ವಿಷಯಕ್ಕೆ ಹೋಗು

ಪುಟ:Vyshakha.pdf/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಗ್ರ ಕಾದಂಬರಿಗಳು

೨೯೯

ತೆಪ್ಪು ಮಾಡಿರ್ಲಿ, ಇವಳು ವೊರಗಡೆ ಇರ್ವಗ, ಈ ತರ ಸಿಕ್ಸೆ ಕ್ವಡಾದು ದರುಮ ಅಲ್ಲ... ಈಗೇನಂತೆ ಮುಟ್ಟು ಕಳೀಲಿ. ನೀರೂ ಆಗ್ಲಿ. ಆಮ್ಯಕೊಂದು ಜಿನ ಸೇರಿ ಇವಳ್ಗೆ ನೀವೆಲ್ಲ ಯೋಳದಂಗೆ ಸಿಕ್ಸೆ ಕ್ವಟ್ಟು ಪಾಟ ಕಲಿಸೂನ” ಇಂಗೇಳಿ, ಗಂಡಾಗಿ ಬಂದಿದ್ದ ನ್ಯಯದ ಜೀಜ ನರಕಿ ಮೆತ್ತಗೆ ಮಾಡಿದ್ದ... ಅವನ್ದು ಯೇರಿಸಿಂಗಿ ಇಳಿಸಿಂಗಿ ಆಟ. ಆವಯ್ಯ ಯೇರಿಸ್ನೂ ಬಲ್ಲ ಇಳಸ್ನೂ ಬಲ್ಲ!...

ನ್ಯಾಯಸ್ತರೆಲ್ಲ ನಂಜೇಗೌಡ್ನ ಮಾತ್ಗೆ ಕಬೂಲಿ ಯೋಳಿ, ವಪ್ಪಿದ್ರು. ಪಂಚಾತಿ ಮುಂದಕೋಯ್ತು...

ಮುಂದ್ನ ಎಂಟತ್ತು ಜಿನ ಇನ್ಯಾವ ಇಸೇಸವೂ ಇಲ್ದೆ ಕಳೀತು. ಒಂದು ಬೇಸ್ತವಾರ ಸಂತೇಲಿ ಸಿಕ್ದ ಅಡವಿಯಪ್ಪ ಲಕ್ಕನ್ನ ಹೊಳೆ ಅತ್ರ ಕರಕಂಡೋಗಿ ಕುಂಡರಿಸಿಕೊಂಡು ಗುಟ್ಟಾಗಿ,

“ಲೋ ಲಕ್ಕ, ನೀ ಯಾರತ್ರವೂ ಬಾಯಿ ಬುಡಕಲ್ಲಾಂತ ಬಾಸೆ ಕ್ವಟ್ಟರೆ ಒಂದು ಮಾತೇಳ್ತೀನಿ” ಅಂದ ಲಕ್ಕ,

“ಅಡವಿಯಪ್ಪಾರೆ, ಇದ್ಕೆ ಸತ್ಯ ಪರ್ಮಾಣ ಯಕೆ?- ನನ್ನ ತಾವು ನಂಬಕಿದ್ರೆ ಯೋಳಿ, ಇಲ್ಲದಿದ್ರೆ ಬುಟ್ಟಬುಡಿ” ಅಂತ ವಸಿ ಬ್ಯಾಸರದಿಂದ್ಲೆ ನುಡದ. ಆಗ ಅಡವಿಯಪ್ಪ,

“ಅಂಗಂದೆ, ಅಂತ ಬ್ಯಾಸರ ಮಾಡಕೋಬ್ಯಾಡ ಕನ್ಲ... ಇದು, ತಲೆವೋಗೋ ಇಚಾರ...” ಅಂತಿದ್ದಂಗೇಯ ಲಕ್ಕ,

“ಅಂಗಿದ್ರೆ, ನನ್ನ ತಾವು ಯೋಳನೇ ಬ್ಯಾಡಿ... ಅದೆಲ್ಲಿ ಗಾಚಾರ” ಅಂದ. ಅಡವಿಯಪ್ಪ,

“ಇದರಾಗೆ ನಿಂಗೇನು ಆಗಕ್ಕಿಲ್ಲ ಕನ್ಲ... ಈ ಮಾತು ನನ್ನಿಂದ ವೊಂಡ್ತು ಅನ್ನದು ಪ್ರಚುರಾದ್ರೆ, ಈ ಊರ್ನ ಜಯಮಾನ್ರು ನನ್ನ ಕಂಡ್ತಾ ನ್ಯಾತಾಕಿಬುಡ್ತಾರೆ...” – ಇನ್ನೂ ದನಿ ತಗ್ಗಿಸಿ ಯೋಳ್ದ. ಆಗ ಲಕ್ಕ,

“ಅಂಗಂದ್ರೇನ ನೀವೇಳಿರಾದು? ನಂಗೊಂದೂ ಅರ್ತ ಆಯ್ತಾ ಇಲ್ಲ” ಅಂದ.

“ನ್ವಾಡ್ಲ, ಇದು ಬರೀ ನಮ್ಮ ಗಂಗಿ ಇಸ್ಯವೆ ಆಗಿದ್ರೆ, ನಂಗೋಟು ಚಿಂತೆ ಇರ್ನಿಲ್ಲ. ಇದು ನಮ್ಮ ಮಟದವರ್ಗೂ ವೋಗಿ ಗಂಟಾಗಿರಾದ್ರಿಂದ, ನಿಂಗೇಳಕೆ ಇಂದೂ ಮುಂದೂ ನ್ವಾಡ್ದೆ...ಆದ್ರೆ ಮೊದ್ಲೆ ನಿನ್ನ ಕುಟ್ಟೆ ಆದ್ರೆ ನಿನ್ನ ಕುಟ್ಟೆ ಯೋಳ್ನಿಲ್ಲ, ಇಂತಾದ್ದು ಯಾವ್ದಾರ ಇಸ್ಯ ನಡದ್ರೆ, ನನ್ನ ವೊಟ್ಟೆ ವಳುಗೆ ನಾ ಇಟ್ಟುಕೋನಾರೆ... ಅದ್ಕೆ, ನಡದದ್ದ ನಿನ್ನ ತಾವು ಯೋಳಿ ನನ್ನ ವೊಟ್ಟ ಉಬ್ಬರಣೆಯ ಕೊಳಕೊಳಾನ