೆ ಸೆರುಗ್ನಲ್ಲೆ ಆ ಮೊಗೀಗೆ ಮಯ್ಯಿ, ತಲೆಗೂದ್ಲು ಯಲ್ಲಾನು ವರುಸ್ತ, ಅದ್ನ ಗುಡ್ಲೊಳೀಕೆ ತತ್ತುಗಂಬಂದು, ಚಂಡಿ ತಗುವ ಮೋಗೀಗೆ ಎದೆ ಕಚ್ಚುಸ್ತ, ಅಣ್ಣನ ಪಕ್ಕದಾಗೆ ಕುಂತು, ಅಣೆ ಮುಟ್ಟಿ “ಆವ್ವಿ, ಯೇಟೊಂದು ಜೊರ ಬಂದುಬುಟ್ಟಿದೆ?” ಅಂದು, ಹಾಲು ಕುಡೀತಿದ್ದಂಗೆ ತೊಡೆ ಮ್ಯಾಲೆ ನಿದ್ದೆ ಬಂದ ಮೊಗಾವ ನೆರುಕೆ ಮೊಗ್ಗಲೆ ಹಾಸ್ದ ದುಪಟಿಮ್ಯಾಲೆ ಉಳ್ಳಾಕಿ, ಕುಂಡಿ ಮಾದಿ ಗುಡಿಲಿಗೆ ವೊಂಟು ಅಣ್ಣನ ಕಾಲುದಸೀಲಿ ಮಯ್ಯಿಚಾಚಿ ಮನಗಿದ್ದ ಬೊಡ್ಡನ ಕಾಲ ತುಣುದ್ಲು. ಕೂಡ್ಲೆ ಆ ಚೋರದ ತಾಪದಾಗೂವೆ ಅಣ್ಣ ಮೊಖದ ತುಂಬ ವೊದ್ದಿದ್ದ ದುಪಟ ಸರುಸಿ, “ಯೇನಾಯ್ತಣೆ ಸಿವುನಿ?- ಬೊಡ್ಡ ಯಾಕಂಗೆ ಅರಚುಗತ್ತು?” ಅಂತ ಕೇಳಿದ್ದ. ಸಿವುನಿಗೆ ಚೋಜಿಗೆ ಅನ್ನುಸಿತ್ತು. ಈ ನಾಯಿಗೂ ನಮ್ಮಣ್ಣಂಗೂ ಯಾವ ನಂಟು? ಅಂದುಕೊತ್ತ.

“ಯಾನಿಲ್ಲ ಮನಕ್ಕಣ್ಣ. ಕುಂಡಿಮಾದಿ ಆಟ್ಟೀಲಿ ವಸಿ ಮೆಣಸಿನ ಕಾಳ ತಂದು ನಿಂಗೆ ಕಸಾಯ ಕಾಯ್ಸಿಕ್ವಡು ಅಂದ್ಲು ಅವ್ವ. ಅದುಕೆ ಕುಂಡಿಮಾದಿ ಅಟ್ಟಿಗೆ ವೋಯ್ತಿದ್ದೋಳು ಕಾಣ್ದೆ ಬೊಡ್ಡನ ಕಾಲ ತುಣದಿ. ಅದುಕೆ ವೋಟು ರಾವುಟ ಅದರ್ದು?- ನೀ ಮನಕ್ಕೊ” ಅಂದು ಸಿವುನಿ ಅಚ್ಗೆ ನಡುದ್ಲು.

ಕುಂಡಿಮಾದಿ ಅಗ್ಲೆ ಕೆಲುಸಕ್ಕೆ ವೊಂಟೋಗಿದ್ಲು. ಸಾವಂತ್ರೀನೂ ವೋಂಟೋಗಿತ್ತು. ಕುಂಡಿ ಮಾದಿ ಗಂಡನೂವೆ ಗುಡ್ಲ ಕದ ಎಳುದು ಕಂಬಳಕೆ ವೋಂಡತಿದ್ದ ಕಂಡು ಸಿವುನಿ, ನಿಂತ ಕಾಲ ಮುಂದಕೆಳೆಯಾ ಸಮಯದಲ್ಲಿ, ಆ ದ್ಯಾವರಗುಡ್ಡ-

“ಯಾನು ಬೇಕಾಗಿತ್ತು?” ಕ್ಯಾಳ್ದ.

“ಇವುನ ಕ್ಯಾಳಿ ಸುಕವೇನ?” –ಅಂದು, ಸಿವುನಿ ಮಾತಾಡದೆ ಮುಂದಾದ್ಲು. ಆಗ ಆ ಗ್ರಾಸ್ತ,

“ಯಾಕಮ್ಮಿ?... ಯಾಕ ಬಂದದ್ದು?... ವಳೀಕೆ ಬಾ... ಅದ್ಯಾನು ಬೇಕಿದ್ರೂ ಯೋಳು, ಕ್ವಟ್ಟೇನು” ಅಂತ ಕರೆಯೋದ?- ಕ್ವಾಪ ಬಂದು ಸಿಡಾರನೆ,