ವಿಷಯಕ್ಕೆ ಹೋಗು

ಪುಟ:Vyshakha.pdf/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫೬

ವೈಶಾಖ

ಕಣ್ಣೀರು ಸುರುಸ್ತಾ ನಿಂತ್ಲು.

ನಂಜೇಗೌಡ್ರು ಲಕ್ಕ ತನ್ನ ಅವ್ವಂಗೆ ಕಲ್ಲುಸ್ಯಾವೆ ಮಾಡೋದ ನ್ವಾಡಕ್ಕೆ ಬಂದೋರಲ್ಲ. ಪಾರೆಸ್ಟ್‌ ಗಾರ್ಡು ರಾಮಯ್ಯ ತನ್ನ ಮಾಮೂಲು ಸರ್ಯಾಗಿ ಬಟವಾಡ ಆಗನಿಲ್ಲ ಅಂತ, ಕಾಡ್ನಲ್ಲಿ ಕದ್ದು ಗಂಧದ ಮರಗಳ ಕಡಿಯಕ್ಕೆ ಅವಕಾಸ ಕ್ವಟ್ಟಿರನಿಲ್ಲ. ಅದಕ್ಕೇನೆ ಊರ್ನಲ್ಲಿ ರಸಕವಳ ಮೆದ್ದಿಸಿ, ಕಾಂಚಣ ಏನು ಕ್ವಡಬೇಕು ಅನ್ನಾದು ಇನ್ನೂ ಬಗೆ ಅರೀದೆ, ಅದರ ತಿರ್ಮಾನಕ್ಕಾಗಿ ತಮ್ಮ ಮೊಲಕ್ಕೆ ಬಂದು, ಗಾರ್ಡಿನ ಜ್ವತ್ಗೆ ಚರ್ಚೆ ಮಾಡ್ತ, ಬ್ಯಾಲದ ಮರದ ಕೆಳ್ಗೆ ಕುಂತರು.

ಕಲ್ಲು ಸ್ಯವೆ ಮಾಡ್ವಾಗ ಲಕ್ಕ ದೂರದ ವೊಲದಲ್ಲಿ ತನ್ನ ತಂಗಿ ಸಿವುನಿ ಮೊಗ ತತ್ತಿಗಂಡು ನಿಂತಿದ್ದ ನ್ವಡಿದ್ರೂವೆ, ನಂಜೇಗೌಡ್ರು ಸಮಾಪದಲ್ಲೆ ಕುಂತಿದ್ರಿಂದ, ಅವಳತ್ರಕ್ಕೆ ತಾನು ವ್ವಾಗೋದಾಗ್ಲಿ, ತನ್ನತ್ರಕ್ಕೆ ಅವಳು ಬರೋದಾಗ್ಲಿ ಸಧ್ಯಾನೇ ಇರನಿಲ್ಲ... “ಇವರ ಮನೆ ಕಿಸಾಂತರಾಗ, ನನ್ನ ಸೊಂತ ತಂಗಿ ಕುಟ್ಟು ಮಾತಾಡಕ್ಕೆ ಆಸ್ಪದ ಕ್ವಡಲ್ಲರಲ್ಲ! ಅಂತ ಕ್ಯಾಣದಿಂದ ಗೊಣಗ್ತ ಅವನು ಮಾಡ್ತಿದ್ದ ಕಲ್ಲುಸ್ಯಾವೆ ತನ್ನವ್ವನ ಮೊಕ ಮುಚ್ಚಿದಮ್ಯಾಲೆ, ತಲೆಗೆ ದಪ್ಪ ಮರದ ಐದಾರು ತುಂಡು ಬಡಿಗೆಗಳ್ನ ಕ್ವಟ್ಟು, ಅದರ ಮ್ಯಲೆ ಒಂದು ದಪ್ಪಾನೆ ಬುಂಡುಗಲ್ಲ ಯೇರ್ದ.

38

ಕುಂಬಾರಗೇರಿಯಲ್ಲಿ ಮರಿಸೆಟ್ಟಿ ಬೆಳಿಗ್ಗೆ ಎದ್ದವನೆ, ತನ್ನ ಎಡತಿ ಜವನಿಯನ್ನು ಕರೆದು, “ಜವನಿ, ಇವೊತ್ತು ಕಂಪಲಾಪುರದ ಸಂತೆಗೆ ನಾ ವೋಗಕ್ಕಿಲ್ಲ” ಎಂದು ತಿಳಿಸಿದ.

“ಯಾಕೆ?- ನೆನ್ನೆ ಹೇಳ್ತಿದ್ರೆ. ಕಂಪಲಪುರದ ಸಂತ್ಗೆ ವೊಸ ಮಡಕೆಗಳ್ನ ತಕ್ಕೊಂಡೋಯ್ತೀನಿ ಅಂತಾವ?” ಜವನಿ ಮೂಗಿನ ತುದಿಗೆ ಬೆರಳಿಟ್ಟುಕೇಳಿದ್ದಳು.

“ನಾತ್ರ ವೊಯ್ತಿನಿ ಅಂದಿ. ಆದ್ರೆ ಈಗ್ಯಾಕೊ ಮಯ್ಯಿನಲ್ಲಿ ವೈನ ಕಾಣ್ತ ಇಲ್ಲ...”

“ಅಂದ್ರೆ, ಜರಗಿರ ಬಂದಿದ್ದತ?”

“ಇರಬೌದು, ಯಾಕೋ ಎದ್ದೇನಿಂದ ಬೋ ಸುಸ್ತು.”

“ಊ. ಜರ ಬಂದಿರೋವಂಗದೆ. ನೀವು ಸುಮ್ಮಕೆ ಅಟ್ಟೀಲೆ ಮನಕ್ಕನ್ನಿ. ನಾನು ಮಡಿಕೆಗಳ ಕಂಪಲಪುರದ ಸಂತ್ಗೆ ತಕ್ಕಂಡೋಗಿ ಮಾರಿಕೊಂಬತ್ತೀನಿ”