೩೫೧
ಸಮಗ್ರ ಕಾದಂಬರಿಗಳು
“ಒಳ್ಳೆ ಮಾತ್ನೆ ಯೋಳ್ದೆ ನೀನು... ಅಲ್ಲ, ನೀನು ಊರು ಬುಟ್ಟು ಬಂದರೆ, ಅಲ್ಲಿ ಸಿವುನಿ ಗತಿಯೇನು? ಆ ಕಂದನ ಗತಿಯೇನು? ವಸಿ ಯೋಚ್ಣೆ ಮಾಡು. ಆಮ್ಯಾಕೆ ಅಯ್ಯ ಗುಡ್ಲಿಗೆ ಯಾವತ್ತೊ ಒಂಜಿನ ಗ್ಯಾನ ಬಂದಂಗೆ ಬತ್ತಾ ಅವ್ನೆ ಅಂತಿದ್ದಿ. ನೀ ಇಲ್ಲದೇ ಇದ್ರೆ, ಅದೂ ತೆಪ್ಪೋಗಿ-ಅಯ್ಯ ಪುರ್ತಾ ಆಲಾಗಬೌದು!...” ಅಂದು ಕರ್ತವ್ಯದ ಕಡ್ಗೆ ಅವ್ವನ ಎಚ್ಚರಿಸ್ದ ಲಕ್ಕ.
“ನೀ ಯೋಳೋದು ಸರಿಕನೊ. ಏಟೇ ಆದ್ರೂ ನಂದು ಎಂಗಸು ಬುದ್ಧಿ. ನಮ್ಮ ನೆರಳು ಮುಂದಕೆ ನಾವು ನ್ವಾಡನಾರೊ...”
ಊರಿನ ಕೆರೆಯ ಕೋಡಿ ಸಮೀಪಿಸುವವರೆಗೂ ಅವರಿಬ್ಬರ ನಡುವೆ ಇಂಥವೇ ಮತುಗಳು ಲಕ್ಕ ಅಲ್ಲಿ ನಿಂತು,
“ಅವ್ವ, ಇನ್ನು ನೀನು ವೊಂಡು, ಇನ್ನುಮುಂದುಕೆ ನಾ ಬರಾದು ತರವಲ್ಲ... ಕತ್ತಲೆ ಆಗ್ಲೆ ಗಕುಂ ಅನ್ನಕ್ಕೆ ಅತ್ತದ. ದಾರೀಲಿ ಹೊಳ ಹುಪ್ಪಟೆ ಹರೀತಿರ್ತವೆ. ಎಚ್ಚರದಿಂದ ಎಜ್ಜೆ ಹಾಕ್ಕಂಡೋಗು...ನಿಂಗೊ ಮೊದ್ಲೇ ಕಣ್ಣು ಮಂಜು. ಆಮ್ಯಾಕೆ ನೀ ಇಂಗೇ ಪದೇ ಪದೇ ನಂಗೆ ರೊಟ್ಟಿ ತಿನ್ನುಸ್ತೀನಿಂತ ಇಲ್ಲಿಗೆ ಬರೊ ಸಾಸ ಮಾಡಬ್ಯಾಡ, ಉಸಾರು.”
ಕಲ್ಯಾಣಿ ಲಕ್ಕನ ಎಚ್ಚರಿಕೆಗೆ ಸೊಪಪ್ಪಸು ಹಾಕಲಿಲ್ಲ. ಮುಂದಿನ ದಿನಗಳಲ್ಲಿ ಅವಳು ರೊಟಿಗಳನ್ನ ತನ್ನ ನೆರಿಗೆ ಒಳಗೆ ಸಿಕ್ಕಿಸಿ ತರೋದು ತೆಪ್ನಿಲ್ಲ. ಇನ್ನುಮ್ಯಾಗೆ ತರಬ್ಯಾಡ ಕನವ್ವ, ಅಂತ ಲಕ್ಕ ಯೋಳೋದು ತೆಪ್ನಿಲ್ಲ!
ಕಲ್ಯಾಣಿ ಆ ರಾತ್ರಿ ಗುಡ್ಲಿಗೆ ಬಂದೊಡನೆಯೇ, ಸಿವುನಿ ಲಕ್ಕನ ಯೋಗಕ್ಷೇಮದ ವಿಚಾರವಾಗಿ ಕೇಳಿದ್ದಳು. ಆಗ ಕಲ್ಯಾಣಿ ತಾನು ಹೋಗಿಬಂದ ವಿವರಗಳನ್ನೆಲ್ಲ ಸಾಂಗವಾಗಿ ತಿಳಿಸಿ,
“ಆ ಇಚಾರ ಹೆಂಗಾರ ಇರ್ಲಿ, ಆದ್ರೆ ನಮ್ಮ ಲಕ್ಕ ಒಬ್ಬನೇ ಆ ಗುಡ್ಲ ಎತ್ತಿರಾದು ಯಾರಾರು ತಾರೀಪು ಮಾಡಬೇಕು, ನ್ವಾಡೇ ಸಿವುನಿ..... ಆ ಗುಡ್ಲ ಏಳಿಸೋವಗ, ಅವನೊಬ್ಬಂದೆ ಕೇಮೆ.... ದೊಂಬನೂ ಅವನೆ, ಧೂಳು ಹ್ವಡೆಯೋನು ಅವನೆ, ಗಣೆ ಎತ್ತೋನೂ ಅವನೆ....”
“ನೀ ಹ್ಯಾಳಾದ ಕ್ಯಾಳ್ತದ್ದರೆ, ನಂಗೂ ಆಸೆ ಆಯ್ತದೆ. ನಾನೂವೆ ಹ್ವಾಗಿ ಅಣ್ನ ನ್ವಾಡಿಕಂಬರಾನೆ ಅಂತ! ಹ್ವಾಗಲವ್ವ?”
“ಅಯ್ಯಯ್ಯೊ ಬ್ಯಾಡ, ಬ್ಯಡ..... ಪುಣಾತಿಗಿತ್ತಿ, ಹಂಗೆಲ್ಲಾರ ದುಡುಕಿ ಬುಟ್ಟೀಯೆ!... ಈ ಊರಿನ ಉತ್ಪತ್ತಗರ ಕೈಗೆ ಸಿಕ್ಕಂಡರೆ, ಮುಗುದೋಯ್ತು ಕತೆ! ನಿನ್ನೂವೆ ಇಲ್ಲಿಂದ ಅಟ್ಟದೆ ಬುಡಕ್ಕಿಲ್ಲ....”