ವಿಷಯಕ್ಕೆ ಹೋಗು

ಪುಟ:Vyshakha.pdf/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಗ್ರ ಕಾದಂಬರಿಗಳು

೨೯೫

ಬೇಕಾಬಿಟ್ಟಿ ಕೇಳಿದ್ಲು ಗಂಗವ್ವ.

ಲಕ್ಕ ಸಾವರುಸಿಕೊಂಡೋನು,

“ಅದೇಯ – ಅಡವಿಯಪ್ಪನೋರ್ಗೂ ನಿಮ್ಗೂವೆ ನಡೀತಿರೊ ತೊಪ್ಪೆ ಜಗಳದ ನ್ಯಾಯ” ಅಂದಿದ್ದ.

“ನಮ್ಮಟ್ಟಿ ಜಗಳಕೂ ಈ ಪಂಚಾತಿಯೋರ್ಗೂವೆ ಯೇನ್ಲ ಸಮ್ಮಂದ?”

“ನಂಗೋತ್ತಿಲ್ಲ... ಅವರು ಕಳಿಸದ್ರು. ನಾ ಬಂದೆ.”

“ನಾ ಬರಕ್ಕಿಲ್ಲಾಂತ ಯೋಳೋಗು”- ಖೈಡಾಗಿ ಯೋಳಿ, ನಿಂಗಿ ಕಡೀಕೆ ತಿರುಗಿ,

“ನಿನ್ಯಾಕೆ ಕರಿದೇಂದ್ರೆ, ನಾವಿತ್ತು ವಳೀಕೆ ವೋಗೂವಂಗಿಲ್ಲ. ಇವತ್ತು ನೀನೆ ವಸಿ ಅಡಿಗೆ ಮಾಡ್ಬೇಕು. ಆಮ್ಯಾಕೆ ನಿನ್ನಟ್ಟೀಲಿ ಆಡ್ತಿರೊ ನನ್ನ ಮಕ್ಕಳು, ನಿನ್ನ ಮಕ್ಕಳು ಗಂಡಯ್ಯ ಯೆಲ್ಲಾರ್ನೂ ಇಲ್ಲಿಗೇ ಕರಕಂಬಂದು ಇಲ್ಲೆ ಉಣ್ಣಕ್ಕಿಕ್ಕು” ಅಂದ್ಲು.

ಲಕ್ಕ, ಕನ್ನಡಿ ಮ್ಯಾಲೆ ಉದ್ದು ಉರುಳೊ ವೊತ್ತು ಅಲ್ಲಿ ನಿಲ್ಲನಿಲ್ಲ. ಸೀದ ಚಾವಡಿಗೋಗಿ ಪಂಚಾತಿಕಟ್ಟೆಗೆ ಗಂಗೆ ಯೋಳಿದ್ದ ಅವಳು ಯೋಳಿದಂಗೆಯ ವಪ್ಪುಸ್ದ.

ತಾವು ಯೋಳಿಕಳಿಸಿದ್ರೂವೆ ತಮ್ಮ ಮಾತಿಗೆ ಬೆಲೆ ಕ್ವಟ್ಟು ಆ ಚಿಲ್ಲರೆ ಎಂಗಸು ಬರನಿಲ್ಲವಲ್ಲಾಂತ ಯಜಮಾನ್ರಿಗೆ ಕ್ಯಾಣ ಸಾಜವಾಗೆ ಬಂತು.

“ಲೋ ಲಕ್ಕ, ಪುನಾ ವೋಗಿ ಕರೀಲಾ ಅವಳ” ಅಂದ್ರು.

ಲಕ್ಕ ಪುನಾ ವೋಗಿ,

“ಯಜಮಾನ್ರುಗೊಳು ಪುನಾ ವೋಗಿ ಕರಿ ಅಂದ್ರು. ಅದ್ಕೆ ಬಂದೆ” ಅಂದ.

“ನಾ ಇವತ್ತು ಮುಟ್ಟು. ಬರಕ್ಕಾಗಕ್ಕಿಲ್ಲವಂತೆ ಅಂತ ಯೋಳ್ಲ”- ಅನ್ನೋವಾಗ ಅವಳ ಮಾತ್ನಲ್ಲಿ ಗಡಸು ತುಂಬಿ ತುಳುಕಾಡ್ತಿತ್ತು.

ಲಕ್ಕ ಪಂಚಾತಿಕಟ್ಟೆಗೆ ವಾಪಸಾಗಿ ಅಂಗೇ ವರದಿ ವಪ್ಪುಸ್ದ.

“ಮುಟ್ಟೊ ತಟ್ಟೊ, ಅದ ಕಟ್ಕಂಡು ನಮಗೇನು?... ಬರಕಿಲ್ಲಾಂದ್ರೆ ಬುಡೋರ್ಯಾರು? ನಾವು ನಿಮಗೆ ಅಪ್ಪಣೆ ಮಾಡ್ತಾ ಇದ್ದೀವಿ. ನೀನೋಗು. ಅವಳೇನಾರ ಪುನಾ ಬರಕಿಲ್ಲಾಂತ ಆಟ ಮಾಡದ್ರೆ, ಅವಳ ತುರುಬ ಇಡಕಂಡು ಬೀದೀಲಿ ದರದರ ಎಳಕಂಡು ಬಾ. ನೀಯೇನೂ ಎದುರುಕೊಬ್ಯಾಡ. ಇದ್ರಿಂದ ಏನೇ ಬಂದರೂವೆ ನಿನ್ನ ಕಾಪಾಡಕ್ಕೆ ನಾವಿವಿ” ಅಂದ್ರು.

ಲಕ್ಕ ಪುನ ಗಂಗಿ ಅಟ್ಟಿಗೋದ. ಪಂಚಾತಿಯೋರು ಎಂಗೆ ಉಸುರುದ್ರೊ