೩೫೦
ವೈಶಾಖ
“ಬೀಳದೇ ಯೇಣವ್ವ-ಆಗ್ಲೆ ಸುತ್ತ ಅತ್ತು ಹಳ್ಳಿಗೂ ಟಾಂ ಟಾಂ ಆಗದೆ.”
“ಯೇನಾರ ಆಗ್ಲಿ. ಆ ಬ್ರಾಂಬರು-ತಲೆ ಬೋಳುಸ್ತೀವಿ, ಊರು ಬುಟ್ಟೋಡುಸ್ತೀವಿ, ಅನ್ನೋತಂಕ ವೋಗ್ಬಾರದಾಗಿತ್ತು... ಬೊಸರಿ ಎಂಗಸು. ಅವುಳ ಆ ತೊರ ಗೋಳುಕಿಚ್ಚು ಉಯ್ಯಿಕೊಬ್ಯಾಡದೂಂತ ಅವರಿಗೆ ಅನ್ನುಸಬ್ಯಾಡ್ದ?... ಮ್ವಾಡರು, ಮ್ವಾಡರು ಅಂತ ನಮ್ಮ ಕರೀತಾರಲ್ಲ, ಅವುರಿಗಿಂತ ನಾನು ಏಟೊ ವಾಸಿ ಕನ, ಬುಡು.”
“ರುಕ್ಮಿಣವ್ವ ಚಿತ್ರಮೂಲನಕ್ವಾಟೆಗೋಗಿ ಸತ್ತರು ಅಂತಾರಲ್ಲವ್ವ, ನಿಜವಾ?”
“ನಿಜ ಇದ್ರು ಇರಬೌದು. ವೋದ ಅಮಾಸಿಂದ, ಆ ಕ್ವಾಟೆ ಕಡಿಂದ ರಾತ್ರಿನಾಗ ಎಂಗಸು ಸೋಕ ಮಾಡಿದಂಗೇ ನಂಮೂರಿಗೆ ಕೇಳುಸ್ತಾ ಅದೆ~… ಎಲ್ಲಾರು ಅಂಗೆ ಯೋಳಕ್ಕೆ’ ಮುಟ್ಟಿಕಂಡಮ್ಯಲೆ, ನನೂವೆ ನಾಕೈದು ಜಿನದಿಂದ ಒಂದೇ ಸಮಕೆ ಆ ಅಳೋ ಸೊಲ್ಲ ಕೇಳ್ತಾನೆ ಇವ್ನಿ. ಸಮರಾತ್ರಿಗೆ ಸುರು ಆಯ್ತದೆ. ನ್ವಡು. ಅದು ಬೆಳಕು ಅರಿಯೋ ವರ್ಗೂವೆ ನಿಲ್ಲಕ್ಕೇ ಇಲ್ಲ!...”
“ಒಳ್ಳೆ ಇಚಿತ್ರ ಕನವ್ವ, ಇದು ನಿಮ್ಮೂರಿಗೆ ಮಾತ್ರ ಎಂಗಸು ಅಳೋ ಅಂಗೆ ಕ್ಯಾಳೋದು. ಇಲ್ಲಿ ನಮ್ಮ ಸಕುನಿಕೊಪ್ಪಲೋರು ಯರಿಗೂವೆ ಅಂಗೆ ಕ್ಯಾಳಿಸಕ್ಕೇ ಇಲ್ಲ. ಇಲ್ಲಿಯೊರಿಗೆಲ್ಲ ಬರಿ ಗುಳ್ಳೆಲಕ್ಕ ಊಳಿಟ್ಟಂಗೇ ಕ್ಯಾಳೋದು!... ಈ ಸಕುನಿಕೊಲ್ಲಲೂವೆ ನಮ್ಮ ದರುಮನಳ್ಳಿ ಅಂಗೆ ಬೆಟ್ಟದ ಬುಡದಲ್ಲೆ ಅಲ್ವ ಇರಾದು?- ಇಲ್ಲಿಗೂ ಯಾಕೆ ಎಂಗಸಿನ ಅಳುವಿನಂಗೆ ಕ್ಯಳಿಸಬ್ಯಾಡದು... ಅದ್ಯಾಕೆ ನಿಮಗೊಂತರ ಸೊಲ್ಲು, ಇಲ್ಲಿಯೋರಿಗೇ ಒಂದು ತರ ಸೊಲ್ಲು ಕ್ಯಾಳಿಸಬೇಕು?...
“ನಂಗೆ ತಿಳೀದು ಕನಪ್ಪ-ಈ ಇಚಿತ್ರ!... ಇದರಿಂದ ನಮ್ಮೂರಿಗೆ ಮತ್ರ ಯೇನೊ ಗಂಡಾಂತ್ರ ಕಾದದೆ ಅನ್ನಾದೇನೊ ಕಾತ್ರಿ- ಇದು ಈಚೀಚ್ಗೆ ಊರಿನಾಗೆ ಸಾಮಾನ್ನವಾಗಿ ಕಡೀತಿರೋ ವಾಕ್ಸ!”
ಆಗ್ಲೆ ವೊತ್ತು ಮೀರಿತ್ತು. ಅವ್ವ ವೊತ್ತಾಗಿ ಊರಿಗೆ ವೋದರೆ ಯಾರಿಗಾದರೂ ಸಂಸಯ ಬರಬೌದು, ಅಂತ.
“ಏಳವ್ವ, ಒಂದು ಮಾಡಕ್ಕೊಗಿ ಇನ್ನೊಂದಾದಾತು!... ನೀನು ನಂಗೆ ರೊಟ್ಟಿ ತಿನ್ನುಸಕ್ಕೆ ಬಂದು, ನನ್ನ ಜ್ವತ್ಗೆ ನೀನನೂವೆ ಗಡೀಪಾರು ಮಾಡಾರು.....” ಅಂದು, ಲಕ್ಕ ಎದ್ದ.
“ಮಾಡಿದ್ರೆ ಮತ್ತೂ ವಳ್ಳೀದೆ. ನಿನ್ನ ಜ್ವತ್ಗೆ ನಾನೂ ಬಂದು ಇದ್ದುಕೊತ್ತೀನಿ. ಅದುಕ್ಯಾಕೆ ಚಿಂತೆ?”
ಕತ್ತಿಸ್ದ ಲಾಟೀನ ಕೈಗೆತ್ತಿಗೊತ್ತ,