ವಿಷಯಕ್ಕೆ ಹೋಗು

ಪುಟ:Vyshakha.pdf/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧೪

ವೈಶಾಖ

ತುಂಬಿದ್ದನ್ನು ಈ ಹುಡುಗಿ ಇಷ್ಟು ಶೀಘ್ರವಾಗಿ ಮರೆಯಿತೆ?... ಇಂಥವರಿಗೆ ಉಪಕಾರ ಮಾಡಿದರೆ ಕೊನೆಯಲ್ಲಿ ಸಿಗುವ ಪ್ರತಿಫಲ ಇದೇಯೆ?- ಮನುಷ್ಯ ಸ್ವಭಾವ ವಿಚಿತ್ರವೇ ಸರಿ! ಎಂದು ಅವಳ ಒಳಗು ಸಹತಹಿಸಿತು.

ರುಕ್ಮಿಣಿ ಹತಾಶಳಾದಳು.

ಇನ್ನು ತನ್ನವರು ಎನ್ನುವವರು ಯಾರೂ ಉಳಿದಿಲ್ಲ. ಭೀಮನಳ್ಳಿ ಅಕ್ಕ-ಮೈಗೆ ಸ್ವಸ್ಥವಿಲ್ಲ, ಸದ್ಯಕ್ಕಂತೂ ನಾ ಬರಲಿಕಾಗಲ್ಲ, ಎಂದು ಪತ್ರ ಹಾಕಿದ್ದಾಳೆ. ಅವಳಿಗೆ ನಿಜವಾಗಿಯೂ ಸ್ವಸ್ಥವಿಲ್ಲವೊ, ಅಥವಾ ನಮಗ್ಯಾಕೆ ಈ ಉಪದ್ವ್ಯಾಪವೆನ್ನುವ ಅಸಡ್ಡೆಯೋ? ಅಥವಾ ಅವಳು ನಮ್ಮ ಸಮಾಜಕ್ಕೆ ಹೆದರಿ ಹೀಗೆ ನನ್ನಿಂದ ದೂರವಾಗಿರಬಹುದೆ? – ಅವಳು ಎಷ್ಟಾದರೂ ಹೆಣ್ಣು, ಅವಳಿಗೆ ಧೈರ್ಯ ಸಾಲದು ಎನ್ನೋಣ. ಆದರೆ ನಮ್ಮ ಭಾವನೂ ಅಂಜುಗುಳಿಯಾಗಬೇಕೆ?...

ರುಕ್ಮಿಣಿಗೆ ಈಗ ಯಾವ ದಾರಿಯೂ ಕಾಣುತ್ತಿಲ್ಲ.....

ಈಗ ಅವಳು ಬಂದಿ. ಚಿತ್ರಮೂಲನಕೋಟೆಯೊಳಗೆ ತಾನು ಸಿಕ್ಕಿಕೊಂಡಂತೆ ಆಗಿದೆ. ಇದರಿಂದ ಪರಾಗುವ ಮಾರ್ಗವೇ ಈಗ ಅವಳಿಗೆ ಗೋಚರಿಸುತ್ತಿಲ್ಲ.....

ರುಕ್ಮಿಣಿಯ ಮನಸ್ಸು ಹೀಗೆ ಡೋಲಾಯಮಾನವಾಗಿರುವಾಗ ಸರಸಿಯು ಎಲ್ಲಿಂದಲೊ ಬಿರುಗಾಳಿಯಂತೆ ಒಳೆಗೆ ಬಂದಳು,

“ಅಕ್ಕ, ನಾನು ಪಂಚಾಯ್ತಿ ನೋಡೋಕೆ ಹೋಗಬೇಕು. ಅಲ್ಲಿ ಎಸ್ಟೊಂದು ಜನ ಸೇರಿದಾರೆ ಅಂತ!- ನೀನೂ ಬಾ ಅಕ್ಕ, ಹೋಗೋಣ” ಎಂದು ರುಕ್ಮಿಣಿಯನ್ನು ಕರೆದಳು.

“ಬೇಡಮ್ಮ, ಅಲ್ಲೆಲ್ಲ ಹೋಗಬಾರದು” ಎಂದು ಸರಸಿ ಹೋಗದಿರುವಂತೆ ತಡೆಯಲು ರುಕ್ಮಿಣಿ ಪ್ರಯತ್ನಪಟ್ಟಳು.

“ಯಾಕೆ ಹೋಗಬಾರದು?... ಈಚಿಚೇಗೆ ನೀನು ಹಿಂಗೇನೆ- ಅಳು ಮುಂಜಿ. ಮೊದಲ ಹಂಗೆ ನಗನಗ್ತ ಇರದೆ ಯಾವಾಗ ನೋಡಿದರೂ ಜೋಲುಮುಖ ಹಾಕ್ಕೊಂಡು ಕಣ್ಣಿರು ಸುರಿಸ್ತ ಕೂತಿರೋದು! ನನ್ನ ಕೈಲಿ ಆಗಲ್ಲಮ್ಮ. ನಾ ಹೋಗಲೇ ಬೇಕು.”- ಸರಸಿ ಹಟ ಮಾಡಿದಳು.

“ಬೇಡ ಸರಸಿ, ಅಂಥ ಜಾಗಕ್ಕೆ ನೀನು ಹೋಗಬಾರದು.” ಹೇಳಿ ರುಕ್ಮಿಣಿ ಅವಳನ್ನು ಹಿಡಿಯಹೋದಳು. ಚಿಗರೆಯಂಥ ಬಾಲೆ, ಸರಸಿ. ಅವಳು ರುಕ್ಮಿಣಿಯ ಕೈಗೆ ಸಿಕ್ಕುವಳೆ?- ಬೀದಿ ಬಾಗಿಲಿನ ಮೆಟ್ಟಿಲುಗಳನ್ನು ಎರಡೆರಡಾಗಿ ನೆಗೆಯುತ್ತ, ಚಾವಡಿಯುತ್ತ ದೌಡು ಹೊಡೆದಳು...