ವಿಷಯಕ್ಕೆ ಹೋಗು

ಪುಟ:Vyshakha.pdf/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಗ್ರ ಕಾದಂಬರಿಗಳು

೩೦೧

ಅದ್ಕೆ ಮಾದಮ್ಮ ಏನಂದ್ಲು ಗ್ವತ್ತ?

“ನಂಗೆ ಎಂಗೊತ್ತಾಗಬೇಕು. ಮುಂದಕೇಳಿ” ಅಂದಿದ್ದ ಲಕ್ಕ...

ಆಗ ಮಾದಮ್ಮ ಬಿಗಿಯಾಗೇ ಅಂದ್ಲು:

“ಯಾಕೆ ಅಂದ್ರೆ?- ನೀನೂ ಸರಿ. ವೋಟು ತೋರ ಜನದ ಮುಂದೆ ನಿನ್ನ ನಾಲಿಗೆ ಲಂಗುಲಗಾಮಿಲ್ದೆ, ಅದ್ಯಾಕಂಗೆ ಯೆಗರಾಡ್ದೆ?” ಅದ್ಕೆ ಗಂಗಿ,

“ಮಂತೆ, ನನ್ನ ವೋಟು ಗೊಳುಕಿಚ್ಚ ಉಯ್ದರೆ, ಅದೇಟು ತೊರ ಸೈಸನೆ?” ಅಂತ ವಸಿ ಅಳೋಳಂಗೆಯ ಕ್ಯಾಳಿದ್ಲು. ಮಟದ ಮಾದಮ್ಮ,

“ಈಗ ಅದ್ದು ಆಗೋಯ್ತು. ಉಕ್ಕೊದ ಹಾಲು. ಅದ್ನ ಇಂದುಕೆ ಬಾ, ಅಂದ್ರೆ ಬಂದಾತ?... ಅದೆಂಗಾರ ವೋಗ್ಲಿ. ಈಗ ನಿಂಗೆ ಬಂದಿರೊ ಗಂಡಾಂತರ್ವ ಕ್ಯಾಳಿ, ಜೀವ ತಡೀದೆ ಇಲ್ಲಿಗೆ ನಾ ಓಡಬಂದಿ” ಅಂದ್ಲು. ಮಾದಮ್ಮ ಅಂಗಂದಾಗ ನಂಗೂ ಕುತೂಹಲವಾಯ್ತು. ನಂಗೇ ಆಯ್ತು ಅಂದಮ್ಯಾಗಿ ಇನ್ನು ಗಂಗಿಗೆ ಆಗದೆ ಇದ್ದದ?- ಅವಳು,

“ಅದೇನ ಮಾದಮ್ಮ, ಬಾಯಿ ಬಿಚ್ಚೇಳು” ಅಂದ್ಲು, ಆಗ ಮಾದಮ್ಮ,

“ಯಾನಂತ ಯೋಳ್ಲವ್ವ, ಗಂಗಿ?...ನಿನ್ನ-ನಿನ್ನ...” ಅಂತಿದ್ದೋಳು ದುಕ್ಕಡಿಸಿದಂಗಾಯ್ತು. ಮಾದಮ್ಮ ದುಕ್ಕಡಿಸಿದ್ದು ಗಂಗಿಗೆ ಗಾಬರಿ ಮಾಡಿರಬೇಕು. ಅವಳು,

“ಅದೇನ ವಸಿ ಓಡದು ಯೋಳವ್ವ-“ ಅಂತ ಗ್ವಾಗರಿದ್ಲು. ಮಾದಮ್ಮ ಮುಂದ್ಕೆ ಆಡ್ದ ಮಾತ ಕ್ಯಾಳಿ ನಂಗೂವೆ ಮಯ್ಯಿ ನಡಗ್ತು. ಯಾಕಾರ ಪಂಚಾತಿಗೆ ಕ್ವಟ್ನೆ ಅನ್ನೂವಂಗಾಯ್ತು. ಅವಳೇನಂದ್ಲು ಗ್ವತ್ತ?

“ನೀನು ಬೋ ಅರಾಮಕೋರಿಯಂತೆ. ನಿನ್ನ ಲಿಪೇರಿ ಮಾಡಕ್ಕೆ ನಿನ್ನ ಚಾವಡಿಮುಂದೆ ತುಂಬಿದ ಸಬೇಲಿ ನಿನ್ನ ಸ್ಯಾಲೆ ಊರಾಕಿ, ಉಟ್ಟಿದ ನಿರ್ವಾಣ ನಿಲ್ಲುಸಿ, ಪಾಂಡವ್ರ ಕಲ್ಲು ಕಂಬಕೆ ಬಿಗಿದು, ಚಡೀಲಿ ವೋಡೀತಾರಂತೆ!...”

ಈ ಮಾತು ಕಿವಿಗೆ ಬಿದ್ದು ಗಂಗಿ ಧರೆ ವಳೀಕೆ ಇಳುದೋಗಿರಬೇಕು. ಅವಳು

“ಯಾರೆ-ಮಾದಮ್ಮ... ನಿಂಗೆ ಇದ್ನೆಲ್ಲ-ಯೋಳಿದೋರು...?” ಅಂತ ತೊದಲಿದ್ಲು. ಅದ್ಕೆ ಮಾದಮ್ಮ,

“ಅಯ್ಯೊ, ಯಾರೇನ ಯೋಳಬೇಕು?- ಆ ನಂಜೇಗೌಡ್ರು, ಗಂಗಪ್ಪನೋರು, ದೊಳ್ಳಪ್ಪನೋರು, ಇಂತಿಂತಾ ಯಜಮಾನ್ರೆಲ್ಲ ನಮ್ಮ ಮಟದ ಅಯ್ಯನೋರತ್ರ ಇವತ್ತು ಸಂದೆ ದನೀಗೆ ಬಂದು, ನಾವು ಯಜಮಾನ್ರೆಲ್ಲ ಸೇರಿ