೩೨೬
ವೈಶಾಖ
ಲಕ್ಕನ್ನ ಅವನ ಅಯ್ಯ, ದೊಡ್ಡಯ್ಯ ಇಬ್ಬರೂವೆ ಕೂಡಿಕಂಡು ಮೆಲ್ಲಗೆ ನಡಸಿಕೊಂಡೋಗಿ ಗುಡ್ಲಿನೊಳ್ಗೆ ಮಖಾಡೆ ಮನಗಿಸಿದರು. ಸಿವುನಿ ಅವ್ನ ಬೆನ್ನಿನ ಬಾಸುಂಡೆಗಳ್ಗೆ ದ್ಯಾವಾಜಿಯಿಂದ ಎರವಲು ತಂದಿದ್ದ ಕುಡಕೆ ಹರಳೆಣ್ಣೆಗೆ ಬೆಳ್ಳುಗಳ ಅದ್ದಿ ಅದ್ದಿ ನಯ್ವಾಗಿ ಸವರ್ತ ಇದ್ದರೂವೆ ಲಕ್ಕ, ‘ಆಹ್-ಅಯ್ಯೊ-ಅಪ್ಪ.....’ ಎಂದು ನರಳ್ತಾನೆ ಇದ್ದ.
ಕಲ್ಯಾಣಿ ಅರೆನಿದ್ದೇಲಿದ್ದ ಸಿವುನಿಯ ಕೂಸ ತನ್ನ ತೊಡೆ ಮ್ಯಾಲಿಟ್ಟು ತಟ್ತಾ ಇದ್ಲು. ಆಗ ಅವಳ ಕಣ್ಣಿಂದ ಉಕ್ಕಿ ಸುರೀತಿದ್ದ ನೀರಿನ ತೊಟ್ಟು ಕೂಸಿನ ಕೆನ್ನೆ ಮ್ಯಾಲೂ ಬಿದ್ದು, ಅದಕ್ಕೆ ಎಚರಾಗಿ, ಅದು ರಚ್ಚೆ ತೆಗೀತು. ಕಲ್ಯಾಣಿ ಒಡನ್ಯೆ ತನ್ನ ಕಂಬನೀಯ ಸ್ಯಾಲೆ ಸೆರಗ್ನಿಂದ ವತ್ತಿಕೊಂಡು ಕೂಸಿನ ಕೆನ್ನೆ ವರೆಸಿ, ಹುಳ್ಳುಳ್ಳಾಯಿ ಮಾಡಿ ಅದ್ನ ರಮಿಸಿ ಮಲಗಿಸೊ ಯತ್ನದಲ್ಲಿದ್ಲು.
ಕ್ವಾಣೆ ವಳುಗೆ ಲಕ್ಕನ ಅಯ್ಯ, ಸೋರೆಬುಂಡೆಯ ಎತ್ತಿ ಹೀರ್ತ, ತನ್ನ ಅಳಲ ಮರೆಯಕ್ಕೆ ಯತ್ನಿಸಿತಿದ್ದ. ಗುಡ್ಲಿನ ವೊರಗಡೆ ಕುಳವಾಡಿ ಕುಂದೂರಯ್ಯ ಆಕಾಸನೆ ನ್ವಾಡ್ತ, ಯಾವ ಚಲನೆನೂ ಮಾಡ್ದೆ ಕಲ್ಲಾಗಿ ಕುಂತಿದ್ದ.
“ಯಾಕೆ ಕುಳುವಾಡಿ ಹಿಂಗೆ ಬೆಪ್ಪಗಿ ಕುಂತದ್ದ?”- ಅನ್ತಾ ನ್ಯಾಯಕ್ಕೆ ಬಂದಿದ್ದ ಗೋಸುಸಾಬರು, ತಮ್ಮ ಹಳ್ಳಿಗೆ ವೋಂಟಿದ್ದೋರು, ಮನಸ್ಸು ಬದಲ್ಸಿ, ತಮ್ಮ ಸೀನೇಯಿತಗಾರ ಕರಿಯಪ್ಪನೊಡ್ನೆ, ಕುಳವಾಡಿ ಕುಂದೂರಯ್ನ ಮುಂದ್ಕೆ ಬಂದು ನಿಂತಿದ್ರು.
“ಈಗ ಬೆಪ್ಪಾಗಿ ಕುಂತುಗಳದೆ ಇನ್ನೇನು ಉಳಿದದೆ ಗೋಸುಸಾಯೇಬ್ರೆ?”- ಮಾತುಗೊಳು ಅವ್ನ ಬಾಯಿಂದ ವೊರಬರುತ್ತಿದ್ದರೂ ಕುಂದೂರಯ್ಯ ನಿಚ್ಚಲವಾಗಿ ಕುಂತೇ ಇದ್ದ.
ಗೋಸು ಸಾಬರು ಗುಡ್ಲಿನೊಳೀಕೆ ಇಣಿಕೆ ನ್ವಾಡಿದ್ರು.
“ನನ್ನ ದೊಸ್ತ್ ಎಲ್ಲಿ?”- ಕೇಳಿದ್ರು.
ಲಕ್ಕನ ಅಯ್ಯ ಬುಂಡೆ ಹಿಡದಂತ್ಯೆ ಕ್ವಾಣೆಯಿಂದ ಇಣಿಕ್ದ.
ಗೋಸು ಸಾಬರು ರೇಗಿದ್ರು.
“ಅರ್ರೆ, ಬಾರಯ್ಯ ವೊರ್ಗೆ, ನನ್ನ ಮರೆತುಬುಟ್ಟ ಐತಲ್ಲ, ಕುಡಿತಾ ಕುಂತುಬುಟ್ಯ ವಬ್ನೆ!” ಎಂದು ಹಾಸ್ಯದ ಚಟಾಕಿ ಹಾರಿಸಿದ್ರು.
ಅನಂತ್ರ ಸೊಕ ಮಾಡ್ತಿದ್ದ ಕಲ್ಯಾಣಿಯ ಸಮಾದಾನಪಡಿಸ್ತ,
“ಅರೆ, ಈಗ ಏನಾಗೋಯ್ತೂಂತ ಹಿಂಗೆ ಸೋಕ ಮಾಡ್ತಿದ್ದೀ ಥಯ್?.... ಯೇನು ಪರ್ಪಂಚ ಎಲ್ಲ ನಿಮ್ಮ ಈ ದರುಮನಳ್ಳೀಲೆ ಕುಂತೈತ?.... ಪಕ್ಕದಾಗೆ