ವಿಷಯಕ್ಕೆ ಹೋಗು

ಪುಟ:Vyshakha.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20

ಎತ್ತಿಗಳೊ ತರ ಗೋಣಿತಾಟ ಜ್ವಾಕೆಯಾಗಿ ತತ್ತುಗಂಡು ಮಠದ ಇಂದುಗಡೀಕೆ ಹ್ವಾದರು. ಲಕ್ಕಂಗೆ ಯಾಕೊ ದಾವಾಗಿ ಮಾದಮ್ಮ ಒಂದೀಟು ಮಜ್ಜಿಗೇನಾರ ಕೇಳುವಾಂತ ಲಕ್ಕನೂವೆ ಅವ್ರ ಹಿಂದೆ ಹಿಂದ್ಯೇಯ ವೋದ. ಕ್ವಾಣೇವಳೀಕೆ ಬಿರಬಿರ್ನೆ ವೋದ ಗೌಡ್ರು, ಆ ಗೋಣಿತಾಟ ಮಾದಮ್ನ ಕಯ್ಯಿಗಾಕಿ, “ಜ್ವಾಪಾನ-ಮಠಕ್ಕೆ ಯಾರ್ಯಾರೋ ಬತ್ತಿರ್ತಾರೆ. ಯಾರ್ಗೂ ವಾಸನೆ ಬೀಳದಂಗೆ, ವಕ್ಕಡೆ ಮುಚ್ಚಿಡು. ನಂಚಿಕಳಾಕೆ ಒಂದೀಟು ಅಪ್ಪಳ, ಸೆಂಡಿಗೆ ಕರಿಡಿಡು. ರಾತ್ರಿಗೆ ಮಠದಲ್ಲಿ ಎಲ್ಲಾರು ಮನಗಿದ ಮ್ಯಾಗೆ ನಂಗೂ ನಿಂಗೂ ಭೋಗ...” ಅಂದದ್ದು ಲಕ್ಕನ ಕಿವಿಗೂ ಬಿದ್ದು, ಇನ್ನು ಅಲ್ಲಿ ನಿಲ್ಲೋದು ತರವಲ್ಲಾಂತ ಅಲ್ಲಿಂದ ಕಾಲ್ಕಿತ್ತು ಮಠದ ಮುಂಚೋರೆಗೆ ಬಂದು ಮೆಟ್ಟಿಲು ಮ್ಯಾಲ್ಗಡೆ ಕುಂತ. ವಸಿ ವ್ಯಾಳ್ಯದಲ್ಲೆ ಮಾದಮ್ನ ಕ್ವಾಣೆಯಿಂದ ಸುಮ್ಮಾನದಿಂದ ಬಂದ ಗೌಡ್ರು. “ನೀನ್ನಿಂದ ಬೊ ಉಪಕಾರಾಯ್ತು ಕನೋ, ಲಕ್ಕ”- ಬೆನ್ನುತಟ್ಟಿ “ಮಾತ್ರ ಈ ಚಮಾಚಾರ್ವ ಯಾರ ಕುಟ್ಟೂವೆ ಕವ್ ಕಿವ್ ಅನ್ನಬಾರ್ದು. ಗ್ವತ್ತಾಯ್ತೇನ್ಲ?” ಅಂದ್ರ. “ಮುಟ್ಟುಸ್ಕಂಡ್ರಲ್ಲ ಗೌಡ್ರೆ?” -ಲಕ್ಕ ಎದರೆದರಿ ಕೇಳಿದ್ರೆ, “ಅದ್ಕೇನು ಪರ್ವಿಲ್ಲ ಬುಡು. ಕಯ್ಯಿ ತಾನೆ ಮುಟ್ಟದ್ದು. ತ್ವಳಕಂಡರಾಯ್ತು” –ಅನ್ನಾದ? ನಂಜೇಗೌಡರ ಈ ಚಾಷ್ಟ್ಯದಿಂದ ಇದಕೂ ಇಂದುಕೆ ನಡೆದಿದ್ದ ಒಂದು ಪರಸಂಗ ಗೆಪ್ತ್ಯಾಗಿ, ತನ್ನ ಹೆಗಳ ಮ್ಯಾಲಿದ್ದ ಕೆಂಪನೆ ಚೌಕಳಿ ವಸ್ತ್ರದಿಂದ ಬಾಯಿ ಮುಚ್ಕಂಡು, ವಳುಗ್ನಿಂದ ಪಿಡೀತಿದ್ದ ನಗಾವ ತಡೆಯಕ್ಕೆ ಕಸರತ್ತು ಮಾಡ್ತಿದ್ದ... ಲಕ್ಕನ ಪುಣ್ಯಕ್ಕೆ ಸಿವಪಾದಪ್ಪಾರ್ಗೆ ಏನೋ ಬೇಕಾಗಿ “ನಂಜೇಗೌಡ...ನಂಜೇಗೌಡ...” ಅಂತ ಕೂಗಿದ್ರು. “ಬುದ್ದಿಯೋರು ಕರೀತಾ ಅವ್ರೆ. ಅದೇನು ಕೇಳಿಕಂಬತ್ತೀನಿ” -ನಂಜೇಗೌಡರು ಮಠದ ವಳಗಡೀಕೆ ನುಗ್ಗಿದ್ರು. ಗೌಡ್ರೆದುರ್ಗೆ ವೊಟ್ಟೆ ವಳೀಕೆ ಅದಮಿ ಎಂಗೊ ತಡಕಂಡಿದ್ದ ಲಕ್ಕನ ನಗ, ಕಟ್ಟೆ ಒಡದು ಉಕ್ಕುಕ್ತ ಬಂತು. ನಗಾಡ್ತಿದ್ದಂಗೆ ಆ ಪರಸಂಗದ ಕಟ್ಟೂ ಬಿಚ್ಚಿಗತ್ತು: ದರುಮನಳ್ಳಿ ಸಿವಾಚಾರದೋರು ಎಲ್ಲರೂವೆ ಜಪ್ಪಯ್ಯನ ಮಠಕೆ ನಡಕೊತ್ತಿರನಿಲ್ಲ. ಗ್ರಾಮದ ಏಳೆಂಟು ಇಸಮುಗಳ್ಗೆ ಕಡ್ಲೆ ಮಠದ ಅಯ್ಯನೋರೆ ಗುರುಗಳು...ಒಂದು ದಪ ಏನಾಯ್ತೂಪ್ಪಾಂದ್ರೆ-ಕಡ್ಲೆಮಠದ ಅಯ್ಯನೋರು ದರುಮನಳ್ಳಿ ಒಬ್ಬ ಭಕ್ತರಟ್ಟೀಗೆ ಭಿನ್ನಕ್ಕೆ ಬಂದಿದ್ರು, ತಾನ ಮುಗುಸಿ, ಮಡಿ