217
“ಯಾಕೆ ಬೆಳಿಗ್ಗೆ ಸ್ನಾನ ಮಾಡಲಿಲ್ಲವೆ?...” ಎಂದು ಅನ್ಯಮನಸ್ಕಳಾಗಿ ಪ್ರಶ್ನಿಸಿದಳು. ಅಲ್ಲಿಗೆ ಬಂದ ನೆಂಟತಿಯೊಬ್ಬಳಿಗೆ “ನಮ್ಮೆಜಮಾನರಿಗೆ ರುಕ್ಕು ಬಂದಿದ್ದಾಳೆ ಎಂದು ತಿಳಿಸು” ಎಂದು, ನಂತರ ರುಕ್ಮಿಣಿಯತ್ತ ತಿರುಗಿ ನೋಡಿ,
“ಇಲ್ಲ, ನೀನು ತೀರ ತೆಗೆದುಹೋಗಿರುವ ಹಾಗಿದೆ, ರುಕ್ಕು...” ಎನ್ನುತ್ತಿರುವಂತೆ, ರುಕ್ಮಿಣಿಯು-ನೆನೆದಿದ್ದೀನಿ. ಏನೋ ಮುಜುಗರ. ಮತ್ತೆ ಸ್ನಾನ ಮಾಡಿದರೆ ಎಷ್ಟೋ ಹರ್ಷ ಆಗುತ್ತೆ.” ರುಕ್ಮಿಣಿ ವಿವರಣೆಯಿತ್ತಳು.
ಆಗ ಕಣ್ಣಿಟ್ಟು ಸರಿಯಾಗಿ ರುಕ್ಮಿಣಿಯನ್ನು ನೋಡಿದಳು ಪಾರ್ವತಿ.
“ಅಯ್ಯೊಯ್ಯೊ, ನನ್ನ ಗಡಿಬಿಡಿಯಲ್ಲಿ, ನೀನು ನೆನೆದಿರೋದನ್ನೂ ನೋಡಿಲ್ಲ ನಾನು. ನಡಿ, ನಡಿ. ಹಂಡೆಯಲ್ಲಿ ನೀರು ಕಾಯ್ತಾನೆ ಇದೆ. ಬೇಗ ಬೇಗ ಸ್ನಾನ ಮಾಡಿ ಸಿದ್ಧವಾಗುವಿಯಂತೆ, ಬಾ...”
ತಂಗಿಯನ್ನು ಪ್ರಿತಿಯಿಂದ ತಬ್ಬಿ, ತಮ್ಮ ಮನೆಯೊಳಗೆ ಹೋಗುತ್ತ, ಪಡಸಾಲೆಯಲ್ಲಿ ಅಡ್ಡವಾದ ತನ್ನ ಯಜಮಾನರಿಗೆ, ಪಾರ್ವತಿಯು-
“ವಾಲಗದೋರು ಇನ್ನೂ ಬಂದೇ ಇಲ್ಲವಲ್ಲ” ಎಂದು ಆಕ್ಷೇಪಿಸಿದಳು.
“ಅದನ್ನೇ ವಿಚಾರಿಸಲು ಹೊರಟೆ”- ಎಂದು ಚಂದ್ರಶೇಖರಯ್ಯ, “ಯಾಕೆ ರುಕ್ಕ-ಇಷ್ಟು ಕಂಗೆಟ್ಟು ಹೋಗಿದ್ದೀಯೆ?” ಎಂದು ಕೇಳಿದ.
“ಕಾಡುಹಾದಿ, ಗಾಡಿ ಪ್ರಯಾಣ, ಕೊಂಚ ಬಳಲಿದ್ದಾಳೆ, ಅಷ್ಟೆ. ಈಗ ನೀವು ವಾಲಗದವರನ್ನು ಮೊದಲು ಹೋಗಿ ತರದೂದು ಮಾಡಿ ಕರೆದುತನ್ನಿ.” – ಅವಸರದಿಂದ ಹೇಳಿದ ಪಾರ್ವತಿ, ರುಕ್ಮಿಣಿಯನ್ನು ತ್ವರೆಯಿಂದ ಬಚ್ಚಲುಮನೆಗೆ ಕರೆದೊಯ್ದಳು.
21
ಪಾರ್ವತಮ್ನ ವತ್ತಾಯಕೆ ಯೇನೊ ಒಂದೀಟು ವೋಟ್ಟೆಗಾಕಿ, ಭೀಮನಳ್ಳಿಯ ಇಂದುಕಾಕಿ, ಲಕ್ಕ ಆಗ್ಲೆ ಕಾಡುಹಾದೀಲಿ ವಾಪಸಾಗ್ತಾ ಇದ್ದ. ಜ್ವತ್ಗೆ ಬೊಡ್ಡ ನಗರ್ತ ಬತ್ತಿತ್ತು. ಆಗ್ಲೆ ಬಿಸುಲು ಯೇರ್ತಾ ಇತ್ತು. ಇಂದಿನ ಜಿನ ಮಳೆ ಬಿದ್ರೆ, ಮಾರನೆ ಜಿನ ಕಾಡ್ನಲ್ಲಿ ನಡೆಯಕ್ಕೆ ಲಕ್ಕಂಗೆ ಯಾವೊತ್ತು ಉಮೇದೆ!... ಆದರೆ ಆ ಹ್ವತ್ತು ಲಕ್ಕಂಗೆ ಯಾಕೊ ಬಿಡಬ್ಯಾಸರ. ಜೋಲು ವೊಕ ಅಕ್ಕಂಡು, ಆ ಮೆಳಿಂದ ಈ ಮೆಳೆಗೆ ಪುತರ ಪುತರ ಸದ್ದು ಮಾಡ್ತ ಓಡೋಗೊ ಗೌಜಲಕ್ಕೀನೊ ಕಾಡುಕೋಳೀನೊ ಅಟ್ಟಾಡಕ್ಕೆ ವೊಂಟ ಬೋಡ್ಡನ್ನ ಒದ್ದು, ನಾಕೇಟು ಬಾರಿಸಿ, ಹ್ವಟ್ಟೆ ತುಂಬ ಬೋಗುಳ ಬಯ್ಯಿಕೊತ್ತ ಬತ್ತಾ ಇದ್ದ. ಆ ಸಮಯಕ್ಕೆ ಸರ್ಯಾಗಿ