346
ವೈಶಾಖ
ಮಾಡಿಸಿದ್ದಾಯಿತು. ರುಕ್ಮಿಣಿ ಹೇಗೂ ಕೆಟ್ಟೆ ಎಂದು ಲಕ್ಕನಿರುವಲ್ಲಿಗೇ ತೆರಳಿರಬಹುದೆ?... ಈ ಶಂಕೆಯ ಪರಿಹಾರಾರ್ಥ ಶೋಧನೆಯೂ ನಡೆಯಿತು. ರಂಡೇಗಂಡ ಬೇರೆಲ್ಲಿಗೆ ಕಳುಹಿಸಿ ಬಚ್ಚಿಟ್ಟಿದ್ದಾನೊ?- ಎನ್ನುವ ಅನುಮಾನವೂ ಉಳಿಯದಿರಲಿಲ್ಲ... ಮಾರಿಗುಡಿ ಅಣ್ಣದೀರ ಮೇಲೂ ಕೆಲವರ ಗುಮಾನಿ ಹರಿಯದಿರಲಿಲ್ಲ. ಇವಳು ರಾತ್ರಿ ಮನೆ ಬಿಟ್ಟು ಹೊರಟಾಗ, ಆ ಪಟಿಂಗರ ಕೈಗೆ ಸಿಕ್ಕಿ, ಅವರು ಇವಳನ್ನು ನಂಜೇಗೌಡನಿಗೆ ಒಪ್ಪಿಸಿರಬಹುದೆ?- ಇದು ಸ್ವಯಂ ಕೃಷ್ಣಶಾಸ್ತ್ರಿಗಳ ಸಂದೇಹ... ಅಂತೂ ರುಕ್ಮಿಣಿಯು ರಾತ್ರೋರಾತ್ರಿ ಮನೆಯಿಂದ ನಾಪತ್ತೆಯಾದ ಸುದ್ದಿ ಊರಿನ ಮನೆಮನೆಯಲ್ಲೂ ಕೋಲಾಹಲವನ್ನೆಬ್ಬಿಸಿತ್ತು.
ಮುಂದೆ ಒಂದು ಅಮಾವಾಸ್ಯೆಯ ರಾತ್ರಿ, ಊರಿನಲ್ಲಿ ಯಾರಿಗೊ ಚಿತ್ರ ಮೂಲನ ಕೋಟೆಯ ದಿಸೆಯಿಂದ ಹೆಣ್ಣು ಶೋಕಿಸುವ ದನಿ ಕೇಳಿಬಂದಿತಂತೆ!... ಆ ಸುದ್ದಿ ಬಾಯಿಂದ ಬಾಯಿಗೆ ಹರಡಿ, ಕಾಲಕ್ರಮೇಣ ಅದು ಊರಿನ ತುಂಬ ವ್ಯಾಪಿಸಿಬಿಟ್ಟಿತು- ರುಕ್ಮಿಣಿ ಆ ಚಿತ್ರಮೂಲನ ಕೋಟೇಗೆ ಹೋಗಿ ಸತ್ತಿರಬೇಕು. ಆ ಗೋಳಿನ ರಾಗ ಅವಳದೇ- ಎಂದು ಹಳ್ಳಿಯ ಮಂದಿ ನಂಬಿದರೆ, ತಾವು ತಿಳುವಳಿಕೆಯುಳ್ಳವರು ಎಂದುಕೊಂಡ ಮಂದಿ,
“ಅಯ್ಯೊ, ಹಾಗೆ ಕೊಟೆಯಿಂದ ಕೇಳಿ ಬರ್ತಾ ಇರೋದು ರುಕ್ಮಿಣಿಯ ಧ್ವನಿಯಲ್ಲ- ಅದು ಗುಳ್ಳೆನರಿ ಊಳಿಡ್ತಾ ಇರೋ ಶಬ್ದ!.... ಮೂಢ ಜನಕ್ಕೆ ಬುದ್ಧಿಯಿಲ್ಲ” ಎಂದು ತಮ್ಮ ಬುದ್ಧಿಂತಿಕೆಯನ್ನು ಪ್ರದರ್ಶಿಸುತ್ತಿದ್ದರು.
ಬರಬರುತ್ತಹಳ್ಳಿಯ ಬಹುತೇಕ ಮಂದಿಯ ನಂಬಿಕೇಯೇ ಹೆಚ್ಚು ಕಡಿಮೆ ದರಮನಳ್ಳಿಯ ಸಾರ್ವತ್ರಿಕ ಅಭಿಪ್ರಾಯವಾಗಿ ರೂಪುಗೊಂಡಿತು. ತಾವು ಬುದ್ಧಿವಂತರೆಂದು ತಿಳಿದ ಜನರೂ ಕಾಲಕ್ರಮೇಣ ತಮ್ಮ ಅಭಿಪ್ರಾಯ ತಪ್ಪಿರಬಹುದು ಎಂದು ಶಯಪಡುವಂತಾಯಿತು.
36
ಲಕ್ಕನ ಸಂಪರ್ಕವ ಯಾರೂ ವೋಂದಿರಕ್ಕೇ ಕೂಡ್ದು ಅನ್ನಾ ಊರಿನೋರ್ ಕಟುಗ್ರ ಬಯಿಸ್ಕಾರ ಇದ್ದರೂವೆ, ಕಲ್ಯಾಣಿಯ ತಾಯಿಕರುಳು ತಡೀನಿಲ್ಲ. ಒಂದು ಸಂದೆ ದನೀಗೆ ಏಡು ರಾಗಿರೊಟ್ಟಿ ತಟ್ಟಿದ್ದಲು. ಅವೇಡರ ನಡ್ವೆ ಮಗ ಯಾವಾಗ್ಲೂ ಆಸೆಪಡೋ ಉಳ್ಳಿಜಿನುಕ ಸೇರಿಸಿದ್ಲು. ಅಮ್ಯಾಕೆ ಜನರ ಕಣ್ಣ ತೆಪ್ಪುಸಿ, ಯಾರುಯಾರ್ದೊ ವೊಲದ ತೆವರೀಲಿ ಬೆರಿಕೆ ಸೊಪ್ಪು ಕುಯ್ಯೋಳಂಗೆ ನಟನೆ ಮಡ್ತಾ ಸಾಗಿ ಅತ್ತ ಇತ್ತ ನ್ವಾಡ್ತ ಮೆಲ್ಲಗೆ ಸಕುನಿಕೊಪ್ಲ ವೊಲಗಳ ತಾವಿಕೆ