ವಿಷಯಕ್ಕೆ ಹೋಗು

ಪುಟ:Vyshakha.pdf/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೯೬

ವೈಶಾಖ

ಅಂಗೇಯ, ಒಂದು ಮಾತ್ನೂ ಇರುಕಿಸಿಕೊಳ್ಳದೇಯ ಗಂಗಿಗೆ ತಿಳುಸದ್ದ.

ಈಗಲೀಗ ಗಂಗಿ ಎದುರಿದ ತರ ತೋರಿದ್ಲು.

“ದಿಟವಾಗೂ ಎಳಕಂಬಾ ಅಂದರೇನೊ?”

“ಸತ್ತವಾಗೂ ಅಂದರು”

ಗಂಗಿಗೆ ವಸಿವಸ್ಯಾಗಿ ಕಯ್ಯಿಕಾಲು ವದುರಕ್ಕೆ ಸುರು ಆಯ್ತು.

ವಳುಗಡೆ ವಲೆ ಕತ್ತಿಸಿ, ಹಿಟ್ಟಿಗೆ ಎಸರೆತ್ತುತಾ ಇದ್ದ ನಿಂಗಮ್ಮ, ಆ ಕೇಮೆಯ ಅರ್ಧಕೇ ಬುಟ್ಟು ಓಡಿಬಂದೋಳು,

“ಸುಮ್ಕೆ ವೊಂಟೋಗು, ಗಂಗೆ. ಇನ್ನು ಆಟ ಮಾಡಾದು ತರವಲ್ಲ. ಹೊಲೇನ್ನ ಕಯ್ಲಿ ಎಳುಸಿಕೊತ್ತ ನಡುಬೀದೀಲಿ ಅಪಮಾನ ವೊಂದಕ್ಕಿಂತ, ಇಸ ತಕ್ಕಂಡು ಸಾಯಾದು ಲೇಸು” ಅಂದು, ಇವೇಕದ ಮಾತಾಡಿದ್ಲು...

“ಮುಟ್ಟಾಗಿರೋ ಈ ಸ್ತಿತೀಲಿ, ಯಾವ ಮೊಕ ಇಟ್ಟುಕಂಡು ಪಂಚಾತಿಯೋರ ಮುಂದಕೋಗಿ ನಿಂತುಕೊಳ್ಳಲೆ, ನಿಂಗಿ?”- ಇಂಗಂದು ಕಣ್ಣೀರು ತಂದುಕಂಡರೂವೆ, ಲಕ್ಕನ ಕಡೀಕೆ ತಿರುಗಿ” ಊ, ಇನ್ನೇನ ಮಾಡಾದು, ಬತ್ತೀನಿ ನಡಿ” ಅಂದು ಲಕ್ಕನ ವಂದಗುಟ್ಯೆ ವೋಂಟ್ಲು. ಅಟ್ಟಿ ಜಗಲಿ ಹಬ್ಬಿಗೆ ಇಳೀತೂಲೂವೆ, “ನಿಂಗಿ, ನಾ ಬರಾದು ಏಟೋತ್ತಾದಾತೊ, ಯಾನು ಕತೆಯೊ. ನಮ್ಮೂರ ಪಂಚಾತಿ ಅಂದ್ರೆ ನಿಂಗೆ ಗ್ವತ್ತೇ ಅದಲ್ಲ. ಈ ಯಜಮಾನ್ರು ಉಂಡು ಕುಂತ್ರೆ ಸಣ್ಣಪುಟ್ಟ ನ್ಯಾಯ ಆದ್ರೂವೆ ಬೆಳುಕರಿಸ್ತಾರೆ. ವೋಟ್ರಲ್ಲಿ ಮಕ್ಕಳು, ನಿಮ್ಮೆಜಮಾನ್ರು, ನೀನು ಎಲ್ಲಾರು ಉಂಡುಕಂಡು, ಮಕ್ಕಳ ಮನಗಿಸಿರು” ಅಂತೇಳಿದ್ಲು...

ಪಂಚಾತಿಕಟ್ಟೇಲಿ ಗಂಗಿ ಎಂತೋರ ಮನಸೂ ಕರಗೂವಂಗೇ ಮಾತಾಡಿದ್ದಲು.

“ನಾನು ಮುಟ್ಟಾಗಿರೊ ಎಂಗಸು. ನನ್ನ ಸ್ತಿತೀಲಿ ರಾಜಾರೋಸ ಊರ್ನೂರೆಲ್ಲಾರ ಮುಂದಗಡೂವೆ ಇಂಗೆ ತಂದು ನಿಲ್ಲುಸೋದು ದರುಮವ? ಇಮ್ಮ ಎಡತಿ, ಎಣ್ಣುಮಕ್ಕಳೂ ನನ್ನಂಗೆ ತೆಪ್ಪು ಮಾತಾಡಿದ್ರೆ ಆವರ್ನೂವೆ ಇಂಗೆ ಪಂಚಾತಿ ಕಟ್ಟೇಲಿ ತಂದು ನಿಲ್ಲುಸ್ತಿದ್ರ?... ಅಲ್ಲದೇಯ, ನಾನೇನು ಅಂತಾ ಕತ್ತೆ ಹಾದರ ಮಾಡಿದ್ದು?- ನನ್ನ ದಾಯಾದಿ ನನ್ ಜಪಲಿನ ತೊಪ್ಯ ಮ್ವಾಸದಿಂದ ತನ್ನ ಕಡೀಕೆ ಆಕ್ಕತಿದ್ದ. ಆದ ಕಂಡು ಕಂಡೂ ಎಂಗೆ ಸುಮ್ಮಕಿರಾದು?... ನಿಮ್ಮಟ್ಟಿ ತೊಪ್ಯ ಯಾರಾರು ಇಂಗೆತ್ತಿದ್ರೆ ನೀವು ಸುಮ್ಮಕಾಗಿವ್ರ?... ಊ, ಅವ್ನು ಏಟೇ ಆದ್ರೂ ಗಂಡಸು, ಒಬ್ಬ ನಿಮ್ಮಂತ ಮೀಸೆವೊತ್ತ ಗಂಡಸೆ ನನ್ನ ಜಾಗದಲ್ಲಿ ಇದ್ದಿದ್ರೆ, ಅವನ್ಗೆ ನಾಕ ತದಕಿ, ಉಟ್ಟಿದ ಜಿನವ ಕಾಣಿಸಿರಾನು!... ಆದ್ರೆ ನಾನು